ವ್ಯಾಲೆಂಟೈನ್ಸ್ ಡೇ ಪ್ರೇಮಿಗಳಿಗೆ ಹಬ್ಬವೇ ಸರಿ. ತಮ್ಮನ್ನು ಇಷ್ಟ ಪಡುವ ಮನಸ್ಸುಗಳನ್ನು ಖುಷಿ ಪಡಿಸಲು ಯುವಕ ಯುವತಿಯರು ಕಾಯುತ್ತಿರುತ್ತಾರೆ. ಹೆಚ್ಚಿನವರು ದುಬಾರಿ ಬೆಲೆಯ ಗಿಫ್ಟ್, ಡಿನ್ನರ್, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡಲು ಬಯಸುತ್ತಾರೆ. ಈ ಬಾರಿಯ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಬೇಕು ಎಂದುಕೊಂಡವರು ಈಗಾಗಲೇ ಕೆಲವು ಪ್ಲಾನ್ ಮಾಡಿಕೊಂಡಿರಬಹುದು. ಇನ್ನು ಕೆಲವರು ಟ್ರಿಪ್ ಹೋಗಬೇಕೆಂದು ಯೋಜನೆ ಹಾಕಿಕೊಂಡಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡುವುದು ಬೆಸ್ಟ್. ಈ ರೋಮ್ಯಾಂಟಿಕ್ ಸ್ಥಳಗಳು ಪ್ರೇಮಿಗಳಿಗೆ ಅಥವಾ ಸಂಗಾತಿಗಳಿಗೆ ರೋಮ್ಯಾಂಟಿಕ್ ಅನುಭವವನ್ನು ತಂದು ಕೊಡುತ್ತದೆ.
* ಮನಾಲಿ : ಗಿರಿಧಾಮಗಳನ್ನು ಇಷ್ಟಪಡುವ ಜೋಡಿಗಳಿಗೆ ಈ ಮನಾಲಿಯು ಬೆಸ್ಟ್ ಸ್ಥಳ ಎನ್ನಬಹುದು. ತಮ್ಮ ಸಂಗಾತಿ ಅಥವಾ ಪ್ರೇಯಸಿ ಜೊತೆಗೆ ಪ್ರೇಮಿಗಳ ದಿನವನ್ನು ಈ ಸ್ಥಳಕ್ಕೆ ಭೇಟಿ ಕೊಟ್ಟರೆ ಒಂದಷ್ಟು ಸುಂದರ ಕ್ಷಣಗಳನ್ನು ಜೊತೆಯಾಗಿ ಕಳೆಯಬಹುದು. ಇಲ್ಲಿ ಪ್ಯಾರಾಡಿಂಗ್, ಟ್ರೆಕ್ಕಿಂಗ್ ಸೇರಿದಂತೆ ಎಲ್ಲಾ ಚಟುವಟಿಕೆಗಳು ಲಭ್ಯವಿದ್ದು, ಈ ಸ್ಥಳವು ಪ್ರೇಮಿಗಳ ದಿನವನ್ನು ಮತ್ತಷ್ಟು ರೋಮ್ಯಾಂಟಿಕ್ ಆಗಿ ಕಳೆಯಬಹುದಾಗಿದೆ.
* ಮುನ್ನಾರ್ : ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ 1600 ಮೀ. ಗಳಷ್ಟು ಎತ್ತರದಲ್ಲಿದೆ. ಪ್ರಕೃತಿಯ ಸೌಂದರ್ಯದಿಂದ ಕೂಡಿರುವ ಈ ಸ್ಥಳಕ್ಕೆ ತಮ್ಮ ಪ್ರೇಮಿ ಅಥವಾ ಸಂಗಾತಿಯೊಂದಿಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.
* ಊಟಿ : ತಮಿಳುನಾಡಿನಲ್ಲಿರುವ ಈ ಊಟಿಯು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಮದುವೆಯಾದ ಜೋಡಿಗಳು ಹನಿಮೂನ್ ಗೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಮೊದಲ ಆಯ್ಕೆ ಈ ಊಟಿಯಾಗಿರುತ್ತದೆ. ತಂಪಾದ ವಾತಾವರಣ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನೂ ಆಕರ್ಷಿಸುವ ಕಾರಣ ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿ ಅಥವಾ ಸಂಗಾತಿಯ ಜೊತೆಗೆ ಟ್ರಿಪ್ ಹೋಗುವುದಿದ್ದರೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಪ್ರಪೋಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?
*ಗೋವಾ : ಟ್ರಿಪ್ ಎಂದು ಬಂದರೆ ಪ್ರತಿಯೊಬ್ಬರದ್ದು ಮೊದಲ ಆಯ್ಕೆ ಗೋವಾ ಆಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಬೀಚ್ ಗಳಿದ್ದು, ಪ್ರವಾಸಿ ತಾಣಗಳು ಸಾಕಷ್ಟು ಇವೆ. ಆದರೆ ನಿಮ್ಮ ಸಂಗಾತಿ ಅಥವಾ ಪ್ರೇಯಸಿ ಬೀಚ್ ಪ್ರಿಯರಾಗಿದ್ದರೆ ಗೋವಾಗೆ ಟ್ರಿಪ್ ಹೋದರೆ ನೂರಕ್ಕೆ ನೂರರಷ್ಟು ಎಂಜಾಯ್ ಮೆಂಟ್ ಸಿಗುತ್ತದೆ.
*ನೈನಿತಾಲ್ : ಉತ್ತರಾಖಂಡದ ಕುಮಾವೂನ್ ಪ್ರದೇಶದ ನೈನಿತಾಲ್ ಸ್ಥಳವು ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ನಂದಾ ದೇವಿ ರಾಷ್ಟ್ರೀಯ ಉದ್ಯಾನವನ, ಬಿನ್ಸಾರ್ ವನ್ಯಜೀವಿ ಧಾಮ ಮತ್ತು ಕೋರ್ಬೆಟ್ ಸೇರಿದಂತೆ ಸಾಕಷ್ಟು ಉದ್ಯಾನವನಗಳಿವೆ. ಪ್ರಕೃತಿ ಪ್ರೇಮಿಗಳಿಗೆ ಒಂದು ಸೂಕ್ತವಾದ ಸ್ಥಳವಾಗಿದ್ದು ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿ ಅಥವಾ ಸಂಗಾತಿಯೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ, ಆ ದಿನವನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Tue, 6 February 24