AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಸಂಗಾತಿಗೆ ಸಂದೇಶವನ್ನು ಕಳುಹಿಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಕಳ್ಸಿದ್ರೆ ಬ್ರೇಕ್​ಅಪ್ ಸುದ್ದಿ ಕೇಳಲು ಸಿದ್ಧರಾಗಿ

ನಿಮ್ಮ ಪ್ರೀತಿ ಉಳಿಸಿಕೊಳ್ಳಲು ನೀವು ಸಂಗಾತಿ ಜತೆಗೆ ಹೆಚ್ಚು ಸಮಯವನ್ನು ಕಳೆಯುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ, ದಂಪತಿ ದೀರ್ಘಕಾಲ ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ.

Relationship Tips: ಸಂಗಾತಿಗೆ ಸಂದೇಶವನ್ನು ಕಳುಹಿಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಕಳ್ಸಿದ್ರೆ ಬ್ರೇಕ್​ಅಪ್ ಸುದ್ದಿ ಕೇಳಲು ಸಿದ್ಧರಾಗಿ
Mobile
TV9 Web
| Updated By: ನಯನಾ ರಾಜೀವ್|

Updated on: Sep 12, 2022 | 2:16 PM

Share

ನಿಮ್ಮ ಪ್ರೀತಿ ಉಳಿಸಿಕೊಳ್ಳಲು ನೀವು ಸಂಗಾತಿ ಜತೆಗೆ ಹೆಚ್ಚು ಸಮಯವನ್ನು ಕಳೆಯುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ, ದಂಪತಿ ದೀರ್ಘಕಾಲ ಒಟ್ಟಿಗೆ ಇರಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಹತ್ತಿರವಿಲ್ಲದಿದ್ದಾಗ, ಮೊಬೈಲ್​ನಲ್ಲಿ ಸಂದೇಶಗಳನ್ನು ಕಳುಹಿಸುವ ಮೂಲಕ ಮಾತನಾಡಲು ಸಾಧ್ಯವಿದೆ, ಏಕೆಂದರೆ ಕಚೇರಿ ಸಮಯದಲ್ಲಿ ಕಾಲ್ ಮಾಡಲು ಸಾಧ್ಯವಿರುವುದಿಲ್ಲ.

ಹೆಚ್ಚು ಮಾತನಾಡಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಸಂದೇಶ ಕಳುಹಿಸುವಲ್ಲಿ ಸ್ವಲ್ಪ ಕಾಳಜಿ ವಹಿಸಬೇಕಿದೆ. ನೀವು ಮತ್ತೆ ಮತ್ತೆ ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಮತ್ತು ನಿಮ್ಮ ಸಂಗಾತಿಗೆ ಈ ವಿಷಯ ಇಷ್ಟವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಸಂಬಂಧವು ಮುರಿದುಹೋಗಬಹುದು. ಸಂದೇಶ ಕಳುಹಿಸುವಾಗ ತಪ್ಪಿಸಬೇಕಾದ ತಪ್ಪುಗಳು ಯಾವುವು? ಇಲ್ಲಿದೆ ಮಾಹಿತಿ.

ನಿಮ್ಮ ಸಂಗಾತಿಗೆ ಸಂದೇಶ ಕಳುಹಿಸುವಾಗ ಈ ತಪ್ಪುಗಳನ್ನು ಮಾಡಬೇಡಿ ನಿರಂತರವಾಗಿ ಮೆಸೇಜ್ ಮಾಡಬೇಡಿ ಕೆಲವು ಜನರು ತಮ್ಮ ಪ್ರೀತಿ ಅಥವಾ ಕಾಳಜಿಯನ್ನು ತೋರಿಸಲು ತಮ್ಮ ಪ್ರೀತಿಯ ಸಂಗಾತಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅನೇಕ ಬಾರಿ ಅವರು ಯಾವುದೋ ಕೆಲಸದಲ್ಲಿ ನಿರತಳಾಗಿರುತ್ತಾರೆ ಮತ್ತು ನಿಮ್ಮ ಸಂದೇಶದಿಂದ ಮತ್ತೆ ಮತ್ತೆ ತೊಂದರೆಗೊಳಗಾಗುತ್ತಾರೆ. ಸಂದೇಶ ಕಳುಹಿಸುವ ಮೊದಲು, ಆ ವ್ಯಕ್ತಿಯು ಫ್ರೀ ಇದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮೂಡುವ ಕೋಪವು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು.

ಸಂದೇಶದಲ್ಲಿ ವಿವರವಾದ ಚಾಟ್ ಮಾಡಬೇಡಿ ನಿಮ್ಮ ಸಂಗಾತಿಯ ಮೂಲ ಸ್ವಭಾವವನ್ನು ನೀವು ಅರ್ಥಮಾಡಿಕೊಳ್ಳಬೇಕು, ಅನೇಕ ಬಾರಿ ಕೆಲವು ಜನರು ಸಂದೇಶದಲ್ಲಿ ಬರೆಯುವ ಮೂಲಕ ವಿವರವಾದ ಚಾಟ್ ಮಾಡಲು ಇಷ್ಟಪಡುವುದಿಲ್ಲ. ನೀವು ದೀರ್ಘಕಾಲ ಮಾತನಾಡಲು ಬಯಸಿದರೆ, ಸರಿಯಾದ ಸಮಯಕ್ಕಾಗಿ ಕಾಯುವುದು ಮತ್ತು ದೀರ್ಘಕಾಲ ಮಾತನಾಡುವುದು ಉತ್ತಮ. ಹೀಗೆ ಮಾಡುವುದರಿಂದ ಸಂಗಾತಿಗೆ ಸುಲಭವಾಗುತ್ತದೆ.

ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳಬೇಡಿ ಕೆಲವೊಮ್ಮೆ ಸಂಗಾತಿಯ ಬಳಿ ಕೇಳಿದ್ದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತೀವೆ ಇದರಿಂದ ಅವರಿಗೆ ಇರಿಸುಮುರಿಸು ಉಂಟಾಗುವ ಸಾಧ್ಯತೆ ಇರುತ್ತದೆ. ಈ ಪ್ರಶ್ನೆಗಳು ಅವರಿಗೆ ಅಹಿತಕರವೆನಿಸಬಹುದು, ಒಂದೊಮ್ಮೆ ನಿಮ್ಮ ಪ್ರಶ್ನೆಗೆ ಆ ಕಡೆಯಿಂದ ಉತ್ತರ ಬರುವಲ್ಲಿ ತಡವಾಯಿತು ಎನ್ನುವಾಗ ನೀವು ಮತ್ತೇನೋ ಪ್ರಶ್ನೆಗಳನ್ನು ಕೇಳಿ ವಿನಾಕಾರಣ ಅವರ ಕೋಪಕ್ಕೆ ಕಾರಣರಾಗಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್