Chanakya Niti: ಯುವಕರೇ… ನೀವು ಇಂತಹ ಹುಡುಗಿಯರನ್ನು ಮದುವೆಯಾದ್ರೆ ಅದೃಷ್ಟ ಎನ್ನುತ್ತಾರೆ ಚಾಣಕ್ಯ
ಒಂದು ಕುಟುಂಬವು ಸಂತೋಷದಿಂದ ಮತ್ತು ಶಾಂತಿಯುತವಾಗಿ ಇರಬೇಕೆಂದರೆ ಅಲ್ಲಿ ಮಹಿಳೆಯ ಪಾತ್ರ ಬಹು ಮುಖ್ಯವಾಗಿರುತ್ತದೆ. ಹಾಗಾಗಿ ಪುರುಷರು ಮದುವೆಯಾಗುವಾಗ ಒಳ್ಳೆಯ ಗುಣಗಳಿರುವ ಹೆಣ್ಣನ್ನೇ ಆಯ್ಕೆ ಮಾಡಬೇಕು. ಅದರಲ್ಲೂ ಈ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಹೆಣ್ಣು ಮನೆಯ ನಿಜವಾದ ಮಹಾಲಕ್ಷ್ಮಿ, ಅಂತಹ ಹೆಣ್ಣನ್ನು ಮದುವೆಯಾದರೆ ಸೂಕ್ತ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.

ಆಚಾರ್ಯ ಚಾಣಕ್ಯರು (Acharya Chanakya) ವೃತ್ತಿ ಜೀವನ, ದಾಂಪತ್ಯ ಜೀವನ ಮಾತ್ರವಲ್ಲ ಮಹಿಳೆಯರಿಗೆ ಸಂಬಂಧಿಸಿ ಹತ್ತು ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಮಹಿಳೆಯರ ವರ್ತನೆ ಹೇಗಿರಬೇಕು, ಸಂಸಾರ ಸುಖವಾಗಿ ಸಾಗಲು ಮಹಿಳೆ ಹೇಗಿದ್ದರೆ ಚೆಂದ ಎಂಬುದನ್ನು ತಿಳಿಸಿದ್ದಾರೆ. ಅದೇ ರೀತಿ ಅವರು ಒಂದು ಕುಟುಂಬವು ಸಂತೋಷದಿಂದ ಮತ್ತು ಶಾಂತಿಯುತವಾಗಿ ಇರಬೇಕೆಂದರೆ ಅಲ್ಲಿ ಹೆಣ್ಣು ಬಹುಮುಖ್ಯ ಪಾತ್ರ ವಹಿಸುವ ಕಾರಣ ಪುರುಷರು ಈ ಗುಣಗಳನ್ನು ಹೊಂದಿರುವ ಮಹಿಳೆಯರನ್ನೇ ಮದುವೆಯಾಗಬೇಕು ಎಂದಿದ್ದಾರೆ. ಹಾಗಿದ್ರೆ ಎಂತಹ ಹೆಣ್ಣನ್ನು ಮದುವೆಯಾದರೆ ಅದೃಷ್ಟ ಎಂಬುದನ್ನು ನೋಡೋಣ ಬನ್ನಿ.
ಯುವಕರು ಈ ಗುಣಗಳಿರುವ ಹೆಣ್ಣನ್ನು ಮದುವೆಯಾಗಬೇಕಂತೆ:
ತಾಳ್ಮೆ ಮತ್ತು ಸಹಿಷ್ಣುತೆ: ಚಾಣಕ್ಯನ ಪ್ರಕಾರ, ಶಾಂತ ಸ್ವಭಾವದ ಮಹಿಳೆಯರು ಲಕ್ಷ್ಮಿಯ ಸ್ವರೂಪ. ಅಂತಹ ಹೆಣ್ಣು ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕೋಪಗೊಳ್ಳುವುದಿಲ್ಲ, ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸುವ ಸಾಮರ್ಥ್ಯ ಆಕೆಗಿರುತ್ತದೆ. ಜೊತೆಗೆ ಆಕೆ ಕಷ್ಟದ ಸಮಯಗಳಲ್ಲಿ ಗಂಡನಿಗೆ ಬೆಂಬಲವಾಗಿ ನಿಲ್ಲುತ್ತಾಳೆ.
ವಿದ್ಯಾವಂತೆ: ಚಾಣಕ್ಯರು ಹೇಳುವಂತೆ ವಿದ್ಯಾವಂತ, ಸುಸಂಸ್ಕೃತ ಮತ್ತು ಸಂಸ್ಕಾರವಂತ ಮಹಿಳೆಯರಿಗೆ ಕುಟುಂಬವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿರುತ್ತದೆ. ಸರಿ ತಪ್ಪುಗಳ ಅರಿವಿರಿವ ಅವರು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಗಂಡನಿಗೆ ಯಾವುದೇ ಹೊರೆಯಾಗದಂತೆ ಕುಟುಂಬವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.
ವ್ಯಕ್ತಿತ್ವ: ಒಳ್ಳೆಯ ವ್ಯಕ್ತಿತ್ವವೂ ತುಂಬಾನೇ ಮುಖ್ಯ. ಕೋಪ ಮಾಡಿಕೊಳ್ಳದೆ ಯಾವಾಗಲೂ ಮೃದುವಾಗಿ ಮತ್ತು ಸಿಹಿ ಮಾತುಗಳನ್ನಾಡುವ ಮಹಿಳೆಯರು ಮನೆಯವರನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ. ಇವರು ಮನೆಯ ಸಂತೋಷವನ್ನೂ ಹೆಚ್ಚಿಸುತ್ತಾರೆ.
ಹಣ ಉಳಿಸುವ ಸಾಮರ್ಥ್ಯ: ಅನಗತ್ಯ ಖರ್ಚುಗಳನ್ನು ತಪ್ಪಿಸುವ ಮೂಲಕ ಹಣ ಉಳಿಸುವ ಸಾಮರ್ಥ್ಯವನ್ನು ಹೊಂದಿರುವ ಮಹಿಳೆಯರು ಅದೃಷ್ಟವಂತರು ಎಂದು ಚಾಣಕ್ಯ ಹೇಳುತ್ತಾರೆ. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವವರು ಅನಗತ್ಯ ಖರ್ಚುಗಳನ್ನು ಮಾಡುವುದಿಲ್ಲ. ಜೊತೆಗೆ ಅವರು ಕುಟುಂಬವನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸುತ್ತಾರೆ.
ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡುವ ತಪ್ಪನ್ನು ಮಾಡಲೇಬೇಡಿ
ಎಲ್ಲರಿಗೂ ಗೌರವ: ಕುಟುಂಬದಲ್ಲಿರುವ ಪ್ರತಿಯೊಬ್ಬರನ್ನು ಗೌರವಿಸುವ ಗುಣ ಮಹಿಳೆಗೆ ಅತ್ಯಗತ್ಯ ಎಂದು ಚಾಣಕ್ಯರು ಹೇಳುತ್ತಾರೆ. ಮನೆಯ ಹಿರಿಯರನ್ನು ಮತ್ತು ಅತಿಥಿಗಳನ್ನು ಗೌರವಿಸುವ ಮತ್ತು ಗೌರವದಿಂದ ನಡೆಸಿಕೊಳ್ಳುವುದು ಮಹಿಳೆಗೆ ಇರಬೇಕಾದ ಮುಖ್ಯ ಗುಣ. ಎಲ್ಲರನ್ನೂ ಗೌರವಿಸುವ ಮಹಿಳೆ ಯಾವುದೇ ಧಕ್ಕೆ ಬರದಂತೆ ಕುಟುಂಬವನ್ನು ಮುನ್ನಡೆಸುತ್ತಾಳೆ.
ಈ ಎಲ್ಲಾ ಗುಣಗಳನ್ನು ಹೊಂದಿರುವ ಮಹಿಳೆ ಮನೆಯಲ್ಲಿ ಇದ್ದರೆ, ಮನೆಯಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಅದೃಷ್ಟ ಇರುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




