AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಘಟಿಸುವ ಈ ಸಂಗತಿಗಳು ಹಣೆಬರಹದ ಮೇಲೆ ನಿರ್ಧರಿತವಾಗಿರುತ್ತವೆ

ಆಚಾರ್ಯ ಚಾಣಕ್ಯರು ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಯಶಸ್ಸಿಗಾಗಿ ಕಠಿಣ ಪರಿಶ್ರಮವನ್ನೂ ಪಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ನಡೆಯುವ ಈ ಒಂದಷ್ಟು ಸಂಗತಿಗಳು ಕಠಿಣ ಪರಿಶ್ರಮದಿಂದಲ್ಲ ಕೇವಲ ಅದೃಷ್ಟ ಮತ್ತು ಹಣೆಬರಹದ ಮೇಲೆ ನಿರ್ಧರಿತವಾಗಿರುತ್ತದೆ ಎಂದು ಹೇಳಿದ್ದಾರೆ. ಹಾಗಿದ್ರೆ ನಮ್ಮ ಜೀವನದಲ್ಲಿ ಘಟಿಸುವ ಯಾವ ಸಂಗತಿಗಳು ಪೂರ್ವ ನಿರ್ಧರಿತವಾಗಿರುತ್ತದೆ, ಯಾವುದನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದನ್ನು ನೋಡೋಣ ಬನ್ನಿ.

Chanakya Niti: ಜೀವನದಲ್ಲಿ ಘಟಿಸುವ ಈ ಸಂಗತಿಗಳು ಹಣೆಬರಹದ ಮೇಲೆ ನಿರ್ಧರಿತವಾಗಿರುತ್ತವೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Nov 24, 2025 | 5:26 PM

Share

ಕಠಿಣ ಪರಿಶ್ರಮ, ಛಲವೊಂದಿದ್ದರೆ ನಮ್ಮ ಜೀವನದಲ್ಲಿ ನಾವು ಏನನ್ನೂ ಬೇಕಾದರೂ ಸಾಧಿಸಬಹುದು, ನಮ್ಮ ಜೀವನವನ್ನೇ ಬದಲಾಯಿಸಬಹುದು ಎಂದು ಹೇಳುತ್ತಾರೆ. ಹೌದು ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ, ನಮ್ಮ ಜೀವನವನ್ನೂ ನಾವು ಅಂದುಕೊಂಡ ರೀತಿಯಲ್ಲಿ ಬದಲಾಯಿಸಬಹುದು. ಆದ್ರೆ ನಮ್ಮ ಜೀವನದಲ್ಲಿ ಘಟಿಸುವ ಈ ಒಂದಷ್ಟು ಸಂಗತಿಗಳನ್ನು ಕಠಿಣ ಪರಿಶ್ರಮ, ದುಡ್ಡು ಇದ್ಯಾವುದರಿಂದಲೂ ಬದಲಾಯಿಸಲು ಸಾಧ್ಯವಿಲ್ಲ, ಅದು ಕೇವಲ ಅದೃಷ್ಟ ಮತ್ತು ಹಣೆಬರಹವನ್ನು ಆಧರಿಸಿವೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ (Acharya Chanakya). ಹಾಗಾಗಿದ್ದರೆ, ಜೀವನದಲ್ಲಿ ಘಟಿಸುವ ಯಾವ ಸಂಗತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಯಾವ ಸಂಗತಿಗಳು ಹುಟ್ಟುವ ಮೊದಲೇ ನಿರ್ಧರಿತವಾಗಿರುತ್ತವೆ ಎಂಬುದನ್ನು ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಜೀವನದಲ್ಲಿ ಘಟಿಸುವ ಈ  ಸಂಗತಿಗಳು ಪೂರ್ವನಿರ್ಧರಿತವಾಗಿರುತ್ತವೆ:

ವಯಸ್ಸು: ಒಬ್ಬ ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ, ಆತನ ಆಯಸ್ಸು ಎಷ್ಟು ಎಂದುಬುದು ಆತ ಹುಟ್ಟುವ ಮೊದಲು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಧರಿಸಲ್ಪಟ್ಟಿರುತ್ತದೆ ಎನ್ನುತ್ತಾರೆ ಚಾಣಕ್ಯ. ಎಷ್ಟೇ ಹಣವನ್ನು ಖರ್ಚು ಮಾಡಿದರೂ ಅಥವಾ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ, ಆಯಸ್ಸನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇದು ಪೂರ್ವನಿರ್ಧರಿತವಾದದದ್ದು.

ಆರ್ಥಿಕ ಪರಿಸ್ಥಿತಿ: ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯು ಹುಟ್ಟುವ ಮೊದಲೇ ನಿರ್ಧರಿಸಲ್ಪಡುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಇದರರ್ಥ ಅವನ ಜೀವನದಲ್ಲಿ ಬರುವ ಸಂಪತ್ತು ಅಥವಾ ಸೌಕರ್ಯಗಳು ಹುಟ್ಟುವ ಮೊದಲೇ ನಿರ್ಧರಿಸಲ್ಪಟ್ಟಿರುತ್ತವೆ. ಆದರೆ ಇದರರ್ಥ ಕಠಿಣ ಪರಿಶ್ರಮ ನಿಷ್ಪ್ರಯೋಜಕ ಎಂದಲ್ಲ. ಅದೃಷ್ಟ ಮತ್ತು ಕಠಿಣ ಪರಿಶ್ರಮದ ಸಮತೋಲನ ಮಾತ್ರ ನಿಜವಾದ ಯಶಸ್ಸಿಗೆ ಕಾರಣವಾಗುತ್ತದೆ. ಎಲ್ಲವನ್ನೂ ಅದೃಷ್ಟದಿಂದ ಮಾತ್ರ ಸಾಧಿಸಲು ಸಾಧ್ಯವಾದರೆ, ಯಾರೂ ಕಷ್ಟಪಟ್ಟು ಕೆಲಸ ಮಾಡುತ್ತಿರಲಿಲ್ಲ ಅದೇ ರೀತಿ ಕಠಿಣ ಪರಿಶ್ರಮದ ಮೂಲಕ ಎಲ್ಲವನ್ನೂ ಸಾಧಿಸಲು ಸಾಧ್ಯವಾಗಿದ್ದರೆ ಎಲ್ಲರೂ ಇಂದು ಶ್ರೀಮಂತರಾಗಿರುತ್ತಿದ್ದರು. ಆದ್ದರಿಂದ ಸಂಪತ್ತಿನ ಗಳಿಕೆ ಹಣೆಬರಹವನ್ನು ಆಧರಿಸಿದೆ.

ಕಲಿಕೆ ಮತ್ತು ಜ್ಞಾನ: ಪ್ರತಿಯೊಬ್ಬ ವ್ಯಕ್ತಿಯ ಬುದ್ಧಿಮತ್ತೆ, ತಿಳುವಳಿಕೆ ಮತ್ತು ಕಲಿಯುವ ಸಾಮರ್ಥ್ಯವು ಹುಟ್ಟುವ ಮೊದಲೇ ನಿರ್ಧರಿಸಲ್ಪಡುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಕೆಲವರಿಗೆ ಆಳವಾದ ಚಿಂತನೆಯ ಶಕ್ತಿ ಇದ್ದರೆ, ಇನ್ನು ಕೆಲವರಿಗೆ ಬೇಗನೆ ಕಲಿಯುವ ಶಕ್ತಿ ಇರುತ್ತದೆ; ಪ್ರಕೃತಿ ಇದನ್ನೆಲ್ಲ ಮೊದಲೇ ನಿರ್ಧರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ, ಅದನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುವ ಮೂಲಕ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ: ಸಂಸಾರ ಹಾಲು ಜೇನಿನಂತಿರಲು ದಂಪತಿಗಳು ಚಾಣಕ್ಯರ ಸೂತ್ರಗಳನ್ನು ಪಾಲಿಸಬೇಕು

ಸಾವು: ಆಚಾರ್ಯ ಚಾಣಕ್ಯರು ಹೇಳುವಂತೆ, ಒಬ್ಬ ವ್ಯಕ್ತಿಯ ಜನನದ ಮೊದಲೇ ಆತನ ಸಾವಿನ ಸಮಯ ನಿರ್ಧರಿಸಲ್ಪಟ್ಟಿರುತ್ತದೆ. ಯಾರು ಯಾವಾಗ, ಎಲ್ಲಿ ಮತ್ತು ಹೇಗೆ ಸಾಯುತ್ತಾರೆಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ, ಇದೆಲ್ಲಾ ವಿಧಿ ಲಿಖಿತ. ಸಾವು ಅನ್ನೋದು ಖಚಿತ ಮತ್ತು ಅದರ ಸಮಯ ಪೂರ್ವನಿರ್ಧರಿತವಾಗಿದೆ ಸಮಯ ಬಂದಾಗ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಕರ್ಮ: ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಯಾವೆಲ್ಲಾ ಕರ್ಮಗಳನ್ನು ಮಾಡುತ್ತಾನೋ ಅವೆಲ್ಲವೂ ಪೂರ್ವನಿರ್ಧಿತವಾದದ್ದು. ಹೌದು  ವ್ಯಕ್ತಿಯು ಮಾಡುವ ಯಾವುದೇ ಕ್ರಿಯೆಗಳು, ಕಾರ್ಯಗಳು ಅವನ ಹಣೆಬರಹದಲ್ಲಿ ಹುಟ್ಟುವ ಮೊದಲೇ ಬರೆಯಲ್ಪಟ್ಟಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ