ಬೇಸಿಗೆ ಶಾಖಕ್ಕೆ ದಾಹವೂ ಹೆಚ್ಚಾಗುತ್ತಿದ್ದಂತೆ ತಂಪಾಗಿರುವ ಉಲ್ಲಾಸಕರವಾದ ಏನನ್ನಾದರೂ ಸೇವಿಸಬೇಕೆಂದೆನಿಸುವುದು ಸಹಜ. ಹೀಗಾಗಿ ಹೆಚ್ಚಿನವರು ಕೂಲ್ ಕೂಲ್ ಆಗಿಸುವ ಪೇಯಗಳತ್ತ ಮುಖ ಮಾಡುತ್ತಾರೆ. ಆದರೆ ನಿತ್ಯವೂ ಎಳನೀರು, ತಾಳೆಹಣ್ಣು, ಕಲ್ಲಂಗಡಿ, ಖರ್ಬೂಜ ಜ್ಯೂಸ್ ಕುಡಿದು ಬೇಸರವೆನಿಸಿದ್ದು, ಬೇರೆ ಏನಾದರೂ ಕುಡಿಯಬೇಕು ಎಂದುಕೊಂಡಿದ್ದರೆ ಸೋರೆಕಾಯಿ ಜ್ಯೂಸ್ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
* ಒಂದು ಕಪ್ ಕಪ್ ಸೋರೆಕಾಯಿ / ಲೌಕಿ / ಬಾಟಲ್ ಗೌರ್ಡ್
* ಪುದೀನ ಎಲೆ
* ಒಂದು ಚಮಚದಷ್ಟು ಜೀರಿಗೆ ಪುಡಿ
* ಒಂದು ಚಮಚ ಕಾಳು ಮೆಣಸಿನ ಪುಡಿ
* ಶುಂಠಿ
* ಉಪ್ಪು
* ಎರಡು ಚಮಚ ನಿಂಬೆ ರಸ
* ನೀರು
ಇದನ್ನೂ ಓದಿ: ರಾತ್ರಿ ಮಲಗಿದಾಗ ಬಾಯಿ ಒಣಗುತ್ತದೆಯೇ? ಇಲ್ಲಿದೆ ಸರಳ ಮನೆ ಮದ್ದುಗಳು
* ಮೊದಲಿಗೆ ಮಿಕ್ಸಿ ಜಾರಿಗೆ ಒಂದು ಕಪ್ ನಷ್ಟು ಸಿಪ್ಪೆ ಸುಲಿದು ಕತ್ತರಿಸಿದ ಸೋರೆಕಾಯಿಯನ್ನು ಹಾಕಿಕೊಳ್ಳಿ.
* ಆ ಬಳಿಕ ಪುದೀನ ಎಲೆ, ಚಿಟಿಕೆಯಷ್ಟು ಜೀರಿಗೆ ಪುಡಿ ಹಾಗೂ ಕಾಳು ಮೆಣಸಿನ ಪುಡಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಚಮಚ ನಿಂಬೆ ರಸ ಹಾಗೂ ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
* ಕೊನೆಗೆ ರುಬ್ಬಿದ ಈ ಮಿಶ್ರಣವನ್ನು ಸೋಸಿ, ಐಸ್ ಕ್ಯೂಬ್ ಗಳನ್ನು ಸೇರಿಸಿದರೆ ಸೋರೆಕಾಯಿ ಜ್ಯೂಸ್ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ