Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ

ಎಳನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಪ್ರತೀ ದಿನ ಎಳನೀರು ಕುಡಿಯಲು ಯಾರಿಗೆ ತಾನೇ ಇಷ್ಟವಾಗುತ್ತೇ ಹೇಳಿ. ಆದ್ದರಿಂದ ಈ ಬೇಸಿಎಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ಸವಿಯಿರಿ.

Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ
ಎಳನೀರು ಹಲ್ವಾ ರೆಸಿಪಿ
Image Credit source: Manjaly Halwa

Updated on: Mar 23, 2023 | 7:00 AM

ಬೇಸಿಗೆ ಆರಂಭವಾಗಿದೆ, ಈ ಸಮಯದಲ್ಲಿ ನಿಮ್ಮ ದೇಹವನ್ನು ತೇವಾಂಶ ಕಳೆದುಕೊಳ್ಳದಂತೆ ಕಾಪಾಡುವುದು ಅಗತ್ಯವಾಗಿದೆ. ಆದ್ದರಿಂದ ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಎಳನೀರು ಉತ್ತಮ ಆಯ್ಕೆಯಾಗಿದೆ. ಎಳನೀರು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಆದರೆ ಪ್ರತೀ ದಿನ ಎಳನೀರು ಕುಡಿಯಲು ಯಾರಿಗೆ ತಾನೇ ಇಷ್ಟವಾಗುತ್ತೇ ಹೇಳಿ. ಆದ್ದರಿಂದ ಈ ಬೇಸಿಎಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ಸವಿಯಿರಿ. ಹಲ್ವಾ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ.
ಇತ್ತೀಚೆಗಷ್ಟೇ ಭಟ್​ ಆ್ಯಂಡ್​​ ಭಟ್​​ ಫೇಸ್​ ಬುಕ್​​ ಪೇಜ್​ನಲ್ಲಿ ಈ ಆರೋಗ್ಯಕರ ಎಳನೀರು ಹಲ್ವಾ ಮಾಡುವ ಪಾಕ ವಿಧಾನವನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ ನೋಡಿ.

ಎಳನೀರು ಹಲ್ವಾ ರೆಸಿಪಿ

ಬೇಕಾಗುವ ಪದಾರ್ಥಗಳು:

  • 1 ಎಳನೀರು
  • 3 ಲೋಟ ಸಕ್ಕರೆ
  • 1 ಲೋಟ ಜೋಳದ ಹಿಟ್ಟು
  • 2 ಲೋಟ ನೀರು
  • 4 ಚಮಚ ತುಪ್ಪ
  • 1/2 ಕಪ್​​​ ಹಾಲಿನಲ್ಲಿ ಬೆರೆಸಿದ ಕೇಸರಿ
  • 1/2 ಕಪ್​​​ ತುಪ್ಪದಲ್ಲಿ ಹುರಿದ ಗೇರುಬೀಜ

ಇದನ್ನೂ ಓದಿ: ಉಳಿದಿರುವ ಆಲೂ ಭಾಜಿಯಿಂದ ಸುಲಭವಾಗಿ ತಯಾರಿಸಬಹುದಾದ ಪಾಕವಿಧಾನ ಇಲ್ಲಿದೆ

ಎಳನೀರು ಹಲ್ವಾ ಮಾಡುವ ವಿಧಾನ:

ಮೊದಲಿಗೆ ಒಂದು ಎಳನೀರು ಮತ್ತು ಅದರ ಗಂಜಿಯನ್ನು ತೆಗೆದುಕೊಂಡು ಪಾತ್ರೆಗೆ ಹಾಕಿಡಿ. ನಂತರ ಎಳನೀರು ಸೇರಿಸಿ ಅದರ ಗಂಜಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಈಗ ಸಕ್ಕರೆಯನ್ನು ಸೇರಿಸಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಈಗಾಗಲೇ ನುಣ್ಣಗೆ ರುಬ್ಬಿ ಇಟ್ಟ ಈ ಎಳನೀರಿನ ಹಿಟ್ಟನ್ನು ಕಾಯಿಸಿ. ನಂತರ ಒಂದು ಚಿಕ್ಕ ಪಾತ್ರೆಯಲ್ಲಿ ಜೋಳದ ಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ನೀರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಈಗ ಪಾತ್ರೆಯಲ್ಲಿ ಕಾಯಿಸಿದ ಎಳನೀರಿನ ಮಿಶ್ರಣಕ್ಕೆ ಹಾಕಿ. ಇದನ್ನೆಲ್ಲ ಈಗ ತಳ ಹಿಡಿಯದಂತೆ ಕಡಿಮೆ ಉರಿಯಲ್ಲಿ ಕಾಯಿಸಿ. ಇದಕ್ಕೆ ಈಗ ತುಪ್ಪವನ್ನು ಸೇರಿಸಿ. ನಂತರ ಹಾಕಿನಲ್ಲಿ ನೆನೆಸಿಟ್ಟ ಕೇಸರಿಯನ್ನು ಸೇರಿಸಿ. ನಂತರ ತುಪ್ಪದಲ್ಲಿ ಹುರಿದಿಟ್ಟ ಗೇರು ಬೀಜ ಸೇರಿಸಿ. ಈಗ ಬಿಸಿ ಬಿಸಿ ಹಲ್ವಾ ಸಿದ್ಧವಾಗಿದೆ.
ಒಂದು ಬಟ್ಟಲಿಗೆ ಎಣ್ಣೆಯನ್ನು ಸವರಿ ಅದಕ್ಕೆ ಈಗ ಬಿಸಿ ಹಲ್ವಾವನ್ನು ಹಾಕಿ ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದೇ ಸಮನಾಗಿ ಕತ್ತರಿಸಿ. ಈಗ ರುಚಿ ರುಚಿಯಾದ ಎಳನೀರು ಹಲ್ವಾ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: