AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಸಂಸಾರ ಹಾಲು ಜೇನಿನಂತಿರಲು ದಂಪತಿಗಳು ಚಾಣಕ್ಯರ ಈ ಸೂತ್ರಗಳನ್ನು ಪಾಲಿಸಬೇಕು

ಆಚಾರ್ಯ ಚಾಣಕ್ಯರು ಯಶಸ್ಸು, ವೃತ್ತಿ ಜೀವನ ಮಾತ್ರವಲ್ಲ, ವೈಯಕ್ತಿಕ ಜೀವನ, ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಹಲವಾರು ವಿಚಾರಗಳನ್ನು ಸಹ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ದಾಂಪತ್ಯ ಜೀವನವು ಸುಖವಾಗಿರಲು ಪತಿ ಪತ್ನಿ ಹೇಗಿರಬೇಕು ಎಂಬುದನ್ನು ಸಹ ಹೇಳಿದ್ದಾರೆ. ಚಾಣಕ್ಯರ ಈ ಸೂತ್ರಗಳನ್ನು ನೀವು ಪಾಲಿಸಿದ್ದೇ ಆದಲ್ಲಿ ನಿಮ್ಮ ಸಂಸಾರವು ಸ್ವರ್ಗದಂತಿರುತ್ತೆ. ಹಾಗಿದ್ದರೆ ಸುಖ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಆ ಸೂತ್ರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಸಂಸಾರ ಹಾಲು ಜೇನಿನಂತಿರಲು ದಂಪತಿಗಳು ಚಾಣಕ್ಯರ ಈ ಸೂತ್ರಗಳನ್ನು ಪಾಲಿಸಬೇಕು
ಚಾಣಕ್ಯ ನೀತಿImage Credit source: Pexels
ಮಾಲಾಶ್ರೀ ಅಂಚನ್​
|

Updated on: Nov 23, 2025 | 7:12 PM

Share

ಗಂಡ ಹೆಂಡತಿಯ  (husband wife) ಸಂಬಂಧ ಎನ್ನುವಂತಹದ್ದು ಶಾಶ್ವತವಾದ ಬಂಧವಾಗಿದೆ. ಈ ಸಂಬಂಧದಲ್ಲಿ ಪ್ರೀತಿ, ವಾತ್ಸಲ್ಯ ಕಾಳಜಿ, ನಂಬಿಕೆ ಇರುವಂತೆ ಸಣ್ಣಪುಟ್ಟ ಜಗಳ, ಹುಸಿಮುನಿಸುಗಳು ಸಹ ಇರುತ್ತವೆ. ಆದರೆ ಈ ಅಸಮಾಧಾನ, ಜಗಳಗಳು ಹೆಚ್ಚಾದಾಗ ಸಂಸಾರದಲ್ಲಿ ನೆಮ್ಮದಿಯೂ ಮಾಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಬಿರುಕು ಸಹ ಮೂಡುತ್ತದೆ. ಆದ್ದರಿಂದ ಸಣ್ಣಪುಟ್ಟ ಜಗಳಗಳು ನಡೆದರೂ ಸಹ ದಾಂಪತ್ಯ ಜೀವನವು ಸುಖಮಯವಾಗಿರಲು ಆಚಾರ್ಯ ಚಾಣಕ್ಯರು ತಿಳಿಸಿರುವ ಈ ಒಂದಷ್ಟು ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಗಂಡ ಮತ್ತು ಹೆಂಡತಿ ಈ ಸಲಹೆಗಳನ್ನು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಅವರ ದಾಂಪತ್ಯ ಜೀವನದಲ್ಲಿ ಸದಾ ಮಾಧುರ್ಯ, ಸಂತೋಷ ನೆಲೆಸುತ್ತದೆ. ಹಾಗಿದ್ದರೆ ಚಾಣಕ್ಯರು ಹೇಳಿರುವ ಸುಖ ದಾಂಪತ್ಯ ಜೀವನದ ಆ ಸೂತ್ರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸುಖಿ ದಾಂಪತ್ಯ ನಿಮ್ಮದಾಗಲು ಪಾಲಿಸಬೇಕಾದ ತತ್ವಗಳಿವು:

ಪ್ರೀತಿ ಮತ್ತು ಪ್ರಾಮಾಣಿಕತೆ: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರಾಮಾಣಿಕತೆ ಮತ್ತು ನಿಜವಾದ ಪ್ರೀತಿಯ ಮೇಲೆ ಸಂಬಂಧವು ನಿಂತಿರುತ್ತವೆ. ಈ ಎರಡು ಅಂಶವೇ ಸಂಸಾರದ ಮೂಲ ಅಡಿಪಾಯ ಅಂತಾನೇ ಹೆಳಬಹುದು.  ಸಂಗಾತಿಗಳು ಪರಸ್ಪರ  ಪ್ರೀತಿ ಮತ್ತು ಸಂಪೂರ್ಣ ಪ್ರಾಮಾಣಿಕತೆಯನ್ನು ತೋರಿಸಿದರೆ, ಅವರ ಸಂಬಂಧವು ಎಂದಿಗೂ ಹದಗೆಡುವುದಿಲ್ಲ. ಬದಲಿಗೆ ಇದು ಸಂಬಂಧದಲ್ಲಿನ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಸಂಗಾತಿಗಳ ನಡುವೆ ಆಳವಾದ ಬಂಧವನ್ನು ರೂಪಿಸುತ್ತದೆ.

ಅಹಂಕಾರ ಬೇಡ: ನಿಮ್ಮ ಅಹಂಕಾರ, ಅಹಂ ಭಾವನೆಯೇ ಸಂಬಂಧಕ್ಕೆ ಮುಳ್ಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಹಂಕಾರವು ಪ್ರೀತಿ ಮತ್ತು ಗೌರವವನ್ನು ದುರ್ಬಲಗೊಳಿಸುತ್ತದೆ. ಸಂಬಂಧವನ್ನೇ ಹಾಳು ಮಾಡಿಬಿಡುತ್ತವೆ.  ಆದ್ದರಿಂದ, ಸಂಗಾತಿಗಳ ನಡುವೆ ಯಾವುದೇ ಅಹಂ ಇರಬಾರದು. ಪರಸ್ಪರ ಪ್ರೀತಿಯಿಂದಲೇ ವರ್ತಿಸಬೇಕು, ಜಗಳಗಳನ್ನು ಸಹ ಪ್ರೀತಿಯಿಂದಲೇ ಬಗೆಹರಿಸಬೇಕು.

ಪರಸ್ಪರ ಬೆಂಬಲ: ಸಂಗಾತಿಗಳಿಬ್ಬರು ಕಷ್ಟದ ಸಮಯದಲ್ಲಿ ಪರಸ್ಪರ ಬೆಂಬಲವಾಗಿ ನಿಂತರೆ ಮಾತ್ರ  ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಬಲವಾದ ದಾಂಪತ್ಯವನ್ನು ಕಾಪಾಡಿಕೊಳ್ಳಲು ಪ್ರಮುಖ ವಿಷಯವೆಂದರೆ ಪರಸ್ಪರ ತ್ಯಾಗ ಮತ್ತು ಬೆಂಬಲದ ಮನೋಭಾವ. ಈ ಅಂಶ ದಾಂಪತ್ಯ ಜೀವನವನ್ನು ಸುಖಮಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಪರಸ್ಪರ ಗೌರವ: ಸಂಬಂಧಗಳಲ್ಲಿ ಗೌರವವು ಅತ್ಯಂತ ಪ್ರಮುಖವಾದುದು. ಸಂಗಾತಿಗಳು ಪರಸ್ಪರ ಗೌರವ ತೋರಿದರೆ ಸಂಬಂಧದಲ್ಲಿ ಯಾವುದೇ  ಉದ್ವಿಗ್ನತೆ, ಕಹಿ ಭಾವನೆ ಉಂಟಾಗುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ. ಮುಖ್ಯವಾಗಿ ಎಲ್ಲರ ಎದುರಲ್ಲಿ  ನಿಮ್ಮ ಸಂಗಾತಿಯನ್ನು ಅವಮಾನಿಸುವುದನ್ನು ತಪ್ಪಿಸಿ, ಏಕೆಂದರೆ ಇದು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.

ಇದನ್ನೂ ಓದಿ: ಹೆಂಡ್ತಿಯಾದವಳು ಗಂಡನ ಮುಂದೆ ಮಾತುಗಳನ್ನಾಡಬಾರದೆಂದು ಚಾಣಕ್ಯರು ಹೇಳುತ್ತಾರೆ

ಪರಸ್ಪರ ಸಂವಹನ: ಯಾವುದೇ ಸಂಬಂಧದ ಯಶಸ್ಸಿಗೆ ಸಂವಹನ ಅತ್ಯಗತ್ಯ. ಗಂಡ ಮತ್ತು ಹೆಂಡತಿ ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಸರಿಯಾದ ಸಂವಹನವು ತಪ್ಪುಗ್ರಹಿಕೆಯನ್ನು ನಿವಾರಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.

ಕೋಪವನ್ನು ನಿಯಂತ್ರಣದಲ್ಲಿಡಿ: ಕೋಪವು ಒಂದು ಸುಂದರ ಸಂಬಂಧವನ್ನು ಹಾಳುಮಾಡುತ್ತದೆ. ಗಂಡ ಮತ್ತು ಹೆಂಡತಿ ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ಅವರ ವೈವಾಹಿಕ ಜೀವನದ ಶಾಂತಿಯನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.  ಸಂಗಾತಿಗಳು ಪ್ರತಿ ಸಂದರ್ಭದಲ್ಲೂ ಸಂಯಮದಿಂದಿದ್ದರೆ, ಅದು ಸಂಬಂಧವನ್ನು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ