Chanakya Niti: ಪುರುಷರು ಇಂತಹ ಮಹಿಳೆಯರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಂದು ಮಹತ್ವದ ನಿರ್ಧಾರ. ಹಾಗಾಗಿ ಯೋಚಿಸಿ ಸರಿಯಾದ ಆಯ್ಕೆಯನ್ನು ಮಾಡಬೇಕು ಇಲ್ಲದಿದ್ದರೆ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಪುರುಷರು ಇಂತಹ ಮಹಿಳೆಯರನ್ನು ಎಂದಿಗೂ ಜೀವನ ಸಂಗಾತಿಯಾಗಿ ಆಯ್ಕೆ ಮಾಡಲೇಬಾರದು ಎನ್ನುತ್ತಾರೆ ಚಾಣಕ್ಯ. ಆ ಮಹಿಳೆಯರು ಯಾರು ಎಂಬ ಮಾಹಿತಿಯನ್ನು ತಿಳಿಯಿರಿ

Chanakya Niti: ಪುರುಷರು ಇಂತಹ ಮಹಿಳೆಯರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
Image Credit source: Pinterest

Updated on: Dec 02, 2025 | 5:53 PM

ಆಚಾರ್ಯ ಚಾಣಕ್ಯರು (Chanakya Niti) ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಯಶಸ್ಸಿಗಾಗಿ ಯಾವ ಹಾದಿಯಲ್ಲಿ ನಡೆಯಬೇಕು, ದಾಂಪತ್ಯ ಜೀವನ ಸುಖವಾಗಿ ಸಾಗಲು ಏನು ಮಾಡಬೇಕು ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ವಿಶೇಷವಾಗಿ ಪುರುಷರು ಈ ಒಂದಷ್ಟು ಗುಣಗಳಿರುವ ಮಹಿಳೆಯರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಬಾರದು, ಈ ಒಂದು ತಪ್ಪಿನಿಂದ ಜೀವವನೇ ನಾಶವಾಗಬಹುದು ಎಂದು ಎಚ್ಚರಿಸಿದ್ದಾರೆ.

ಇಂತಹ ಮಹಿಳೆಯರನ್ನು ಜೀವ ಸಂಗಾತಿಯಾಗಿ ಆಯ್ಕೆ ಮಾಡಬಾರದು:

  • ಕೆಲವು ಮಹಿಳೆಯರು ಪ್ರೀತಿ ಮತ್ತು ಮದುವೆಯಂತಹ ಭಾವನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಮಾತ್ರ ಬಳಸುತ್ತಾರೆ ಅಂತಹ ಮಹಿಳೆಯರು ಗುರಿ ಈಡೇರುವವರೆಗೂ ಪ್ರೀತಿಯನ್ನು ತೋರಿಸುತ್ತಾರೆ, ನಂತರ ಇದ್ದಕ್ಕಿದ್ದಂತೆ ದೂರ ಸರಿಯುತ್ತಾರೆ. ಇದು ಪುರುಷರಲ್ಲಿ ಮಾನಸಿಕ ಒತ್ತಡ, ಖಿನ್ನತೆ ಮತ್ತು ಪುರುಷನಲ್ಲಿ ಜೀವನ ಮೇಲಿನ ನಂಬಿಕೆ ಕಳೆದುಕೊಳ್ಳಲು ಕಾರಣವಾಗುತ್ತದೆ.
  • ದುರಹಂಕಾರ, ಅಸಭ್ಯ ವರ್ತನೆ, ಇತರರನ್ನು ಕೀಳಾಗಿ ನೋಡುವುದು ಮತ್ತು ಅವಮಾನಕರವಾಗಿ ಮಾತನಾಡುವುದು ಮುಂತಾದ ಗುಣಲಕ್ಷಣಗಳನ್ನು ಹೊಂದಿರುವ ಮಹಿಳೆಯರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡುವುದು ಸಹ ಒಳ್ಳೆಯದಲ್ಲ. ಏಕೆಂದರೆ ಇಂತಹ ಮಹಿಳೆಯರು ಇಡೀ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತಾರೆ.
  • ಶಿಕ್ಷಣದ ಕೊರತೆ, ಲೌಕಿಕ ಜ್ಞಾನದ ಕೊರತೆ ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥಳಾಗಿರುವ ಮಹಿಳೆ ಕುಟುಂಬವನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ. ಕಷ್ಟದ ಸಂದರ್ಭವನ್ನು ಆಕೆಯಿಂದ ನಿಭಾಯಿಸಲು ಸಾಧ್ಯವಿರುವುದಿಲ್ಲ. ಹಾಗಾಗಿ ಇಂತಹ ಮಹಿಳೆಯರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡುವುದು ಸೂಕ್ತವಲ್ಲ.
  • ಒಳ್ಳೆಯ ಸದ್ಗುಣ, ಸಂಸ್ಕಾರ, ಲೋಕಜ್ಞಾನ, ಉತ್ತಮ ಚಿಂತನೆ, ತಾಳ್ಮೆ ಮತ್ತು ತಿಳುವಳಿಕೆಯನ್ನು ಹೊಂದಿರುವ ಜೀವನ ಸಂಗಾತಿಯನ್ನೇ ಆಯ್ಕೆ ಮಾಡಬೇಕು. ಆಗ ಮಾತ್ರ ಜೀವನ ಸುಖವಾಗಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ