Kannada News Lifestyle Chanakya Niti : According to chanakya niti these five people are called foolish in society Kannada News
Chanakya Niti : ಈ ವ್ಯಕ್ತಿಗಳು ಎಷ್ಟೇ ಓದಿದ್ದರೂ ಶತಮೂರ್ಖರಂತೆ, ಇವರ ಸಹವಾಸ ಮಾಡ್ಲೇಬೇಡಿ
ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವ ವ್ಯಕ್ತಿಗಳು ಹೇಗೆ ಇರುತ್ತಾರೆ ಎಂದು ಊಹೆ ಮಾಡುವುದಕ್ಕೂ ಕಷ್ಟ. ಹೀಗಾಗಿ ಅವರೊಂದಿಗೆ ವ್ಯವಹರಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ. ಆದರೆ ಆಚಾರ್ಯ ಚಾಣಕ್ಯನು ಈ ಐದು ವ್ಯಕ್ತಿಗಳ ಜೊತೆಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವ್ಯಕ್ತಿಗಳು ಯಾವಾಗಲೂ ಮೂರ್ಖರಾಗಿರುತ್ತಾರೆ ಎಂದಿದ್ದಾರೆ. ಹಾಗಾದ್ರೆ ಆ ಐದು ಮೂರ್ಖ ವ್ಯಕ್ತಿಗಳು ಯಾರೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಯಾವುದೇ ವ್ಯಕ್ತಿಯು ಜ್ಞಾನವನ್ನು ಸಂಪಾದಿಸುವುದರಿಂದ ಬುದ್ಧಿವಂತನಾಗುವುದಿಲ್ಲ. ಕೆಲವರು ಅತ್ಯುನ್ನತ ಹುದ್ದೆಗಳನ್ನು ಹೊಂದಿದ್ದು ಕೈ ತುಂಬಾ ಸಂಪಾದನೆ ಮಾಡುತ್ತಿರುತ್ತಾರೆ. ಆದರೆ ಯಾವಾಗಲೂ ಮೂರ್ಖತನದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈ ಕಾರಣಕ್ಕೆ ಈ ವ್ಯಕ್ತಿಗಳು ಯಾವತ್ತಿಗೂ ಕೂಡ ಮೂರ್ಖರು ಎನಿಸಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಸುತ್ತ ಮುತ್ತಲಿನಲ್ಲಿ ಈ ಐದು ಗುಣಸ್ವಭಾವದ ವ್ಯಕ್ತಿಗಳಿದ್ದರೆ ಅವರು ಮೂರ್ಖರಾಗಿಯೇ ಇರುತ್ತಾರೆ. ಸಮಾಜವು ಕೂಡ ಅವರನ್ನು ಮೂರ್ಖ ವ್ಯಕ್ತಿಗಳೆಂದು ಭಾವಿಸುತ್ತದೆ.
ತಮ್ಮನ್ನು ತಾವೇ ಬುದ್ಧಿವಂತರೆನಿಸಿಕೊಂಡ ವ್ಯಕ್ತಿಗಳು : ಕೆಲವರು ತಮ್ಮನ್ನು ತಾವೇ ಬುದ್ಧಿವಂತರು ಎಂದು ಹೇಳಿಕೊಂಡು ತಿರುಗಾಡುವುದನ್ನು ನೋಡಿರಬಹುದು. ಆದರೆ ಆ ವ್ಯಕ್ತಿಗಳು ನಿಜಕ್ಕೂ ಶತಮೂರ್ಖರಾಗಿರುತ್ತಾರೆ. ಇವರು ಯಾರ ಮಾತು ಅಥವಾ ಸಲಹೆಗಳನ್ನು ಕೇಳಲು ಸಿದ್ಧವಿರುವುದಿಲ್ಲ. ಹಾಗಾಗಿ ಈ ರೀತಿಯ ಜನರಿಂದ ಯಾವುದೇ ಕಾರಣಕ್ಕೂ ಸಲಹೆ ಪಡೆದುಕೊಳ್ಳಬಾರದು. ಇವರಿಗೆ ಒಂದೊಳ್ಳೆ ಸಲಹೆ ನೀಡಲು ಹೋದರೂ ಕೂಡ ಇತರರನ್ನು ಅವಮಾನಿಸುವ ಸ್ವಭಾವ ಇವರದ್ದಾಗಿದ್ದು, ಈ ವ್ಯಕ್ತಿಗಳಿಂದ ದೂರವಿರುವುದೇ ಉತ್ತಮ.
ಇತರರನ್ನು ಅವಮಾನಿಸುವ ವ್ಯಕ್ತಿಗಳು : ಸಣ್ಣ ಸಣ್ಣ ವಿಷಯಗಳಿಗೂ ತಮ್ಮ ಸುತ್ತಲಿನ ಜನರನ್ನು ಪದೇ ಪದೇ ಚುಚ್ಚು ಮಾತುಗಳಿಂದ ಅವಮಾನಿಸುವ ವ್ಯಕ್ತಿಗಳು ನಿಜವಾದ ಮೂರ್ಖರಾಗಿರುತ್ತಾರೆ. ಈ ವ್ಯಕ್ತಿಗಳ ಜೊತೆಗೆ ಇರುವುದು ಒಳ್ಳೆಯದಲ್ಲ. ಇದರಿಂದ ಅವಮಾನವಾಗುವ ಸಂಭವವೇ ಹೆಚ್ಚು. ಈ ವ್ಯಕ್ತಿಗಳಿಗೆ ಯಾರ ಮುಂದೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಹೀಗಾಗಿ ನಿಮ್ಮ ಸುತ್ತಮುತ್ತಲಿನಲ್ಲಿ ಈ ಗುಣಸ್ವಭಾವದ ವ್ಯಕ್ತಿಗಳಿದ್ದರೆ ಅವರಿಂದ ದೂರವಿರುವುದೇ ಉತ್ತಮ ಎಂದಿದ್ದಾನೆ ಚಾಣಕ್ಯ.
ಸ್ವತಃ ಹೊಗಳಿಕೊಳ್ಳುವ ವ್ಯಕ್ತಿಗಳು: ಎಲ್ಲರ ಮುಂದೆ ತಮ್ಮ ಬಗ್ಗೆ ತಾವೇ ಹೊಗಳಿ ಕೊಳ್ಳುತ್ತಾರೆ. ಇಂತಹವರನ್ನು ಸಹ ಚಾಣಕ್ಯರು ಮೂರ್ಖರು ಎಂದು ಕರೆದಿದ್ದಾರೆ. ಈ ವ್ಯಕ್ತಿಗಳು ತಮ್ಮ ಮುಂದೆ ಬೇರೆಯವರ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡುವುದಿಲ್ಲ. ತಮ್ಮನ್ನು ತಾವೇ ಸರಿ ಎಂದುಕೊಳ್ಳುವ ಮೂಲಕ ಎದುರಿಗಿರುವ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳುವ ತಾಳ್ಮೆ ಈ ವ್ಯಕ್ತಿಗಳಿಗಿರುವುದಿಲ್ಲ.
ಯೋಚಿಸದೆ ಕೆಲಸ ಮಾಡುವ ವ್ಯಕ್ತಿಗಳು : ನೀವು ನೋಡಿದ್ದೀರಬಹುದು, ಕೆಲವರು ಒಂದು ಕ್ಷಣ ತಾವು ಮಾಡುತ್ತಿರುವ ಕೆಲಸ ಏನು, ಇದರಿಂದ ನಷ್ಟಗಳು ಸಂಭವಿಸಬಹುದೇ ಎಂದು ಯೋಚನೆ ಕೂಡ ಮಾಡುವುದಿಲ್ಲ. ವಿವೇಚನಾರಹಿತವಾಗಿ ಕೆಲಸ ಮಾಡುವ ಜನರು ನಿಜವಾಗಿಯೂ ಮೂರ್ಖರು. ಇವರು ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳಿಂದಲೇ ಸಂಕಷ್ಟಕ್ಕೆ ಈಡಾಗುತ್ತಾರೆ. ಹೀಗಾಗಿ ಈ ವ್ಯಕ್ತಿಗಳ ಸಹವಾಸ ಮಾಡುವುದು ಸರಿಯಲ್ಲ. ಮಾಡಿದರೆ ನಾವು ಕೂಡ ಅವರ ನಷ್ಟದಲ್ಲಿ ಭಾಗಿಯಾಗಬೇಕಾಗುತ್ತದೆ.
ಅನಾವಶ್ಯಕ ಸಲಹೆ ನೀಡುವ ವ್ಯಕ್ತಿಗಳು : ಕೆಲವರು ತನ್ನ ಆತ್ಮೀಯ ಅಥವಾ ಸುತ್ತಲಿನ ವ್ಯಕ್ತಿಗಳಿಗೆ ಬೇಕಾಬಿಟ್ಟಿ ಸಲಹೆಗಳನ್ನು ನೀಡುವುದನ್ನು ನೋಡಿರಬಹುದು. ಆದರೆ ಈ ಜನರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಅನುಸರಿಸುವ ಮಾರ್ಗವು ಇದಾಗಿರುತ್ತದೆ. ಇವರಿಗೆ ಯಾವುದೇ ಜ್ಞಾನವಿರುವುದಿಲ್ಲ. ಸಲಹೆಗಳನ್ನು ನೀಡುವ ಮೂಲಕ ತಮ್ಮನ್ನು ತಾವೇ ಬುದ್ಧಿವಂತರೆಂದು ಕೊಂಡಿರುತ್ತಾರೆ ಎಂದಿದ್ದಾರೆ ಆಚಾರ್ಯ ಚಾಣಕ್ಯ.