Chanakya Niti: ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ

ಹಣ ಗಳಿಸಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ಇನ್ನೂ ಕೆಲವರು ಅಡ್ಡದಾರಿಯ ಮೂಲಕ ಸಂಪಾದನೆಯನ್ನು ಮಾಡುತ್ತಾರೆ. ಹೀಗೆ ಅಡ್ಡ ದಾರಿಯಲ್ಲಿ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ, ಇದು ಎಂದಿಗೂ ನಿಮಗೆ ಸಮೃದ್ಧಿಯನ್ನು ತರುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಯಾವ ಮಾರ್ಗಗಳ ಮೂಲ ಹಣ ಗಳಿಸಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ
ಚಾಣಕ್ಯ ನೀತಿ
Image Credit source: Getty Images

Updated on: Oct 02, 2025 | 5:03 PM

ಈಗ ಹಣ (money) ಎಷ್ಟಿದ್ದರೂ ಸಾಕಾಗುವುದಿಲ್ಲ. ಹಣ ಸಂಪಾದನೆ ಮಾಡಲು, ಶ್ರೀಮಂತಿಕೆಯನ್ನು ಗಳಿಸಲು ಜನ ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಹೀಗೆ ಹಣ ಗಳಿಸುವುದು ಮಾತ್ರವಲ್ಲ ಅದನ್ನು ಸರಿಯಾದ ಮಾರ್ಗದಲ್ಲಿ ಗಳಿಸುವುದು ತುಂಬಾನೇ ಮುಖ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಕೆಲವರು ಕ್ಷಣಿಕ ಶ್ರೀಮಂತಿಕೆಯ ಆಸೆಗಾಗಿ ಅಡ್ಡ ದಾರಿಯಲ್ಲಿ ಗಣ ಗಳಿಸುತ್ತಾರೆ. ಆದರೆ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬಾರದು. ಇದರಿಂದ ಶ್ರೀಮಂತಿಕೆ ಗಳಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳುತ್ತಾರೆ. ಚಾಣಕ್ಯರು (Chanakya) ತಮ್ಮ ನೀತಿಯಲ್ಲಿ ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅದರಲ್ಲಿ ಹಣಕ್ಕೆ ಸಂಬಂಧಿಸಿದ ವಿಚಾರವೂ ಒಂದು. “ಅನ್ಯಾಯ, ಅಪ್ರಾಮಾಣಿಕತೆ ಮತ್ತು ತಪ್ಪು ವಿಧಾನಗಳಿಂದ ಗಳಿಸಿದ ಸಂಪತ್ತು ಕೇವಲ ಹತ್ತು ವರ್ಷಗಳ ಕಾಲ ಇರುತ್ತದೆ. ಹನ್ನೊಂದನೇ ವರ್ಷದ ಹೊತ್ತಿಗೆ ಅದು ಸಂಪೂರ್ಣವಾಗಿ ಕಳೆದುಹೋಗುತ್ತದೆ” ಎಂದು ಅವರು ಹೇಳಿದ್ದಾರೆ.

ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ:

ಅನೈತಿಕ ಮಾರ್ಗಗಳ ಮೂಲಕ ಗಳಿಸಿದ ಹಣ: ಚಾಣಕ್ಯರ ಪ್ರಕಾರ , ಅನೈತಿಕ ವಿಧಾನಗಳ ಮೂಲಕ ಗಳಿಸಿದ ಸಂಪತ್ತು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಇದರರ್ಥ ನೀವು ನಿಯಮಗಳನ್ನು ಮುರಿದು ಅಡ್ಡ ದಾರಿಯಲ್ಲಿ ಹಣ ಗಳಿಸಿದರೆ, ಅದು ನಿಮ್ಮನ್ನು ಬಡತನಕ್ಕೆ ಕೊಂಡೊಯ್ಯುತ್ತದೆ. ಉದಾಹರಣೆಗೆ ನೀವು ಲಂಚ ಸ್ವೀಕರಿಸಿ ಅಥವಾ ಸುಳ್ಳು ಹೇಳಿ, ಇನ್ನೊಬ್ಬರಿಗೆ ಮೋಸ ಮಾಡಿ  ಹಣ ಗಳಿಸಲು ಬಯಸಿದರೆ ಹಣ ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ.

ವಂಚನೆಯಿಂದ ಗಳಿಸಿದ ಹಣ: ನೀವು ಯಾರನ್ನಾದರೂ ಮೋಸ ಮಾಡಿ, ವಂಚನೆಯ ಮೂಲಕ ಹಣ, ಸಂಪತ್ತು ಗಳಿಸಿದರೆ ಅಂತಹ ಸಂಪತ್ತು ಸಹ ನಿಮಗೆ ಸಮೃದ್ಧಿಯನ್ನು ತರುವುದಿಲ್ಲ. ಇತರನ್ನು ನೋಯಿಸಿ, ತೊಂದರೆಕೊಟ್ಟು ಗಳಿಸಿದ ಹಣವು ಮಾನಸಿಕ ಯಾತನೆಯನ್ನು ಉಂಟುಮಾಡುವುದಲ್ಲದೆ, ವಂಚನೆ ಜಗತ್ತಿಗೆ ಗೊತ್ತಾದರೆ ಮಾನ ಮರ್ಯಾದೆಯೂ ಹರಾಜಾಗುತ್ತದೆ. ಹಾಗಾಗಿ ಇಂತಹ ಸಂಪಾದನೆ ಬೇಡ್ವೇ ಬೇಡ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ
ಈ ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ನೀವು ಮೌನವಾಗಿರುವುದು ಒಳ್ಳೆಯದು
ಈ ವಿಚಾರಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ
ಇಂತಹ ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಹೊಂದುವುದಿಲ್ಲ
ಈ ನಾಲ್ಕು ವಿಚಾರಗಳ ಬಗ್ಗೆ ಸಂಕೋಚ, ನಾಚಿಕೆ ಪಡಬಾರದು

ಇದನ್ನೂ ಓದಿ: ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ನೀವು ಮೌನವಾಗಿದ್ದಷ್ಟು ಒಳ್ಳೆಯದು

ಕಳ್ಳತನದಿಂದ ಗಳಿಸಿದ ಹಣ:  ಆಚಾರ್ಯ ಚಾಣಕ್ಯರ ಪ್ರಕಾರ, ಕಳ್ಳತನದಿಂದ ಗಳಿಸಿದ ಹಣದಿಂದ ಯಾವುದೇ ಪ್ರಯೋಜನವೂ ಇಲ್ಲ. ಹಣವನ್ನು ಕದಿಯುವುದರಿಂದ ಯಾವುದೇ ಆಧ್ಯಾತ್ಮಿಕ ತೃಪ್ತಿ ದೊರೆಯುವುದಿಲ್ಲ, ಮತ್ತು ಕಳ್ಳತನ ಮಾಡುವ ವ್ಯಕ್ತಿಯು ಸಮಾಜದಲ್ಲಿ ಗೌರವವನ್ನು ಸಹ ಕಳೆದುಕೊಳ್ಳುತ್ತಾನೆ. ಹಣವನ್ನು ಕದಿಯುವ ವ್ಯಕ್ತಿಯು ಕ್ರಮೇಣ ಆರ್ಥಿಕವಾಗಿ ಕ್ಷೀಣಿಸುತ್ತಾನೆ, ಆತ ಎಂದಿಗೂ ಸಮೃದ್ಧಿಯನ್ನು ಹೊಂದುವುದಿಲ್ಲ. ಹಾಗಾಗಿ ಯಾವಾಗಲೂ ಹಣ ಸಂಪಾದನೆ ಸತ್ಯ ಮಾರ್ಗದ ಮೂಲಕವೇ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Thu, 2 October 25