AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಸ್ಟ್‌ ಹೀಗೆ ಮಾಡಿ, ಚಿಟಿಕೆ ಹೊಡೆಯುವುದರಲ್ಲಿ ಇರುವೆಗಳನ್ನು ಓಡಿಸಬಹುದು

ಜಿರಳೆ, ಹಲ್ಲಿಗಳ ಕಾಟದಂತೆ ಹೆಚ್ಚಿನ ಮನೆಗಳಲ್ಲಿ ಇರುವೆಗಳ ಹಾವಳಿ ಕೂಡಾ ಹೆಚ್ಚಿರುತ್ತವೆ. ಅಡುಗೆ ಕೋಣೆ ಮಾತ್ರವಲ್ಲದೆ ಸ್ನಾನಗೃಹ, ಮಲಗುವ ಕೋಣೆಯಲ್ಲೂ ಸಹ ಇವುಗಳು ಓಡಾಡುತ್ತಿರುತ್ತವೆ. ಇವುಗಳ ಕಾಟದಿಂದ ನೀವು ಸಹ ಬೇಸತ್ತಿದ್ದೀರಾ? ಹಾಗಿದ್ರೆ ಈ ಸಿಂಪಲ್‌ ಮನೆಮದ್ದುಗಳ ಸಹಾಯದಿಂದ ಪರಿಣಾಮಕಾರಿಯಾಗಿ ಇರುವೆಗಳನ್ನು ಓಡಿಸಬಹುದು. ಅದು ಹೇಗೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಜಸ್ಟ್‌ ಹೀಗೆ ಮಾಡಿ, ಚಿಟಿಕೆ ಹೊಡೆಯುವುದರಲ್ಲಿ ಇರುವೆಗಳನ್ನು ಓಡಿಸಬಹುದು
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Nov 12, 2025 | 3:18 PM

Share

ಬಹುತೇಕ ಹೆಚ್ಚಿನ ಮನೆಗಳಲ್ಲಿ ಇರುವೆಗಳ (ants) ಕಾಟ ಇದ್ದಿದ್ದೆ. ಆಹಾರಗಳನ್ನು ಹುಡುಕುತ್ತಾ ಅಡುಗೆ ಕೋಣೆಯಲ್ಲಿ, ಆಹಾರ ಇಡುವ ಸ್ಥಳಗಳಲ್ಲಿ ಇವುಗಳು ಓಡಾಡುತ್ತಿರುತ್ತವೆ. ನೋಡಲು ಪುಟ್ಟದಾಗಿದ್ದರೂ ಸಹ, ಮನೆಯೊಳಗೆ ಸೇರಿಕೊಂಡರೆ ಇವುಗಳು ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡುತ್ತಿರುತ್ತವೆ. ಹಾಗಾಗಿ ಇವುಗಳನ್ನು ತೊಡೆದುಹಾಕಲು ಅನೇಕ ಮಂದಿ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇದರ ಬದಲು ಮನೆಯಲ್ಲಿಯೇ ಲಭ್ಯವಿರುವಂತಹ ಈ ಕೆಲವು ವಸ್ತುಗಳು ಸಹಾಯದಿಂದ ಬಲು ಸುಲಭವಾಗಿ ಇರುವೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇರುವೆಗಳನ್ನು ಓಡಿಸುವ ಪರಿಣಾಮಕಾರಿ ಮನೆಮದ್ದುಗಳಿವು:

ನಿಂಬೆ ಮತ್ತು ವಿನೆಗರ್ ಮಿಶ್ರಣ: ಇರುವೆಗಳು ಹುಳಿ ಮತ್ತು ಬಲವಾದ ವಾಸನೆಯನ್ನು ದ್ವೇಷಿಸುತ್ತವೆ. ಹಾಗಾಗಿ ನೀರು, ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ಹಾಕಿ, ಇದನ್ನು ಬಾಗಿಲುಗಳು, ಕಿಟಕಿಗಳು ಮತ್ತು ಬಿರುಕು ಬಿಟ್ಟ ಸ್ಥಳಗಳಲ್ಲಿ ಸಿಂಪಡಿಸಿ. ಇವುಗಳ ಬಲವಾದ ವಾಸನೆ ಇರುವೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ಉಪ್ಪಿನ ದ್ರಾವಣ: ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಉಪ್ಪು ಕೂಡ ಇರುವೆಗಳನ್ನು ಓಡಿಸಲು ತುಂಬಾನೇ ಸಹಕಾರಿ. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಉಪ್ಪು ಸೇರಿಸಿ ಕರಗಿಸಿ.ಈ ದ್ರಾವಣವನ್ನು ಇರುವೆ ಹಾದಿಗಳ ಮೇಲೆ ಸಿಂಪಡಿಸಿ.ಕೆಲವೇ ನಿಮಿಷಗಳಲ್ಲಿ ಇರುವೆಗಳು ಓಡಿ ಹೋಗುತ್ತವೆ.

ದಾಲ್ಚಿನ್ನಿ ಪುಡಿ: ದಾಲ್ಚಿನ್ನಿಯ ಬಲವಾದ ಪರಿಮಳವು ಇರುವೆಗಳನ್ನು ಹಿಮ್ಮೆಟ್ಟಿಸಲು ಉತ್ತಮ ಮಾರ್ಗವಾಗಿದೆ. ಹಾಗಾಗಿ ಇರುವೆಗಳು ಓಡಾಡುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿ. ಇಲ್ಲದಿದ್ದರೆ ನೀವು ದಾಲ್ಚಿನ್ನಿ ಎಣ್ಣೆಯನ್ನು ನೀರೊಂದಿಗೆ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಸಿಂಪಡಿಸಬಹುದು. ಇದಲ್ಲದೆ ಇರುವೆಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಲವಂಗವನ್ನೂ ಇಡಬಹುದು. ಈ ತಂತ್ರ ಇರುವೆಗಳನ್ನು ಪರಿಣಾಮಕಾರಿಯಾಗಿ ಓಡಿಸಲು ಸಹಕಾರಿಯಾಗಿದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆಯ ಬಲವಾದ ವಾಸನೆಯು ಇರುವೆಗಳನ್ನು ದೂರವಿಡಲು ತುಂಬಾನೇ ಸಹಕಾರಿ.  ಸ್ವಲ್ಪ ನೀರಿಗೆ 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮನೆಯ ಮೂಲೆಗಳು ಮತ್ತು ಇರುವೆಗಳು ಓಡಾಡುವ  ಸ್ಥಳಗಳಲ್ಲಿ ಸಿಂಪಡಿಸಿ.

ಇದನ್ನೂ ಓದಿ: ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು

ಈರುಳ್ಳಿ: ಈರುಳ್ಳಿಯ ಬಲವಾದ ವಾಸನೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ಹಾಗಾಗಿ  ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಈರುಳ್ಳಿ ಚೂರುಗಳನ್ನು ಇರಿಸಿ. ಅವು ಸ್ವಲ್ಪ ಸಮಯದಲ್ಲೇ ಅಲ್ಲಿಂದ ಮಾಯವಾಗುತ್ತವೆ.

ನಿಯಮಿತ ಶುಚಿಗೊಳಿಸುವಿಕೆ ಮತ್ತು ಮುನ್ನೆಚ್ಚರಿಕೆಗಳು:

ಈ ಕ್ರಮಗಳ ಜೊತೆಗೆ, ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಮನೆ ತೇವಭರಿತವಾಗಿರಂತೆ ಮುಖ್ಯವಾಗಿದೆ. ಅಡುಗೆಮನೆಯಲ್ಲಿ ಚೆಲ್ಲಿದ ಸಿಹಿತಿಂಡಿಗಳು ಅಥವಾ ಸಕ್ಕರೆ ಇರುವೆಗಳನ್ನು ಆಕರ್ಷಿಸುತ್ತದೆ. ಆದ್ದರಿಂದ, ಈ ಆಹಾರಗಳನ್ನು ಭದ್ರವಾಗಿ ಮುಚ್ಚಿಡಿ. ಇರುವೆಗಳು ಒಳಗೆ ಬರದಂತೆ ಬಿರುಕುಗಳು ಮತ್ತು ರಂಧ್ರಗಳನ್ನು ಮುಚ್ಚಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ