AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಹೆಂಡ್ತಿಯಾದವಳು ಗಂಡನ ಮುಂದೆ ಈ ಮಾತುಗಳನ್ನಾಡಬಾರದೆಂದು ಚಾಣಕ್ಯರು ಹೇಳುತ್ತಾರೆ

ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವನ್ನು ಬಲಪಡಿಸಲು ಚಾಣಕ್ಯರು ತಮ್ಮ ನೀತಿಯಲ್ಲಿ ಹಲವಾರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಹೆಂಡತಿ ಗಂಡನ ಮುಂದೆ ಕೆಲವು ವಿಷಯಗಳನ್ನು ಹೇಳಬಾರದು, ಹೀಗೆ ಮಾಡಿದರೆ ಮಾತ್ರ ಸಂಸಾರ ಸುಖವಾಗಿ ಸಾಗಲು ಸಾಧ್ಯ ಎಂದು ಹೇಳಿದ್ದಾರೆ. ಹಾಗಿದ್ದರೆ ಪತ್ನಿಯಾದವಳು ಗಂಡನ ಮುಂದೆ ಯಾವ ಮಾತುಗಳನ್ನಾಡಬಾರದು ಎಂಬುದನ್ನು ತಪ್ಪದೇ ತಿಳಿಯಿರಿ.

Chanakya Niti: ಹೆಂಡ್ತಿಯಾದವಳು ಗಂಡನ ಮುಂದೆ ಈ ಮಾತುಗಳನ್ನಾಡಬಾರದೆಂದು ಚಾಣಕ್ಯರು ಹೇಳುತ್ತಾರೆ
ಚಾಣಕ್ಯ ನೀತಿImage Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 11, 2025 | 6:33 PM

Share

ಪ್ರತಿಯೊಂದು ಸಂಬಂಧವು ಪ್ರೀತಿ, ನಂಬಿಕೆ ಮತ್ತು ತಿಳುವಳಿಕೆಯನ್ನು ಆಧರಿಸಿದೆ. ಅದರಲ್ಲೂ ಗಂಡ ಹೆಂಡತಿಯ (husband wife) ಸಂಬಂಧ ಎನ್ನುವಂತಹದ್ದು ತುಂಬಾನೇ ಪವಿತ್ರವಾದದ್ದು, ಗಂಡ ಹೆಂಡತಿಯ ನಡುವೆ ಯಾವುದೇ ರೀತಿಯ ಮುಚ್ಚುಮರೆ ಇರಬಾರದು, ಸಂಗಾತಿಗಳಿಬ್ಬರೂ ಮುಕ್ತವಾಗಿ ಮಾತನಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಆಚಾರ್ಯ ಚಾಣಕ್ಯರು ಹೆಂಡತಿಯಾದವಳು ಯಾವುದೇ ಕಾರಣಕ್ಕೂ ಗಂಡನ ಜೊತೆ ಈ ಕೆಲವು ಮಾತುಗಳನ್ನಾಡಬಾರದು ಎಂದು ಹೇಳಿದ್ದಾರೆ.  ಪತ್ನಿ ತನ್ನ ಪತಿಯ ಮುಂದೆ ಆಡುವ ಈ ಕೆಲವು ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು, ಅಂತಹ ಮಾತುಗಳನ್ನಾಡದಿದ್ದರೆಯೇ ಒಳ್ಳೆಯದು ಎಂದಿದ್ದಾರೆ. ಹಾಗಿದ್ದರೆ ಹೆಂಡ್ತಿ ಗಂಡನ ಮುಂದೆ ಯಾವ ಮಾತುಗಳನ್ನಾಡಬಾರದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹೆಂಡತಿ ತನ್ನ ಗಂಡನ ಜೊತೆ ಈ ಮಾತುಗಳನ್ನಾಡಬಾರದು:

ಕುಟುಂಬ ಸದಸ್ಯರನ್ನು ಹೋಲಿಕೆ ಮಾಡಿ ಮಾತನಾಡುವುದು: ಮದುವೆಯ ನಂತರ ಹೆಂಡತಿ ತನ್ನ ಹೆತ್ತವರ ಮನೆಯ ಸದಸ್ಯರೊಂದಿಗೆ ಗಂಡನ ಮನೆಯ ಸದಸ್ಯರನ್ನು ಹೋಲಿಕೆ ಮಾಡಿ ಮಾತನಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.  ಪ್ರತಿಯೊಂದು ಕುಟುಂಬದ ಪರಿಸ್ಥಿತಿಯೂ ವಿಭಿನ್ನವಾಗಿರುತ್ತದೆ ಮತ್ತು ತನ್ನ ಗಂಡನ ಮನೆಯನ್ನು ತಾಯಿಯ ಮನೆಯೊಂದಿಗೆ ಹೋಲಿಸುವುದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಇದು ಗಂಡನಿಗೆ ಅನಾನುಕೂಲವನ್ನುಂಟು ಮಾಡುತ್ತದೆ ಮತ್ತು ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.

ಸುಳ್ಳು ಮಾತುಗಳನ್ನಾಡುವುದು: ಚಾಣಕ್ಯನ ಪ್ರಕಾರ, ಸಂಬಂಧದ ಅಡಿಪಾಯ ನಂಬಿಕೆಯ ಮೇಲೆ ಅವಲಂಬಿತವಾಗಿದೆ. ಒಮ್ಮೆ ಸುಳ್ಳು ಬಹಿರಂಗವಾದರೆ, ಒಡೆದು ಹೋದ ನಂಬಿಕೆಯನ್ನು ಪುನರ್ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ, ಸಣ್ಣ ವಿಷಯಗಳಲ್ಲಿಯೂ ಪ್ರಾಮಾಣಿಕವಾಗಿರುವುದು ಬಹಳ ಮುಖ್ಯ. ಸತ್ಯವು ಸಂಬಂಧಗಳನ್ನು ಬಲಪಡಿಸುತ್ತದೆ. ಹಾಗಾಗಿ ಗಂಡನ ಬಳಿ ಯಾವುದೇ ಕಾರಣಕ್ಕೂ ಸುಳ್ಳು ಮಾತುಗಳನ್ನಾಡಬೇಡಿ.

ಗಂಡನೊಂದಿಗೆ ಇತರರೊಂದಿಗೆ ಹೋಲಿಸಿ ಮಾತನಾಡುವುದು: ಕೆಲ ಮಹಿಳೆಯರು ತಮ್ಮ ಗಂಡನನ್ನು ಇತರರೊಂದಿಗೆ ಹೋಲಿಸಿ ಮಾತನಾಡುತ್ತಾರೆ. ಉದಾಹರಣೆಗೆ ನನ್ನ ಸ್ನೇಹಿತೆ ಗಂಡ ಆಕೆಗೆ ಚಿನ್ನವನ್ನು ಕೊಡಿಸಿದ್ದಾರೆ, ನೀವೇನು ಕೊಡಿಸಿದ್ದೀರಿ, ನೀವ್ಯಾಕೆ ಆ ಹುಡುಗನಂತೆ ಸ್ಟೈಲ್‌ ಮಾಡೋದಿಲ್ಲ ಎಂದು ಇತರ ಪುರುಷರ ಜೊತೆ ಹೋಲಿಕೆ ಮಾಡುತ್ತಾರೆ. ಇದು ಪುರುಷನ ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ. ನಿಮ್ಮ ಈ ಕಠೋರ ಮಾತುಗಳು ಸಂಬಂಧದಲ್ಲಿ ಬಿರುಕು ಮೂಡಲು ಸಾಧ್ಯವಾಗಬಹುದು. ಆದ್ದರಿಂದ ಇಂತಹ ಹೋಲಿಕೆಯ ಮಾತುಗಳನ್ನಾಡಬೇಡಿ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ನಾಲ್ಕು ಕೆಲಸಗಳನ್ನು ಮಾಡುವ ಜನರಿಗೆ ಎಂದಿಗೂ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲವಂತೆ

ಹಣಕಾಸಿನ ವಿಷಯಗಳಲ್ಲಿ ಗೌಪ್ಯತೆ ಇರಲಿ: ಹೆಂಡತಿ ತನ್ನ ಉಳಿತಾಯ, ದೇಣಿಗೆ ಅಥವಾ ಕುಟುಂಬದ ಖರ್ಚುಗಳ ಬಗ್ಗೆ ಗಂಡನಿಗೆ ಸಂಪೂರ್ಣ ಮಾಹಿತಿಯನ್ನು ನೀಡುವುದು ಅನಿವಾರ್ಯವಲ್ಲ. ಕೆಲವು ವಿಷಯಗಳನ್ನು ರಹಸ್ಯವಾಗಿಡುವುದರಿಂದ ಕುಟುಂಬದ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು. ಆದರೂ ಪ್ರಮುಖ ನಿರ್ಧಾರಗಳ ಬಗ್ಗೆ ಇಬ್ಬರ ನಡುವಿನ ಸಂವಹನ ಮುಖ್ಯ ಎನ್ನುತ್ತಾರೆ ಚಾಣಕ್ಯ.

ಕೋಪದಲ್ಲಿ ಏನನ್ನೂ ಹೇಳಬೇಡಿ: ಒಬ್ಬ ವ್ಯಕ್ತಿ ಕೋಪದಲ್ಲಿ ಮಾತನಾಡಿದ ಆತನ ಮಾತುಗಳು ಕೂಡ ಕಠೋರವಾಗಿರುತ್ತದೆ. ಕೋಪದಲ್ಲಿ ಮಾತನಾಡುವ ಒಂದು ಮಾತು ಕೂಡ ಸಂಬಂಧವನ್ನು ನಾಶಮಾಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಕೋಪದಲ್ಲಿ ಹೆಂಡತಿ ತನ್ನ ಗಂಡನಿಗೆ ಹೇಳುವ ಮಾತು ಅವನಿಗೆ ತುಂಬಾ ನೋವುಂಟು ಮಾಡುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಮೌನವಾಗಿರುವುದು ಉತ್ತಮ. ಮೌನವು ಸಂಬಂಧವನ್ನು ರಕ್ಷಿಸುತ್ತದೆ ಮತ್ತು ಪ್ರೀತಿಯನ್ನು ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ