AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆಯೊಂದಿಗೆ ಈ ಒಂದು ವಸ್ತು ಇದ್ರೆ ಸಾಕು, ಬಲು ಸುಲಭವಾಗಿ ಜಿರಳೆಗಳನ್ನು ಓಡಿಸಬಹುದು

ಹಲ್ಲಿ, ಇಲಿಗಳ ಕಾವಿರುವಂತೆ, ಹೆಚ್ಚಿನ ಮನೆಗಳಲ್ಲಿ ಜಿರಳೆಗಳ ಕಾಟವೂ ಇದ್ದೇ ಇರುತ್ತದೆ. ಮನೆಯೊಳಗೆ ಪ್ರವೇಶಿಸುವ ಈ ಜಿರಳೆ ಸಾಕಷ್ಟು ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾಗಿ ಇವುಗಳನ್ನು ಓಡಿಸಲು ಹಲವರು ರಾಸಾಯನಿಕಯುಕ್ತ ಸ್ಪ್ರೇ ಇತ್ಯಾದಿಗಳನ್ನು ಬಳಸುತ್ತಾರೆ. ಆದ್ರೆ ಇದ್ಯಾವುದರ ಅವಶ್ಯಕತೆಯಿಲ್ಲ, ಸಕ್ಕರೆಯೊಂದಿಗೆ ಈ ಒಂದು ವಸ್ತುವನ್ನು ಬೆರಿಸಿ ಮನೆಯ ಮೂಲೆ ಮೂಲೆಯಲ್ಲಿ ಹರಡಿದರೆ ಸಾಕು, ಜಿರಳೆಗಳ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು ಎಂದು ಸೆಲೆಬ್ರಿಟಿ ಮಾಸ್ಟರ್‌ಚೆಫ್‌ ಪಂಕಜ್ ಬಧೋರಿಯಾ ವಿವರಿಸಿದ್ದಾರೆ.

ಸಕ್ಕರೆಯೊಂದಿಗೆ ಈ ಒಂದು ವಸ್ತು ಇದ್ರೆ ಸಾಕು, ಬಲು ಸುಲಭವಾಗಿ ಜಿರಳೆಗಳನ್ನು ಓಡಿಸಬಹುದು
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Nov 24, 2025 | 3:12 PM

Share

ಬಹುತೇಕ ಹೆಚ್ಚಿನ ಮನೆಗಳಲ್ಲಿ ಜಿರಳೆಗಳ (cockroaches) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಅಡುಗೆಮನೆಯಲ್ಲಿ ಅವುಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಇವು ನೋಡಲು ಸಾಮಾನ್ಯ ಎನಿಸಿದರೂ ಇವುಗಳು ರೋಗಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಜಿರಳೆಗಳನ್ನು ಓಡಿಸಲು ಹಲವರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದ್ರೆ ಇವುಗಳು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಕ್ಕರೆಯೊಂದಿಗೆ ಒಂದು ವಸ್ತುವನ್ನು ಬೆರೆಸಿ ಮನೆಯ ಮೂಲೆ ಮೂಲೆಗಳಲ್ಲಿ ಹರಡಿದ ಸಾಕು ಜಿರಳೆಗಳ ಕಾಟದಿಂದ ಸುಲಭವಾಗಿ, ಶಾಶ್ವತವಾಗಿ ಮುಕ್ತಿ ಪಡೆಯಬಹುದು ಎಂದು ಸೆಲೆಬ್ರಿಟಿ ಮಾಸ್ಟರ್‌ಚೆಫ್‌ ಪಂಕಜ್ ಬಧೋರಿಯಾ ಟಿಪ್ಸ್‌ ನೀಡಿದ್ದಾರೆ. ಸಕ್ಕರೆ ಜಿರಳೆಯನ್ನು ಓಡಿಸಲು ಹೇಗೆ ಪರಿಣಾಮಕಾರಿ ಎಂಬುದನ್ನು ತಿಳಿಯಿರಿ.

ಜಿರಳೆಗಳ ಕಾಟದಿಂದ ಶಾಶ್ವತ ಪರಿಹಾರ ಪಡೆಯಲು ಸಕ್ಕರೆಯೇ ಸಾಕು:

ಸೆಲೆಬ್ರಿಟಿ ಮಾಸ್ಟರ್‌ಚೆಫ್ ಪಂಕಜ್ ಬಧೋರಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೌದು ಸಕ್ಕರೆ ಪುಡಿಗೆ ಬೋರಿಕ್‌ ಆಸಿಡ್‌ ಪೌಡರ್‌ ಅಥವಾ ಅಡುಗೆ ಸೋಡಾವನ್ನು ಮಿಕ್ಸ್‌ ಮಾಡಿ ಮನೆಯ ಮೂಲೆ ಮೂಲೆಗಳಲ್ಲಿ ಹರಡಿದರೆ ಸಾಕು. ಸಕ್ಕರೆಯ ವಾಸನೆಗೆ ಇದರತ್ತ ಬರುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.

ಸಕ್ಕರೆ ಪುಡಿ ಮತ್ತು ಬೋರಿಕ್‌ ಪುಡಿ:

ಇದಕ್ಕಾಗಿ, ಎರಡು ಚಮಚ ಸಕ್ಕರೆ ಪುಡಿಯ ಜೊತೆಗೆ ಎರಡು ಚಮಚ ಬೋರಿಕ್ ಪೌಡರ್ ಸೇರಿಸಿ, ಚೆನ್ನಾಗಿ ಬೆರೆಸಿ, ಈ ಮಿಶ್ರಣವನ್ನು ಜಿರಳೆಗಳು ಹೆಚ್ಚಾಗಿ ಓಡಾಡುವ ಅಡುಗೆಮನೆಯ ಕೌಂಟರ್‌ಗಳು, ಅಡುಗೆಮನೆಯ ಸಿಂಕ್ ಬಳಿ ಮತ್ತು ಸ್ನಾನಗೃಹದ ಸಿಂಕ್ ಮೇಲೆ ಸಿಂಪಡಿಸಿ. ಜಿರಳೆಗಳು ಸಕ್ಕರೆಗೆ ಆಕರ್ಷಿತವಾಗುತ್ತವೆ ಮತ್ತು ಅದನ್ನು ತಿನ್ನುತ್ತವೆ.  ಇದರಲ್ಲಿರುವ ಬೋರಿಕ್ ಪೌಡರ್ ಮಿಶ್ರಣ ಜಿರಳೆಗಳನ್ನು ಸುಲಭವಾಗಿ ಕೊಲ್ಲುತ್ತದೆ.

ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಗಾಢ ಕಲೆಯನ್ನು ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯೇ ಸಾಕು

ಸಕ್ಕರೆ ಪುಡಿ ಮತ್ತು ಅಡುಗೆ ಸೋಡಾ:

ಅಡುಗೆ ಸೋಡಾ ಮತ್ತು ಸಕ್ಕರೆ ಪುಡಿಯು ಸಹ ಜಿರಳೆಗಳನ್ನು ಓಡಿಸಲು ಪರಿಣಾಮಕಾರಿ. ಇದಕ್ಕಾಗಿ ಒಂದು ಚಮಚ ಅಡುಗೆ ಸೋಡಾಕ್ಕೆ ಅಷ್ಟೇ ಪ್ರಮಾಣದ  ಸಕ್ಕರೆ ಪುಡಿಯನ್ನು ಮಿಶ್ರಣ ಮಾಡಿ, ಜಿರಳೆಗಳು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಿ. ಈ ಮೂಲಕ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ