ಹಣಕ್ಕಾಗಿ ಕಟ್ಟಿಕೊಂಡ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದ್ವೆ ಮಾಡಿಸಿದ ಪತಿರಾಯ!
ಅಗ್ನಿ ಸಾಕ್ಷಿಯಾಗಿ ಮದುವೆ ಮಾಡಿಕೊಂಡಿದ್ದ ಪತಿರಾಯನೊಬ್ಬ ಹಣಕ್ಕಾಗಿ ಹೆಂಡತಿಯನ್ನು ಮಾರಾಟ ಮಾಡಿದ್ದಲ್ಲದೇ ಆತನೊಂದಿಗೆ ಮದುವೆ ಮಾಡಿಕೊಟ್ಟಿದ್ದಾನೆ.
ಭುವನೇಶ್ವರ್: ಪತಿರಾಯನೊಬ್ಬ (Husband) ಕಟ್ಟಿಕೊಂಡ ಹೆಂಡತಿಯನ್ನು(Wife) ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಅಲ್ಲದೇ ಆತನೊಂದಿಗೆ ಬಲವಂತವಾಗಿ ಮದುವೆಯನ್ನೂ ಸಹ ಮಾಡಿಸಿರುವ ಆಘಾತಕಾರಿ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಜೊತೆ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೋಗಿದ್ದ. ದೆಹಲಿಗೆ ಹೋದ ಎರಡೇ ದಿನದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಆರೋಪಿ ಬೆರುಕ್ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಭಾರಿ ಮೊತ್ತದ ಹಣ ಪಡೆದ ಬಳಿಕ ಪತ್ನಿಯನ್ನು ಆತನೊಂದಿಗೆ ಮದುವೆ ಸಹ ಮಾಡಿಸಿದ್ದಾನೆ.
ಸಂಬಂಧಿಕರನ್ನು ಬಲೆಗೆ ಬೀಳಿಸಲು ಮಗಳನ್ನೇ ಪಣಕ್ಕಿಟ್ಟು, ಕೊನೆಗೆ ಆಕೆಯ ಹತ್ಯೆ ಮಾಡಿದ ಕ್ರೂರ ತಂದೆ
ಬಳಿಕ ನವೆಂಬರ್ 5ರಂದು ಪೂರ್ಣಿಮಾ ಭೋಯ್, ತನ್ನ ತಂದೆ ಕುಲಮಣಿ ಭೋಯ್ಗೆ ಕರೆ ಗಂಡನ ಕೃತ್ಯವನ್ನು ಹೇಳಿಕೊಂಡಿದ್ದಾಳೆ. ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್ ವಿರುದ್ಧ ನಾರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನಾರ್ಲಾ ಪೊಲೀಸರು ಆರೋಪಿ ಬೆರುಕ್ನನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sun, 13 November 22