AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Halbai Recipe : ಬಾಯಲ್ಲಿಟ್ಟರೆ ಕರಗುವ ಸಾಂಪ್ರದಾಯಿಕ ಶೈಲಿಯ ಸಿಹಿ ತಿನಿಸು ಹಾಲುಬಾಯಿ, ಇಲ್ಲಿದೆ ಸಿಂಪಲ್ ರೆಸಿಪಿ

ಸಿಹಿ ತಿಂಡಿ ಎಂದರೆ ಎಲ್ಲರಿಗೂ ಕೂಡ ಅಷ್ಟೇ. ಫಟಾ ಫಟಾ ಎಂದು ಮಾಡಿ ಸವಿಯಬಹುದಾದ ಸಿಹಿ ತಿಂಡಿಗಳಲ್ಲಿ ಕರ್ನಾಟಕದ ವಿಶೇಷ ರೆಸಿಪಿ ಹಾಲುಬಾಯಿ ಕೂಡ ಒಂದು. ಬಾಯಲ್ಲಿಟ್ಟರೆ ಕರಗುವ ಈ ರೆಸಿಪಿಯನ್ನು ಅಕ್ಕಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ. ಈ ಹಾಲುಬಾಯಿಯನ್ನು ರಾಗಿ ಹಿಟ್ಟಿನಿಂದಲೂ ತಯಾರಿಸಬಹುದು. ಹಾಗಾದ್ರೆ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿ ಹಾಲುಬಾಯಿ ಮಾಡೋದು ಹೇಗೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Halbai Recipe : ಬಾಯಲ್ಲಿಟ್ಟರೆ ಕರಗುವ ಸಾಂಪ್ರದಾಯಿಕ ಶೈಲಿಯ ಸಿಹಿ ತಿನಿಸು ಹಾಲುಬಾಯಿ, ಇಲ್ಲಿದೆ ಸಿಂಪಲ್ ರೆಸಿಪಿ
ಹಾಲುಬಾಯಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 09, 2024 | 4:49 PM

Share

ಕರ್ನಾಟಕ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದಾಗಿರುವ ಹಾಲುಬಾಯಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಿಹಿ ತಿನ್ನಬೇಕೇನಿಸಿದರೆ ಮನೆಯಲ್ಲಿ ಸುಲಭವಾಗಿ ಅಕ್ಕಿ ಹಾಲುಬಾಯಿ ಮಾಡಿ ಸವಿಯಬಹುದು. ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ಇದನ್ನು ಅಕ್ಕಿ ಮಣ್ಣಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಮನೆಯಲ್ಲಿ ಈ ಕೆಲವೇ ಕೆಲವು ಸಾಮಗ್ರಿಗಳಿದ್ದರೆ ಅಕ್ಕಿ ಹಾಲುಬಾಯಿ ಮಾಡಲು ಹೆಚ್ಚೇನು ಸಮಯ ಬೇಕಾಗಿಲ್ಲ, ಈ ಸಿಂಪಲ್ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಅಕ್ಕಿ ಹಾಲುಬಾಯಿ ಮಾಡಲು ಬೇಕಾಗುವ ಸಾಮಗ್ರಿಗಳು

* ಅಕ್ಕಿ- 1 ಕಪ್

* ತುಪ್ಪ- 3 ಚಮಚ

* ಬೆಲ್ಲ- ಒಂದು ಕಪ್

* ತೆಂಗಿನ ಹಾಲು

* ಏಲಕ್ಕಿ ಪುಡಿ

* ರುಚಿಗೆ ತಕ್ಕಷ್ಟು ಉಪ್ಪು

View this post on Instagram

A post shared by FOOD ISTA (@foodistamysuru)

ಮಾಡುವ ವಿಧಾನ

* ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೆನೆಸಿಡಿ. ಆ ಬಳಿಕ ಮಿಕ್ಸಿ ಜಾರಿಗೆ ಅಕ್ಕಿ, ಉಪ್ಪು ಹಾಗೂ ತೆಳುವಾದ ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

* ಒಂದು ಬಾಣಲೆಗೆ ತುಪ್ಪ ಸವರಿಕೊಂಡು ಒಲೆಯ ಮೇಲಿಟ್ಟು, ಅದಕ್ಕೆ ರುಬ್ಬಿದ ಹಿಟ್ಟು ಹಾಕಿಕೊಳ್ಳಿ.

* ತದನಂತರ ದಪ್ಪ ತೆಂಗಿನ ಹಾಲು ಹಾಗೂ ಅಗತ್ಯವಿರುವಷ್ಟು ಬೆಲ್ಲ, ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣಗೆ ಉರಿಯಲ್ಲಿ ಬೇಯಿಸಿಕೊಳ್ಳಿ. ಈ ಮಿಶ್ರಣವು ಗಂಟು ಗಂಟಾಗದಂತೆ ಆಗಾಗ ಕೈಯಾಡಿಸುತ್ತ ಇರಿ.

* ಸ್ವಲ್ಪ ಸಮಯದ ನಂತರ ಹಿಟ್ಟು ದಪ್ಪಗಾಗುತ್ತದೆ, ಇದಕ್ಕೆ ಒಂದೆರಡು ಚಮಚ ತುಪ್ಪ ಹಾಕಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ.

* ಈ ಹಿಟ್ಟು ಗಟ್ಟಿಯಾಗುತ್ತಿದ್ದಂತೆ ಒಂದು ದೊಡ್ಡದಾದ ಪ್ಲೇಟಿನ ಮೇಲೆ ಬಾಳೆಎಲೆ ಇಟ್ಟು ತುಪ್ಪ ಸವರಿಕೊಳ್ಳಿ. ಇದಕ್ಕೆ ಈ ಮಿಶ್ರಣವನ್ನು ಹಾಕಿ ಹರಡಿಕೊಳ್ಳಿ.

* ತಣ್ಣಗಾದ ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಅಕ್ಕಿ ಹಾಲುಬಾಯಿ ಸವಿಯಲು ಸಿದ್ಧ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ