AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರ ಜೀವನ ಒಂದೇ ತರ ಇರೋಲ್ಲ; ದೋಸೆ ತರಲು ಹೋಗಿ ಜೀವನ ಪಾಠ ಕಲಿತು ಬಂದ ಟೆಕ್ಕಿ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ತಮ್ಮ ಜೀವನದಲ್ಲಿ ನಡೆಯುವಂತಹ ಒಂದಷ್ಟು ಇಂಟೆಸ್ಟಿಂಗ್‌ ಸಂಗತಿಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಬೆಂಗಳೂರಿನ ಟೆಕ್ಕಿಯೊಬ್ರು ಸುಂದರ ಕಥೆಯನ್ನು ಹಂಚಿಕೊಂಡಿದ್ದು, ದಾವಣಗೆರೆ ಬೆಣ್ಣೆ ದೋಸೆ ಪಾರ್ಸೆಲ್‌ ತರಲು ಹೋಗಿ, ಅಲ್ಲಿ ದೋಸೆ ಹಾಕ್ತಿದ್ದವನ ಅಸಹಾಯಕತೆನ್ನು ಕಂಡು ಜೀವನಪಾಠವನ್ನು ಕಲಿತೆ ಎಂದು ಹೇಳಿದ್ದಾರೆ.

ಎಲ್ಲರ ಜೀವನ ಒಂದೇ ತರ ಇರೋಲ್ಲ; ದೋಸೆ ತರಲು ಹೋಗಿ ಜೀವನ ಪಾಠ ಕಲಿತು ಬಂದ ಟೆಕ್ಕಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Oct 02, 2025 | 3:39 PM

Share

ಒಂದು ಸಣ್ಣ ಕಷ್ಟ ಬಂದ್ರೂ, ದೇವ್ರೆ ಈ ಕಷ್ಟವೆಲ್ಲಾ ನಮಗೆ ಮಾತ್ರ ಬರುತ್ತಾ ಅಂತ ಗೊಣಗುತ್ತಿರುತ್ತೇವೆ. ಆದ್ರೆ ಇನ್ನೊಬ್ಬರನ್ನು ಕಣ್ಣಾರೆ ನೋಡಿದಾಗ ಮಾತ್ರ ಅವರು ನಮಗಿಂತ ದೊಡ್ಡ ನೋವನ್ನು ಅನುಭವಿಸಿದರೂ ಅದನ್ನೆಲ್ಲಾ ಬದಿಗಿಟ್ಟು ಜೀವನವನ್ನು ಸಾಗಿಸುವ ಸಲುವಾಗಿ ಹೋರಾಟ ನಡೆಸುತ್ತಿರುತ್ತಾರೆ ಎಂಬುದು ಗೊತ್ತಾಗುತ್ತದೆ. ಇಂತಹದ್ದೇ ಒಂದು ಭಾವನಾತ್ಮಕ ಕಥೆಯನ್ನು ಬೆಂಗಳೂರಿನ ಟೆಕ್ಕಿಯೊಬ್ಬರು ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ದೋಸೆ ಪಾರ್ಸೆಲ್‌ ತರಲು ಹೋಗಿ, ಜೀವನ ಪಾಠವನ್ನು (life lesson) ಕಲಿತು ಬಂದೆ ಎಂದು ಅವರು ಹೇಳಿದ್ದಾರೆ.

ದೋಸೆ ತರಲು ಹೋಗಿ ಜೀವನ ಪಾಠ ಕಲಿತು ಬಂದ ಟೆಕ್ಕಿ:

ದಾವಣಗೆರೆ ಬೆಣ್ಣೆ ದೋಸೆ ಪಾರ್ಸೆಲ್‌ ತರಲು ಹೋಗಿ, ಜೀವನಪಾಠವನ್ನು ಕಲಿತು ಬಂದ ಕಥೆಯನ್ನು ಬೆಂಗಳೂರಿನ ಟೆಕ್ಕಿಯೊಬ್ರು cornerdemusk ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಮನೆಯಲ್ಲಿ ಪೂಜೆಯಿದ್ದ ಕಾರಣ ಉಪಹಾರ ತಯಾರಿಸಲು ತಡವಾಯಿತು. ಹಸಿವು ತಡೆಯಲಾರದೆ ನಾನು ದಾವಣಗೆರೆ ಬೆಣ್ಣೆ ದೋಸೆ ಪಾರ್ಸೆಲ್‌ ತರಲು ನಿರ್ಧರಿಸಿದೆ. ಅಂಗಡಿ ಬಳಿ ಹೋದಾಗ ಫುಲ್‌ ರಶ್‌ ಇತ್ತು. ಕೋಪದಲ್ಲಿಯೇ ಬೆಣ್ಣೆ ದೋಸೆಗಾಗಿ ಕಾಯುತ್ತಿದ್ದೆ. ಆ ಸಂದರ್ಭದಲ್ಲಿ ದೋಸೆ ತಯಾರಿಸುತ್ತುದ್ದ ವ್ಯಕ್ತಿ ದೋಸೆ ಹಾಕುವ ಮಧ್ಯೆಯೇ ತನ್ನ ಕಾಲುಗಳ ಮೇಲೆ ಕೈ ಹಾಕಿದ, ಬಹುಶಃ ತುರಿಕೆ ಇರ್ಬೇಕು ಎಂದು ಅಂದುಕೊಂಡೆ, ಆದ್ರೆ ಸರಿಯಾಗಿ ಗಮನಿಸಿದಾಗ ಆತನ ಕಾಲಿಗೆ ಬ್ಯಾಂಡೇಜ್‌ ಸುತ್ತಿದ್ದನ್ನು ಗಮನಿಸಿದೆ.

ಪೋಸ್ಟ್ ಇಲ್ಲಿದೆ ನೋಡಿ:

I went to get breakfast today… and ended up questioning everything. byu/cornerdemusk inbangalore

ಆ ಬಿಸಿ ತವಾದ ಮುಂದೆ ಕಾಲು ನೋವಿದ್ದರೂ ಆತ ನಿಂತು ಕೆಲಸ ಮಾಡುವುದನ್ನು ನೋಡಿ ತುಂಬಾ ದುಃಖವಾಯಿತು. ನನಗೇನಾದರೂ ಕಾಲು ನೋವಿದ್ದರೆ ನಾನು ಸ್ವಿಗ್ಗಿಯಲ್ಲಿ ಫುಡ್‌ ಆರ್ಡರ್‌ ಮಾಡಿ ವಿಶ್ರಾಂತಿ ಪಡೆಯುತ್ತಿದ್ದೆ. ಆದ್ರೆ ಈ ವ್ಯಕ್ತಿ ತನ್ನ ಜೀವನ ಸಾಗಿಸಲು ಕಾಲು ನೋವಿದ್ದರೂ ದುಡಿಯುತ್ತಲೇ ಇದ್ದನು. ಇದನ್ನೆಲ್ಲಾ ನೋಡಿದಾಗ ಎಲ್ಲರ ಜೀವನ ಒಂದೇ ತರ ಇರೋಲ್ಲ ಎಂದು ಭಾಸವಾಯಿತು. ದೋಸೆ ಪಾರ್ಸಲ್‌ ಮಾಡಲು ತಡ ಮಾಡ್ತಿದ್ದಾರಲ್ಲ ಎಂದು ಕೋಪದಲ್ಲಿದ್ದ ನನ್ನ ಭಾವನೆ ಬೇಸರದೆಡೆಗೆ ತಿರುಗಿತು.

ನಮಗೆ ಸೇವೆ ಸಲ್ಲಿಸುವವರು ಸ್ವಲ್ಪ ತಡ ಮಾಡಿದರೆಂದು ಕೋಪ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರು ಯಾವ ಕಷ್ಟದೊಂದಿಗೆ ಹೋರಾಟ ಮಾಡುತ್ತಿದ್ದಾರೋ ಎಂಬುದು ನಮಗೆ ಗೊತ್ತಿರುವುದಿಲ್ಲ ಅಲ್ವಾ. ಎಲ್ಲರೊಂದಿಗೂ ದಯೆಯಿಂದ ವರ್ತಿಸಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಅಂತೆ; ಯಾಕೆ ಗೊತ್ತಾ?

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೌಕರರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ, ಅನಾರೋಗ್ಯ ರಜೆ ಅವರಿಗೆ ಸಿಗುವುದೇ ಇಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿಯೊಬ್ಬರಿಗೂ ತಮ್ಮದೇ ಆದ ಸವಾಲುಗಳು ಇದ್ದೇ ಇರುತ್ತವೆ, ಎಲ್ಲರ ಬಗ್ಗೆಯೂ ದಯೆ ಇರಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮಗೆ ಸೇವೆ ಸಲ್ಲಿಸುವ ಪ್ರತಿಯೊಬ್ಬರಿಗೂ ಸಣ್ಣ ಧನ್ಯವಾದಗಳನ್ನು ತಿಳಿಸಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ