
ಯಶಸ್ಸನ್ನು (success) ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಹಲವರಿಗೆ ಸರಿಯಾದ ಮಾರ್ಗದರ್ಶವನೇ ಇರುವುದಿಲ್ಲ, ಇದರಿಂದ ಯಶಸ್ಸಿನ ಹಾದಿಯಲ್ಲಿ ಎಡವುತ್ತಾರೆ. ಇನ್ನೂ ಲೈಫಲ್ಲಿ ಸಕ್ಸಸ್ ಆದವರು ತಮ್ಮ ಯಶಸ್ಸಿನ ಗುಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸಿನ ಗುಟ್ಟನ್ನು ವಿವರಿಸಿದ್ದು, ಇದನ್ನು ನೀವು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಲೈಫಲ್ಲಿ ಸಕ್ಸಕ್ ಆಗ್ತೀರಿ. ಆ ಯಶಸ್ಸಿನ ಗುಟ್ಟು ಯಾವುದೆಂದು ನೋಡೋಣ ಬನ್ನಿ.
ಯೋಜನೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ: ಆಚಾರ್ಯ ಚಾಣಕ್ಯರು ನಿಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದು ಪೂರ್ಣಗೊಳ್ಳುವವರೆಗೆ ಅದನ್ನು ರಹಸ್ಯವಾಗಿಡಿ ಎಂದು ಸಲಹೆ ನೀಡುತ್ತಾರೆ. ಕೆಲವೊಮ್ಮೆ, ನೀವು ನಿಮ್ಮ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಂಡಾಗ, ಅವರು ನಿಮ್ಮ ಆಲೋಚನೆಯನ್ನು ಅಪಹಾಸ್ಯ ಮಾಡಬಹುದು, ಅಡೆತಡೆಗಳನ್ನು ಸೃಷ್ಟಿಸಬಹುದು.
ಕೆಲಸದಲ್ಲಿ ಆತುರಬೇಡ: ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬದಲಿಗೆ ನೀವು ತಾಳ್ಮೆಯಿಂದಿರಬೇಕು, ಇದರಿಂದ ಪರಿಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಜೀವನದಲ್ಲಿ ಘಟಿಸುವ ಈ ಸಂಗತಿಗಳು ಹಣೆಬರಹದ ಮೇಲೆ ನಿರ್ಧರಿತವಾಗಿರುತ್ತವೆ
ಎಲ್ಲರನ್ನೂ ನಂಬಬೇಡಿ: ಕುರುಡು ನಂಬಿಕೆ ವಿನಾಶಕ್ಕೆ ಕಾರಣವಾಗಬಹುದು ಆದ್ದರಿಂದ ಎಲ್ಲರನ್ನು ನಂಬಲು ಹೋಗಬೇಡಿ, ಎಚ್ಚರಿಕೆಯಿಂದ ಸ್ನೇಹ ಬೆಳೆಸಿ, ನಿಮ್ಮ ಮಿತಿಗಳನ್ನು ನಿರ್ಮಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ವೈಫಲ್ಯಕ್ಕೆ ಹೆದರಬೇಡಿ, ಅದರಿಂದ ಕಲಿಯಿರಿ: ವೈಫಲ್ಯಗಳಿಗೆ ಹೆದರಿ ಹಿಂದೆ ಸರಿಯುವವರು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಸೋಲುಗಳಿಂದ ಗೆಲುವಿನ ಪಾಠವನ್ನು ಕಲಿತು ಮುನ್ನಡೆದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ