ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಆಸೆ ಇದ್ದೇ ಇರುತ್ತೆ. ಆದ್ರೆ, ಈ ಬ್ರಿಟನ್ ಪ್ರಜೆಗೆ ವಿಚಿತ್ರ ಆಸೆ ಹೊಂದಿದ್ದಾರೆ. ಗಾರ್ಡನ್ನಲ್ಲಿ ಬೆತ್ತಲೆಯಾಗಿ ಆಯಾಗಿ ಸಮಯಕ ಕಳೆಯುವುದೇ ಈ ಮನುಷ್ಯ ತುಂಬ ಆಸೆಯಂತೆ. ಹೌದು..ಅಚ್ಚರಿ ಜೊತೆಗೆ ವಿಚಿತ್ರ ಎನಿಸಿದರೂ ಸತ್ಯ.
ಹಣಕ್ಕಾಗಿ ಕಟ್ಟಿಕೊಂಡ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದ್ವೆ ಮಾಡಿಸಿದ ಪತಿರಾಯ!
ಹೌದು…ಬ್ರಿಟನ್ ಪ್ರಜೆಯಾಗಿರುವ 86 ವರ್ಷದ ಪರಿಸರವಾದಿ ಸ್ಟುವರ್ಟ್ ಹವುಡ್ಗೆ ಮೈಮೇಲೆ ಬಟ್ಟೆ ಇಲ್ಲದೇ ಆಯಾಗಿ ಬೆತ್ತಲೆಯಾಗಿ ಓಡಾಡುವುದಂದ್ರೆ ಇಷ್ಟವಂತೆ. ಈ ಹಿನ್ನೆಲೆಯಲ್ಲಿ ಬೆತ್ತಲೆಯಾಗಿ ಓಡಾಡಲು ಸ್ಟುವರ್ಟ್ ಹವುಡ್, ಬಾಡಿಗೆ ಉದ್ಯಾನವನವನ್ನ ಹುಡುಕುತ್ತಿದ್ದಾರೆ.
ಸ್ಟುವರ್ಟ್ ಹವುಡ್ಗೆ 2008 ರಿಂದಲೂ ಬೆತ್ತಲೆಯಾಗಿ ಓಡಾಡುವ ಅಭ್ಯಾಸ ಇದೆ. ಅಂದಿನಿಂದ ಸಮಯ ಸಿಕ್ಕಾಗೆಲ್ಲ ಕೆಲ ಕಡೆ ಹೋಗಿ ಉದ್ಯಾನವನದಲ್ಲಿ ಬೆತ್ತಲೆಯಾಗಿ ಸುತ್ತಾಡಿ ತಮ್ಮ ಆಸೆ ಈಡೇರಿಸಿಕೊಳ್ಳುತ್ತಿದ್ದಾರೆ. ಆದ್ರೆ, ಇದೀಗ ವಯಸ್ಸಾಗಿದ್ದರಿಂದ ಅವರು ಬೇರೆ ಕರೆ ಹೋಗಲು ಸಾಧ್ಯವಾಗುತ್ತಿಲ್ಲ.
14 ವರ್ಷದ ಹಿಂದೆ, ದಕ್ಷಿಣ ಡರ್ಬಿಶೈರ್‌ನ ಸ್ಮಾಡಿನ್ ಕೋಟ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಟುವರ್ಟ್ ಮತ್ತು ಇವರ ಪತ್ನಿ ಭಾಗವಹಿಸಿದ್ದರು. ಅಲ್ಲಿ ತೋರಿಸಲಾದ ಸಾಕ್ಷ್ಯಚಿತ್ರ ವೀಕ್ಷಿಸಿ, ಹಾಗೂ ಅಲ್ಲಿನ ಸೆಷನ್‌ನಲ್ಲಿ ಭಾಗವಹಿಸಿದ್ದ ನಂತರ ಇವರು ಜೀವನ ನೋಡುವ ದೃಷ್ಟಿಯೇ ಬದಲಾಗಿದೆ. ಪ್ರತಿವರ್ಷ ಸೈಗ್ರೆಸ್ ಬಳಿಯ ಲೇಕ್ ಸೈಡ್ ಫಾರ್ಮಗೆ, ವರ್ಷಕ್ಕೆ ಏನಿಲ್ಲ ಅಂದರೂ ಎರಡು ಬಾರಿ ಇವರು ಭೇಟಿ ಕೊಟ್ಟು, ಅಲ್ಲಿ ಕೆಲ ದಿನ ಬೆತ್ತಲೆಯಾಗಿ ಓಡಾಡಿ ಬರುತ್ತಿದ್ದರು. ಆದರೆ ಈಗ ವಯಸ್ಸಾದ ಕಾರಣ ಅಷ್ಟು ದೂರ ಪ್ರಯಾಣ ಮಾಡುವುದು ಕಷ್ಟವಾಗಿದೆ. ಈ ಕಾರಣಕ್ಕೆ ಸ್ಟುವರ್ಟ್ ಹವುಡ್ ಬೆತ್ತಲೆಯಾಗಿ ಓಡಾಡಲು ಈಗ ತಮ್ಮ ಮನೆಯ ಸುತ್ತಾಮುತ್ತ ತೋಟಗಳನ್ನ ಹುಡುಕುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವ ಸ್ಟುವರ್ಟ್, ನನಗೆ ಬೆತ್ತಲೆಯಾಗಿ ಓಡಾಡುವುದಕ್ಕೆ ಖುಷಿಯಾಗುತ್ತೆ. ನಾನು ಸ್ವತಂತ್ರವಾಗಿದ್ದೇನೆ ಅನ್ನೋ ಭಾವ. ಬೆತ್ತಲೆಯಾಗುವುದಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ. ನಿಮ್ಮ ದೇಹದ ಬಗ್ಗೆ ಹೆಮ್ಮೆ ಇರಬೇಕೇ ವಿನಃ ನಾಚಿಕೆಯಲ್ಲ. ಯಾರಾದರೂ ಬಾಡಿಗೆಗೆ ತೋಟ ಕೊಟ್ಟಿದ್ದೇ ಆದಲ್ಲಿ ಅವರಿಗೆ ಬಾಡಿಗೆ ಹಣ ಕೊಡುವುದಲ್ಲದೇ ತೋಟದ ಮಾಲೀಕನಿಗೆ ಉದ್ಯಾನವನದ ಕುರಿತಾಗಿ ಉಪಯುಕ್ತವಾದ ಕೆಲ ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:43 pm, Sun, 13 November 22