
ಈ ಸಮಾಜದಲ್ಲಿ ಪುರುಷರನ್ನು ಬಲಿಷ್ಠರಾಗಿ ಹಾಗೂ ಮಹಿಳೆಯರನ್ನು (women) ಹೆಚ್ಚಾಗಿ ಭಾವನಾತ್ಮಕವಾಗಿ ಕಾಣಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಭಾವನಾತ್ಮಕವಾಗಿ ಬಲಶಾಲಿಗಳಲ್ಲಾ ಎನ್ನುವ ಮಾತಿದೆ. ಆದರೆ ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಕೆಲವೊಂದು ವಿಚಾರಗಳಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್. ಅದರಲ್ಲೂ ಮಹಿಳೆಯರು ಭಾವನಾತ್ಮಕವಾಗಿ ಹೆಚ್ಚು ಬಲಶಾಲಿಗಳು, ಅವರು ಅತ್ಯಂತ ಕಷ್ಟದ ಸಮಯಗಳಲ್ಲಿಯೂ ಸಹ ಶಾಂತತೆಯನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಕುಟುಂಬದ ಸಂತೋಷಕ್ಕಾಗಿ ದೊಡ್ಡ ತ್ಯಾಗಗಳನ್ನು ಮಾಡುವ ಧೈರ್ಯ ಮಹಿಳೆಗೆ ಮಾತ್ರ ಇದೆ ಎಂದು ಹೇಳಿದ್ದಾರೆ. ಹಾಗಿದ್ರೆ ಇವರ ಪ್ರಕಾರ ಮಹಿಳೆಯರು ಯಾವೆಲ್ಲಾ ವಿಚಾರದಲ್ಲಿ ಪುರುಷರಿಗಿಂತ ಸಿಕ್ಕಾಪಟ್ಟೆ ಸ್ಟ್ರಾಂಗ್ ಅನ್ನೋದನ್ನು ನೋಡೋಣ.
ಸಮನ್ವಯ ಮತ್ತು ಸಂಬಂಧ ನಿರ್ವಹಣೆಯ ಕಲೆ: ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಂಬಂಧಗಳನ್ನು ಪೋಷಿಸುವ ಮತ್ತು ಸಂಬಂಧ ಒಡೆಯುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಚಾಣಕ್ಯರು ಹೇಳಿದ್ದಾರೆ. ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಸಹಿಷ್ಣುರು ಮತ್ತು ಕೆಲವೊಮ್ಮೆ ಕುಟುಂಬದ ಐಕ್ಯತೆಗಾಗಿ ರಾಜಿ ಮಾಡಿಕೊಳ್ಳಲು ಮತ್ತುಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಮನೆಯಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಯಾವಾಗ ಮೌನವಾಗಿರಬೇಕು ಮತ್ತು ಯಾವಾಗ ಮಾತಾಡಬೇಕು ಎಂಬುದು ಅವರಿಗೆ ತಿಳಿದಿದೆ. ಪುರುಷರು ಹೆಚ್ಚು ಸಂಪಾದನೆ ಮಾಡಬಹುದು ಆದರೆ ಕುಟುಂಬದಲ್ಲಿ ಪ್ರೀತಿಯನ್ನು ಕಾಪಾಡುವ ತಾಕತ್ತು ಕೇವಲ ಮಹಿಳೆಯರಲ್ಲಿ ಮಾತ್ರ ಇರುವುದು.
ಬುದ್ಧಿವಂತಿಕೆ ಮತ್ತು ಬಿಕ್ಕಟ್ಟು ಪರಿಹಾರ: ಚಾಣಕ್ಯನ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರು ಮತ್ತು ದೂರದೃಷ್ಟಿಯುಳ್ಳವರು. ಅವರು ಯಾವುದೇ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಬುದ್ಧಿವಂತಿಕೆಯನ್ನು ಬಳಸುತ್ತಾರೆ. ಮಹಿಳೆಯರು ಹೆಚ್ಚಾಗಿ ಭವಿಷ್ಯದವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಪುರುಷರು ಆತುರ ಅಥವಾ ದುರಹಂಕಾರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತಪ್ಪುಗಳು ಆಗುವುದೇ ಹೆಚ್ಚು.
ಇದನ್ನೂ ಓದಿ: ಕೌಟುಂಬಿಕ ಕಲಹಗಳಿಗೆ ಮೂಲ ಕಾರಣವೇ ಈ ಅಂಶಗಳು ಎನ್ನುತ್ತಾರೆ
ಸಂವಹನ ಮತ್ತು ಉತ್ತಮ ನಡವಳಿಕೆ: ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಸಂವಹನ ಕಲೆಯಿದೆ. ಚಾಣಕ್ಯರ ಪ್ರಕಾರ ಮಹಿಳೆಯರು ಯಾವಾಗಲೂ ಚಿಂತನಶೀಲವಾಗಿ ಮಾತನಾಡುತ್ತಾರೆ. ಹೃದಯವನ್ನು ಹೇಗೆ ಗೆಲ್ಲುವುದು ಅಥವಾ ತಮ್ಮ ಮಾತುಗಳಿಂದ ಸಮಸ್ಯೆಯನ್ನು ಹೇಗೆ ಸರಿಪಡಿಸುವುದು ಎಂದು ಅವರಿಗೆ ತಿಳಿದಿದೆ. ಆದರೆ ಪುರುಷರು ಹೆಚ್ಚಾಗಿ ಕೋಪದಿಂದ ಕಠಿಣ ಮಾತುಗಳನ್ನಾಗಿ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Sun, 28 December 25