AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spinach Pakoda: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ

ಮಳೆಗಾಲದಲ್ಲಿ ಕುಟುಂಬದೊಂದಿಗೆ ಸಂಜೆಯ ವಾತಾವರಣವನ್ನು ಆನಂದಿಸಲು, ಬಿಸಿಬಿಸಿಯಾಗಿ ಏನಾದರೂ ತಿನ್ನಲು ಮನೆಯಲ್ಲಿ ಪಾಲಕ್ ಪಕೋಡಾಗಳನ್ನು ತಯಾರಿಸಿ. ಇಲ್ಲಿದೆ ಸುಲಭ ಪಾಕವಿಧಾನ.

Spinach Pakoda: ಸಂಜೆ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕಾ? ಹಾಗಾದರೆ ಪಾಲಕ್ ಪಕೋಡ ಉತ್ತಮ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 21, 2023 | 6:07 PM

Share

ಈ ಸಮಯದಲ್ಲಿ ಮಳೆ, ಸ್ವಲ್ಪ ಬಿಸಿಲು ಹೀಗೆ ದಿನ ಮುಗಿಯುವುದು ಗೊತ್ತೇ ಆಗುವುದಿಲ್ಲ. ಇನ್ನು ಸಂಜೆ ಸಮಯದಲ್ಲಿ ಹೆಚ್ಚಾಗಿ ಮೋಡ ಕವಿದ ತುಂತುರು ಮಳೆಯ ಸೊಬಗನ್ನು ನೋಡುವುದೇ ಚಂದ. ಅದೊಂದು ರೀತಿ, ಭೂಮಿಯನ್ನು ಅಲಂಕರಿಸದಂತೆ ಕಾಣುತ್ತದೆ. ಇನ್ನು ಸಂಜೆ ಮಳೆ ಬಂದಾಗ, ಕೆಲವು ಬಾಯಿಯ ರುಚಿಗೆ ಪಕೋಡಗಳನ್ನು ತಿನ್ನಬೇಕೆನಿಸುವುದರಲ್ಲಿ ತಪ್ಪೇನಿಲ್ಲ. ಅದರಲ್ಲಿಯೂ ಮಾನ್ಸೂನ್​​​ನಲ್ಲಿ ಸಂಜೆ ಸಮಯ ಅದ್ಭುತ ತಿಂಡಿಗಳನ್ನು ತಿನ್ನಲು ಸೂಕ್ತವಾದ ಸಮಯವಾಗಿದೆ. ಮನೆಯಲ್ಲಿ ಸುಲಭವಾಗಿ ತಯಾರಿಸಿ, ಕುಟುಂಬದೊಂದಿಗೆ ಆನಂದಿಸಬಹುದು. ಆದರೆ ಎಣ್ಣೆ ಆಹಾರ ತಿನ್ನುವುದರಿಂದ ಕ್ಯಾಲೋರಿ ಬಗ್ಗೆ ಯೋಚನೆ ಮಾಡುವವರಿಗಾಗಿ ಆರೋಗ್ಯಕ್ಕೆ ಒಳ್ಳೆಯದಾಗಿರುವ ತಿಂಡಿಯ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಹಾಗಾಗಿ ಯಾವುದೇ ಯೋಚನೆ ಮಾಡದೆ ಪಾಲಕ್ ಸೊಪ್ಪಿನ ಪಕೋಡಗಳನ್ನು ಮಾಡಿ ತಿನ್ನಬಹುದು. ಇದರಿಂದ ತಿಂಡಿ ರುಚಿಯಾಗಿಯೂ ಆರೋಗ್ಯಕರವಾಗಿಯೂ ಇರುತ್ತದೆ.

ಈ ಅದ್ಭುತ ಮಾನ್ಸೂನ್ ಸಂಜೆಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಬಹುದಾದ ಪಾಲಕ್ ಪಕೋಡಗಳನ್ನು ಮನೆಯಲ್ಲಿ ತಯಾರಿಸುವ ಸುಲಭ ಮತ್ತು ಸರಳ ಪಾಕವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿಗಳು:

-10-12 ಪಾಲಕ್ ಎಲೆಗಳು

-1 ಕಪ್ ಕಡಲೆ ಹಿಟ್ಟು

-1/4 ಟೀ ಸ್ಪೂನ್ ಕ್ಯಾರಮ್ ಬೀಜಗಳು (ಅಜ್ವೈನ್)

-1/4 ಟೀ ಸ್ಪೂನ್ ಅರಿಶಿನ ಪುಡಿ

-1/4 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ(ಖಾರ ಪುಡಿ)

-1/4 ಟೀ ಸ್ಪೂನ್ ಇಂಗು (ಅಸಾಫೋಟಿಡಾ )

-ರುಚಿಗೆ ತಕ್ಕಷ್ಟು ಉಪ್ಪು

-ಡೀಪ್ ಫ್ರೈ ಮಾಡಲು ಎಣ್ಣೆ

-ಬಡಿಸಲು ಖರ್ಜೂರ ಅಥವಾ ಹುಣಸೆ ಚಟ್ನಿ (ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಬಹುದು)

ಮಾಡುವ ವಿಧಾನ:

ಒಂದು ದೊಡ್ಡ ಬಟ್ಟಲಿನಲ್ಲಿ ಅಂದರೆ ಕಲಸಿಕೊಳ್ಳಲು ಅನುಕೂಲವಾಗುವಂತ ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಕ್ಯಾರಂ ಬೀಜಗಳು (ಅಜ್ವೈನ್), ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಸಾಸಿವೆ, ಸಾಕಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ, ನಿಧಾನವಾಗಿ ನೀರನ್ನು ಕೂಡ ಸೇರಿಸಿಕೊಳ್ಳಿ (ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ನೀರು ಬೆರಸಿ) ನಯವಾದ ಹಿಟ್ಟನ್ನು ತಯಾರಿ ಮಾಡಲು ಎಲ್ಲವನ್ನೂ ಒಟ್ಟಿಗೆ ಬೆರೆಸಬೇಕು. ಇನ್ನೊಂದು ಕಡಾಯಿ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ಬಳಿಕ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಪ್ರತಿ ಪಾಲಕ್ ಎಲೆಗಳನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಗರಿಗರಿಯಾಗಿ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಬಳಿಕ, ಚಟ್ನಿ ಅಥವಾ ಖರ್ಜೂರ ಮತ್ತು ಹುಣಸೆ ಚಟ್ನಿಯೊಂದಿಗೆ ಬಡಿಸಬೇಕು. ತಿನ್ನಲೂ, ಆರೋಗ್ಯಕ್ಕೂ ಉತ್ತಮ ತಿಂಡಿಯಾಗಿದೆ.

ಇದನ್ನೂ ಓದಿ:  ಮನೆಯಲ್ಲಿಯೇ ಗರಿ ಗರಿಯಾಗಿ ಅಕ್ಕಿ ಪಕೋಡ ತಯಾರಿಸಿ

ಇದರಿಂದ ಪ್ರಯೋಜನಗಳೇನು?

ಪಾಲಕ್ ತಿನ್ನುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವು ಹಸಿರಸಿರಾಗಿ ಒಳ್ಳೆಯ ಗುಣಗಳಿಂದ ತುಂಬಿರುತ್ತವೆ ಮತ್ತು ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಜೊತೆಗೆ ಹಸಿವನ್ನು ನಿಗ್ರಹಿಸಲು ಮತ್ತು ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಪಾಲಕ್ ಸೊಪ್ಪಿನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

(ಪಾಕವಿಧಾನ: ಸಂಜೀವ್ ಕಪೂರ್ ಬಾಣಸಿಗ)

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:01 pm, Fri, 21 July 23

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ