ಆಂಡ್ರಾಯ್ಡ್ ಮತ್ತು ಐಫೋನ್​​ನಿಂದ ಕ್ಯಾಪ್ಸಿಕಂ ಬೆಲೆ ನಿರ್ಧಾರ, ಇದು Zepto ಮಹಿಮೆ, ಅನುಭವ ಹಂಚಿಕೊಂಡ ಬೆಂಗಳೂರಿನ ಮಹಿಳೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 4:55 PM

ಆಂಡ್ರಾಯ್ಡ್ ಮತ್ತು ಐಫೋನಿಗೂ ಇರುವ ವ್ಯತ್ಯಾಸವನ್ನು ಒಂದು ಕ್ಯಾಪ್ಸಿಕಂ, ದ್ರಾಕ್ಷಿಯ ಬೆಲೆ ನಿರ್ಧಾರಿಸಿದೆ ನೋಡಿ. ಬೆಂಗಳೂರಿನ ಮಹಿಳೆಯೊಬ್ಬರು ಆಂಡ್ರಾಯ್ಡ್ ಮತ್ತು ಐಫೋನ್ ಒಂದೇ ವಸ್ತುವಿಗೆ ವಿಭಿನ್ನ ಬೆಲೆಯಲ್ಲಿ ನಿರ್ಧಾರಿಸಿದೆ. Zepto ಉತ್ಪನ್ನಗಳು ಇದಕ್ಕೆ ಸಾಕ್ಷಿ. ಇದೀಗ ಈ ಮಹಿಳೆ ಹಂಚಿಕೊಂಡ ಪೋಸ್ಟ್​​ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಆಂಡ್ರಾಯ್ಡ್ ಮತ್ತು ಐಫೋನ್​​ನಿಂದ ಕ್ಯಾಪ್ಸಿಕಂ ಬೆಲೆ ನಿರ್ಧಾರ, ಇದು Zepto ಮಹಿಮೆ, ಅನುಭವ ಹಂಚಿಕೊಂಡ ಬೆಂಗಳೂರಿನ ಮಹಿಳೆ
ವೈರಲ್ ಫೋಟೋ
Follow us on

ಆಂಡ್ರಾಯ್ಡ್ ಮತ್ತು ಐಫೋನ್​​ನಿಂದ ಒಂದು ತರಕಾರಿ ಅಥವಾ ವಸ್ತುವಿನ ಬೆಲೆ ನಿರ್ಧಾರವಾಗುತ್ತದೆ. ಈ ಬಗ್ಗೆ ಒಂದು ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಬೆಂಗಳೂರಿನ ಮಹಿಳೆಯೊಬ್ಬರು ಆಂಡ್ರಾಯ್ಡ್ ಮತ್ತು ಐಫೋನ್ ಒಂದೇ ವಸ್ತುವಿಗೆ ವಿಭಿನ್ನ ಬೆಲೆಯಲ್ಲಿ ನಿರ್ಧಾರಿಸಿದೆ. Zepto ಉತ್ಪನ್ನಗಳು ಇದಕ್ಕೆ ಸಾಕ್ಷಿ. ಇದೀಗ ಈ ಮಹಿಳೆ ಹಂಚಿಕೊಂಡ ಪೋಸ್ಟ್​​ ವೈರಲ್​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಅರ್ಧ ಕಿಲೋ ದ್ರಾಕ್ಷಿಗೆ ಆಂಡ್ರಾಯ್ಡ್ನಲ್ಲಿ 65 ರೂ. ಅದೇ ದ್ರಾಕ್ಷಿಗೆ ಐಫೋನ್‌ನಲ್ಲಿ 146 ರೂ. ಕ್ಯಾಪ್ಸಿಕಂ, ಹೂಕೋಸು ಮತ್ತು ಈರುಳ್ಳಿ ಬೆಲೆಗಳು ಈ ವ್ಯತ್ಯಾಸವನ್ನು ಸೂಚಿಸುತ್ತದೆ. Zepto ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಒಂದೇ ಉತ್ಪನ್ನಕ್ಕೆ ವಿಭಿನ್ನ ಬೆಲೆಗಳನ್ನು ವಿಧಿಸುತ್ತಿದೆ ಎಂದು ಆರೋಪಿಸಲಾಗಿದೆ. ವಿನಿತಾ ಸಿಂಗ್ ಎಂಬುವವರು ಈ ಬಗ್ಗೆ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

ಕ್ಯಾಪ್ಸಿಕಂಗೆ ಆಂಡ್ರಾಯ್ಡ್ ಫೋನ್ 500-600 ಗ್ರಾಂಗೆ 21 ರೂ ಎಂದು ತೋರಿಸಿದೆ, ಆದರೆ ಐಫೋನ್ ಅದೇ ಉತ್ಪನ್ನಕ್ಕೆ 107 ರೂ ತೋರಿಸುತ್ತದೆ. ಎರಡೂ ಸ್ಕ್ರೀನ್‌ಶಾಟ್‌ಗಳನ್ನು ಒಂದೇ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. Zepto ಯಾಕೆ ವ್ಯತ್ಯಾಸವನ್ನು ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ.

ಇದನ್ನೂ ಓದಿ:  ಉಡುಗೆಗೆ ಹೊಂದುವಂತೆ ಚೆಂದನೆಯ ಆಭರಣಗಳ ಆಯ್ಕೆ ಹೀಗಿರಲಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಚರ್ಚೆ ಮಾಡಿದ್ದಾರೆ. ಜತೆಗೆ ಈ ಪೋಸ್ಟ್​​​ಗೆ ಕಮೆಂಟ್​​ ಕೂಡ ಮಾಡಿದ್ದಾರೆ. ಐಫೋನ್ ಖರೀದಿಸಲು ಅವರಿಗೂ ಹಣ ಬೇಕು. ಅದಕ್ಕೇ ಎಂದು ಹೇಳಿದ್ದಾರೆ. ನಾವೆಲ್ಲರೂ ದಿನಸಿ, ಬುಕ್ ಕ್ಯಾಬ್‌ಗಳು ಇತ್ಯಾದಿಗಳನ್ನು ಖರೀದಿಸಲು ಆಂಡ್ರಾಯ್ಡ್ ಸಾಧನಗಳನ್ನು ಖರೀದಿಸಬೇಕು ಎಂದು ಅನ್ನಿಸುತ್ತಿದೆ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ. ನಾವೆಲ್ಲ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವೆಲ್ಲರೂ ಈ ಅಪ್ಲಿಕೇಶನ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ನೀವು ಅದನ್ನು ಐಫೋನ್‌ನೊಂದಿಗೆ ಆರ್ಡರ್ ಮಾಡಿದಾಗ ಅವರು ಕ್ಯಾಪ್ಸಿಕಂ ಅನ್ನು 1 ನಿಮಿಷ ಮುಂಚಿತವಾಗಿ ವಿತರಿಸುತ್ತಿದ್ದಾರೆ. ಅದಕ್ಕಾಗಿಯೇ ಇದು ದುಬಾರಿಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ