Pulwama Attack: ಭಾರತದ ಇತಿಹಾಸದಲ್ಲಿ ಪುಲ್ವಾಮ ದಾಳಿಯ ಕಹಿ ನೆನಪು, ವಿದ್ಯಾರ್ಥಿಗಳಿಗಾಗಿ ಸ್ಪೂರ್ತಿದಾಯಕ ಭಾಷಣಗಳು ಇಲ್ಲಿವೆ
ಫೆಬ್ರವರಿ 14 ಭಾರತೀಯರ ಪಾಲಿಗೆ ಕರಾಳ ದಿನ. ನಮ್ಮ ವೀರ ಯೋಧರು ತಾಯಿ ನೆಲೆಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಐದು ವರ್ಷದ ಹಿಂದೆ ಪುಲ್ವಾಮಾದಲ್ಲಿ ನಡೆದ ಘಟನೆಯಿಂದ 40 ಯೋಧರನ್ನು ಬಲಿ ಪಡೆದುಕೊಂಡಿತು. ಹೀಗಾಗಿ ಫೆಬ್ರವರಿ 14 ರಂದು ಈ ದಿನವನ್ನು ಭಾರತವು ಕರಾಳ ದಿನವನ್ನಾಗಿ ಆಚರಿಸುತ್ತಿದೆ. ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಭಾಷಣವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಿ ಎಂದಾದರೆ ವಿದ್ಯಾರ್ಥಿಗಳಿಗಾಗಿ ಭಾಷಣ ಕುರಿತಾದ ಕೆಲವೊಂದು ಸಲಹೆಗಳು ಇಲ್ಲಿದೆ.
![Pulwama Attack: ಭಾರತದ ಇತಿಹಾಸದಲ್ಲಿ ಪುಲ್ವಾಮ ದಾಳಿಯ ಕಹಿ ನೆನಪು, ವಿದ್ಯಾರ್ಥಿಗಳಿಗಾಗಿ ಸ್ಪೂರ್ತಿದಾಯಕ ಭಾಷಣಗಳು ಇಲ್ಲಿವೆ](https://images.tv9kannada.com/wp-content/uploads/2025/01/pulwama-attack.jpg?w=1280)
ಫೆಬ್ರವರಿ 14 ರಂದು ಅಂದರೆ ಸರಿಸುಮಾರು ಆರು ವರ್ಷಗಳ ಹಿಂದೆ ಭಾರತೀಯ ಸೇನೆ ಭದ್ರತಾಪಡೆಗಳ ಮೇಲೆ ನಡೆದ ದಾಳಿಯಿಂದಾಗಿ 40 ಕ್ಕೂ ಯೋಧರು ಕೊನೆಯುಸಿರೆಳೆದಿದ್ದರು. ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಭಾರತೀಯ ಸೇನೆಯ ವಾಹನದಲ್ಲಿ ತೆರಳುತ್ತಿದ್ದ ಯೋಧರು ಬಲಿಯಾಗಿದ್ದರು. ಈ ಕಹಿ ಸುದ್ದಿಯೊಂದು ಹೊರಬೀಳುತ್ತಿದ್ದಂತೆ ಇಡೀ ದೇಶವೇ ಮೌನಕ್ಕೆ ಜಾರಿತ್ತು. ಹುತಾತ್ಮರಾದ ಸೈನಿಕರನ್ನು ಗೌರವಿಸಲು ಮತ್ತು ರಾಷ್ಟ್ರಕ್ಕಾಗಿ ಅವರ ತ್ಯಾಗವನ್ನು ಸ್ಮರಿಸಲು ಫೆಬ್ರವರಿ 14 ರಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಕರಾಳ ದಿನದಂದು ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಭಾಷಣಕ್ಕೆ ಸಂಬಂಧ ಪಟ್ಟ ಸಲಹೆಗಳು ಇಲ್ಲಿದೆ.
* ಭಾಷಣ 1 : ಎಲ್ಲರಿಗೂ ನಮಸ್ಕಾರ, ಇಂದು ನಾವೆಲ್ಲರೂ ಈ ಕರಾಳ ದಿನವನ್ನು ನೆನಪಿಸಿಕೊಳ್ಳಲು ಇಲ್ಲಿ ಒಟ್ಟುಗೂಡಿದ್ದೇವೆ. ಆ ದಿನ 14 ಫೆಬ್ರವರಿ 2019, ನಮ್ಮ 40 ನೇ ಸಿಆರ್‌ಪಿಎಫ್ ಯೋಧ ಪುಲ್ವಾಮಾದಲ್ಲಿ ತನ್ನ ಪ್ರಾಣವನ್ನು ತ್ಯಜಿಸಿದ ದಿನ. ಈ ದಾಳಿಯೂ ಕೇವಲ ದಾಳಿಯಾಗಿರಲಿಲ್ಲ, ಇದು ನಮ್ಮ ದೇಶದ ಭದ್ರತೆ ಮತ್ತು ಸಮಗ್ರತೆಯ ಮೇಲಿನ ದಾಳಿಯಾಗಿತ್ತು. ನಮ್ಮ ಸೈನಿಕರು ಪ್ರಾಣ ತ್ಯಾಗದಿಂದ ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ. ಹುತಾತ್ಮರಾದ ಸೈನಿಕರನ್ನು ಗೌರವಿಸಲು ಮತ್ತು ರಾಷ್ಟ್ರಕ್ಕಾಗಿ ಅವರ ತ್ಯಾಗವನ್ನು ಸ್ಮರಿಸೋಣ.
* ಭಾಷಣ 2 : 2019 ರ ಫೆಬ್ರವರಿ 14 ಭಾರತಕ್ಕೆ ದುಃಖ ಹಾಗೂ ಶೋಕದಿಂದ ಕೂಡಿದ ದಿನವಾಗಿದೆ. ಪುಲ್ವಾಮಾ ದಾಳಿಯಲ್ಲಿ, ನಮ್ಮ ಸಿಆರ್‌ಪಿಎಫ್ ಯೋಧರು ಭಯೋತ್ಪಾದಕ ದಾಳಿಯನ್ನು ಎದುರಿಸಬೇಕಾಯಿತು. ಈ ದಾಳಿಯಲ್ಲಿ ಸುಮಾರು 40 ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಗಡಿಯಲ್ಲಿ ಹಗಲಿರುಳು ಶ್ರಮಿಸಿದ ಸೈನಿಕರ ತ್ಯಾಗವನ್ನು ನಾವು ಎಂದಿಗೂ ಮೆರೆಯಲಾಗದು.ಈ ದಾಳಿಯು ದೇಶದ ಭದ್ರತೆಗಾಗಿ ಸದಾ ಎಚ್ಚರವಾಗಿರುವುದು ಅಗತ್ಯ ಎನ್ನುವುದನ್ನು ಸಾರಿ ಹೇಳುತ್ತದೆ. ಇಂದು ನಾವೆಲ್ಲರೂ ಭಯೋತ್ಪಾದನೆಯ ವಿರುದ್ಧ ಹೋರಾಡಲು ಹಾಗೂ ಹುತಾತ್ಮರಾದ ಸೈನಿಕರನ್ನು ಗೌರವಿಸಲು ಒಗ್ಗೂಡಿದ್ದೇವೆ ಜೈ ಹಿಂದ್.
* ಭಾಷಣ 3: ಎಲ್ಲರಿಗೂ ನಮಸ್ಕಾರ, ಇಂದು ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. 2019 ರ ಫೆಬ್ರವರಿ 14 ರಂದು ಭಯೋತ್ಪಾದಕ ಮತ್ತೊಮ್ಮೆ ತನ್ನ ಕ್ರೌರ್ಯವನ್ನು ತೋರಿದ ದಿನ. ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಭಾರತಮಾತೆಯ ರಕ್ಷಣೆ ಮಾಡಿದ್ದಾರೆ. ಈ ರೀತಿಯ ಹಿಂಸಾಚಾರದ ವಿರುದ್ಧ ನಾವೆಲ್ಲರೂ ಒಟ್ಟಾಗಿ ದೃಢವಾದ ನಿಲುವು ತೆಗೆದುಕೊಳ್ಳಬೇಕು ಎಂಬುದಕ್ಕೆ ಇದು ನಮಗೆ ಪಾಠವಾಗಿದೆ. ಇಂದು ನಾವು ಹುತಾತ್ಮರಾದ ಸೈನಿಕರನ್ನು ಗೌರವಿಸಲು ಸೇರಿದ್ದೇವೆ. ಈ ದಿನದಂದು ದೇಶದ ಭದ್ರತೆ ಹಾಗೂ ಶಾಂತಿಗಾಗಿ ನಾವು ಯಾವಾಗಲೂ ಸಿದ್ಧರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡೋಣ. ಜೈ ಹಿಂದ್, ಜೈ ಭಾರತ್.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ