Breakup: ಬ್ರೇಕ್​ಅಪ್ ಎಂದರೆ ಎಲ್ಲವೂ ಮುಗಿದು ಹೋಯಿತು ಎಂದರ್ಥವಲ್ಲ, ಹೀಗೆ ಖುಷಿಯನ್ನು ಮರಳಿ ಪಡೆಯಿರಿ

ಬ್ರೇಕ್​ಅಪ್(Breakup) ಎಂದಾಕ್ಷಣ ಎಲ್ಲವೂ ಮುಗಿದುಹೋಗಿದೆ ಎಂದು ತಲೆ ಮೇಲೆ ಕೈಹೊತ್ತು ಮೂಲೆಯಲ್ಲಿ ಅಳುತ್ತಾ ಕೂರುವುದಲ್ಲ.

Breakup: ಬ್ರೇಕ್​ಅಪ್ ಎಂದರೆ ಎಲ್ಲವೂ ಮುಗಿದು ಹೋಯಿತು ಎಂದರ್ಥವಲ್ಲ, ಹೀಗೆ ಖುಷಿಯನ್ನು ಮರಳಿ ಪಡೆಯಿರಿ
Breakup
Follow us
ನಯನಾ ರಾಜೀವ್
|

Updated on: Nov 16, 2022 | 4:03 PM

ಬ್ರೇಕ್​ಅಪ್(Breakup) ಎಂದಾಕ್ಷಣ ಎಲ್ಲವೂ ಮುಗಿದುಹೋಗಿದೆ ಎಂದು ತಲೆ ಮೇಲೆ ಕೈಹೊತ್ತು ಮೂಲೆಯಲ್ಲಿ ಅಳುತ್ತಾ ಕೂರುವುದಲ್ಲ. ಜೀವನ ಎಂದರೆ ಹಾಗೆ ಕಷ್ಟ, ಸುಖಗಳ ಮಿಶ್ರಣ, ಕಷ್ಟದ ಬಳಿಕ ಸುಖ, ಸುಖದ ಬಳಿಕ ಕಷ್ಟ ಇದ್ದೇ ಇರುತ್ತದೆ, ದೊಡ್ಡವರು ಹೇಳುವಂತೆ ಸುಖ ಬಂದಾಗ ಹಿಗ್ಗಬಾರದು ಕಷ್ಟ ಬಂದಾಗ ಕುಗ್ಗಬಾರದು.

ನಮಗೂ ಮುಂದೊಂದು ದಿನ ಒಳ್ಳೆಯ ಸಮಯ ಬಂದೇ ಬರುತ್ತದೆ ಎನ್ನುವ ಆಶಾಭಾವದೊಂದಿಗೆ ಮುನ್ನುಗ್ಗಬೇಕು. ಆಗಿದ್ದಾಯಿತು ಮುಂದೆ ಖುಷಿಯನ್ನು ಮರಳಿ ಪಡೆಯಲು ಏನು ಮಾಡಬೇಕು ಎಂಬುದರ ಕುರಿತು ಆಲೋಚಿಸಬೇಕು.

ಹಳೆಯ ನೆನಪುಗಳನ್ನು ಮೆಲುಕು ಹಾಕಬೇಡಿ ಹಳೆಯ ನೆನಪುಗಳನ್ನು ಮರೆಯುವುದು ಸುಲಭವಲ್ಲ, ನಿಮ್ಮ ಪ್ರೀತಿಯನ್ನು ನೀವು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಅದು ಉಳಿಯಲಿಲ್ಲ ಎಂದಾಗ ಅದರ ಬಗ್ಗೆ ಚಿಂತಿಸಿ ಯಾವುದೇ ಫಲವಿಲ್ಲ. ನೀವು ಯಾವಾಗಲೂ ಇದೇ ಆಲೋಚನೆಯಲ್ಲಿದ್ದರೆ ಕಾಲ ಹೀಗೆಯೇ ಉಳಿಯುವುದಿಲ್ಲ, ಮುಂದೆ ಹೋಗುತ್ತಿರುತ್ತದೆ ನೀವು ಕೂಡ ಎಲ್ಲವನ್ನು ಮರೆತು ಮುಂದೆ ಸಾಗಲೇಬೇಕು.

ಶಾರ್ಟ್​ ಟರ್ಮ್​ ಗೋಲ್ ನೀವು ಅಲ್ಪಾವಧಿಯ ಗುರಿಗಳನ್ನು ಹಾಕಿಕೊಳ್ಳಿ, ಅದನ್ನು ಸಾಧಿಸಲು ಕಷ್ಟಪಡಿ. ನಿಮ್ಮ ಕ್ಷೇತ್ರದಲ್ಲಿ ಹೊಸದಾಗಿ ಏನನ್ನಾದರೂ ಕಲಿಯಿರಿ, ನಿಮಗೆ ನೃತ್ಯ ಕಲಿಯಬೇಕಿದ್ದರೆ, ಹೊರಗಡೆ ಹೋಗಬೇಕೆನಿಸಿದರೆ ಹೋಗಿ, ಪುಸ್ತಕವನ್ನು ಓದಬೇಕೆನಿಸಿದರೆ ಓದಿ, ಒಟ್ಟಿನಲ್ಲಿ ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆಯುವಂತಹ ಕೆಲಸ ಮಾಡಿ.

ನೀವು ಮೊದಲು ಹೇಗಿದ್ದಿರಿ ಹಾಗೆ ಇರಲು ಟ್ರೈ ಮಾಡಿ ನೀವು ಪ್ರೀತಿಯಲ್ಲಿ ಬೀಳುವ ಮುನ್ನ ಹೇಗಿದ್ದರೆ ನಿಮ್ಮ ದಿನಚರಿ ಹೇಗಿತ್ತು, ಹಾಗೆಯೇ ನೀವು ಇರಲು ಟ್ರೈ ಮಾಡಿ. ಇದು ಒಂದು ದಿನದ್ದು ಮಾತ್ರವಲ್ಲ ಪ್ರತಿ ದಿನವೂ ಇದೇ ದಿನಚರಿಯುನ್ನು ನೀವು ಅಳವಡಿಸಿಕೊಳ್ಳಬೇಕು.

ಸ್ನೇಹಿತರೊಂದಿಗೆ ಸಮಯ ಕಳೆಯಿರಿ ನಿಮ್ಮ ಪ್ರೀತಿಯನ್ನು ಮರೆಯಬೇಕೆಂದರೆ ನೀವು ಹೆಚ್ಚೆಚ್ಚು ನಿಮ್ಮ ಸ್ನೇಹಿತರ ಜತೆ ಬೆರೆಯಬೇಕು. ನೀವು ಅವರ ಬಳಿ ಹೆಚ್ಚು ಸಮಯ ಕಳೆದರೆ ನಿಮ್ಮ ಮನಸ್ಸು ಹಗುರವಾಗುತ್ತದೆ.

ನಿತ್ಯ ವ್ಯಾಯಾಮ ಮಾಡುವುದನ್ನು ಮರೆಯಬೇಡಿ ನೀವು ನಿಮ್ಮ ಹಳೆಯ ನೆನಪುಗಳನ್ನು ಮರೆಯಲು ನಿತ್ಯ ವ್ಯಾಯಾಮ, ಧ್ಯಾನ ಮಾಡಿ. ನೀವು ಆರೋಗ್ಯವಾಗಿದ್ದರೆ ನಿಮ್ಮ ಮನಸ್ಸು ಕೂಡ ಶಾಂತವಾಗಿರುವುದು. ನಮಿತ್ಯ 30-35 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ