
ಕೋಪ (Anger) ಮತ್ತು ಕೋಪದಲ್ಲಿ ಮಾತನಾಡುವ ಕೆಲವೊಂದು ಪದಗಳು ಸಂಬಂಧವನ್ನೇ ಹಾಳು ಮಾಡುತ್ತದೆ. ಅದಕ್ಕಾಗಿಯೇ ಅತಿಯಾದ ಕೋಪ ಒಳ್ಳೆಯದಲ್ಲ ಎಂದು ಹೇಳುವುದು. ಅದರಲ್ಲೂ ಈ ಮೂರು ವಿಷಯಗಳ ಬಗ್ಗೆ ಕೋಪಗೊಳ್ಳಲೇಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೌದು ಈ ಮೇಲೆ ಕೋಪಗೊಳ್ಳುವ ಬದಲು ಬುದ್ಧಿವಂತಿಕೆಯಿಂದ, ಶಾಂತ ರೀತಿಯಲ್ಲಿ ವರ್ತಿಸುವುದು ಉತ್ತಮ ಎಂದಿದ್ದಾರೆ. ಆ ಮೂರು ವಿಷಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಪುಟ್ಟ ಮಕ್ಕಳ ತಪ್ಪುಗಳ ಬಗ್ಗೆ: ಚಿಕ್ಕ ಮಕ್ಕಳು ಕಲಿಕೆಯ ಹಂತದಲ್ಲಿರುತ್ತಾರೆ. ಏನಾದರೂ ಕಲಿಯುವಾಗ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೋಪಗೊಂಡರೆ ಅಥವಾ ಗದರಿಸಿದರೆ, ಮಕ್ಕಳು ಭಯಪಡುತ್ತಾರೆ. ಈ ಭಯದಿಂದಾಗಿ ಅವರ ಕಲಿಕಾ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹಿರಿಯರ ಮಾತಿನ ಮೇಲೆ: ಕೆಲವೊಮ್ಮೆ ಹಿರಿಯರ ಮಾತುಗಳು ನಮ್ಮ ಸ್ವಂತ ಆಲೋಚನೆಗೆ ಹೊಂದಿಕೆಯಾಗುವುದಿಲ್ಲ, ಅವರು ಪದೇ ಪದೇ ಹೇಳಿದ್ದನ್ನೇ ಹೇಳಿ ಕಿರಿಕಿರಿ ಮಾಡುತ್ತಾರೆ ಎಂದು ಹಲವರು ಕೋಪಗೊಳ್ಳುತ್ತಾರೆ. ಹೀಗೆ ಹಿರಿಯರ ಮಾತಿನ ಮೇಲೆ ಕೋಪಗೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಚಾಣಕ್ಯರು.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಈ ಗುಣಗಳಿರುವ ಹೆಣ್ಣಿದ್ದರೆ ಆ ಮನೆ ಬಂಗಾರದಂತಿರುತ್ತದೆ
ಪ್ರತಿಕೂಲ ಸಂದರ್ಭಗಳಲ್ಲಿ ಕೋಪಗೊಳ್ಳಬಾರದು: ಆಚಾರ್ಯ ಚಾಣಕ್ಯ ಹೇಳುವಂತೆ, ಕೆಲವೊಮ್ಮೆ ನಾವು ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸನ್ನಿವೇಶಗಳನ್ನು ಎದುರಿಸುತ್ತೇವೆ. ಅಂತಹ ಸಂದರ್ಭಗಳಲ್ಲಿ, ಕೋಪವು ಸಮಸ್ಯೆಗಳನ್ನು ಬಗೆಹರಿಸುವ ಬದಲು ಅವುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ ಅಂತಹ ಸಂದರ್ಭಗಳಲ್ಲಿ, ನೀವು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು ಮತ್ತು ಬುದ್ಧಿವಂತಿಕೆಯಿಂದ ವರ್ತಿಸಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ