AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐರನ್‌ಮ್ಯಾನ್ 70.3 ಎಂದರೇನು? ಈ ರೇಸ್‌ನಲ್ಲಿ ಭಾಗವಹಿಸುವುದು ಹೇಗೆ?

ಗೋವಾದಲ್ಲಿ ನವೆಂಬರ್‌ 9 ರಂದು ನಡೆದ ಐರನ್‌ ಮ್ಯಾನ್‌ 70.3 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಈ ಕಠಿಣ ರೇಸ್‌ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಸಖತ್‌ ಸುದ್ದಿಯಾಗಿದ್ದರು. ಅಷ್ಟಕ್ಕೂ ಈ ಐರನ್‌ಮ್ಯಾನ್‌ 70.3 ರ ಎಂದರೇನು, ಈ ಕಠಿಣ ರೇಸ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಬೇಕಾದಂತಹ ಅರ್ಹತೆಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಐರನ್‌ಮ್ಯಾನ್ 70.3 ಎಂದರೇನು? ಈ ರೇಸ್‌ನಲ್ಲಿ ಭಾಗವಹಿಸುವುದು ಹೇಗೆ?
ಐರನ್‌ ಮ್ಯಾನ್‌ 70.3Image Credit source: Google
ಮಾಲಾಶ್ರೀ ಅಂಚನ್​
|

Updated on: Nov 12, 2025 | 6:35 PM

Share

ಐರನ್‌ಮ್ಯಾನ್‌ 70.3 (Ironman 70.3) ರೇಸ್‌, ಸ್ಪರ್ಧೆಯಲ್ಲಿ ಭಾಗವಹಿಸುವವರ ದೈಹಿಕ ಮತ್ತು ಮಾನಸಿಕ ಸ್ಥಿತಿಸ್ಥಾಪಕತೆಯನ್ನು ಪರೀಕ್ಷಿಸುವ ಒಂದು ಕಠಿಣ ಸವಾಲಿನ ಸ್ಪರ್ಧೆಯಾಗಿದೆ. ಈ ಸ್ಪರ್ಧೆ ಸಮುದ್ರದಲ್ಲಿ 1.9 ಕಿಲೋಮೀಟರ್‌ ಈಜು, 90 ಕಿಮೀ ಸೈಕ್ಲಿಂಗ್‌, 21.1 ಕಿಮೀ ಓಟವನ್ನು ಒಳಗೊಂಡಿರುತ್ತದೆ. ಇವೆಲ್ಲವನ್ನು ಪೂರ್ಣಗೊಳಿಸಿದವರು ಮಾತ್ರ ಈ ಸ್ಪರ್ಧೆಯಲ್ಲಿ ಗೆಲ್ಲಲು ಸಾಧ್ಯ.  ಈ ಸವಾಲನ್ನು ಪೂರ್ಣಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಇತ್ತೀಚಿಗೆ ಗೋವಾದಲ್ಲಿ ನಡೆದ ಐರನ್‌ 70.3 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಐರನ್‌ ಮ್ಯಾನ್‌ ಟ್ರಯಥ್ಲಾನ್‌ ಪೂರ್ಣಗೊಳಿಸಿ ಫಿಟ್ನೆಸ್‌ ಜೊತೆಗೆ ಮಾನಸಿಕ ಸ್ಥೈರ್ಯವನ್ನು ಪ್ರದರ್ಶಿಸಿದ್ದಾರೆ. ತೇಜಸ್ವಿ ಸೂರ್ಯ ಅವರಂತೆ ನೀವು ಕೂಡ ಈ ಫಿಟ್ನೆಸ್‌ ಚಾಲೆಂಜ್‌ನಲ್ಲಿ ಭಾಗವಹಿಸಬೇಕಾ? ಹಾಗಿದ್ರೆ ಇದಕ್ಕೆ ಬೇಕಾಗಿರುವ ಅರ್ಹತೆಗಳೇನು, ಏನೆಲ್ಲಾ ಸಲಹೆಗಳನ್ನು ಪಾಲಿಸಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಐರನ್‌ಮ್ಯಾನ್ 70.3 ಎಂದರೇನು?

ಐರನ್‌ಮ್ಯಾನ್ 70.3 ಸ್ಪರ್ಧೆಯನ್ನು ಹಾಫ್ ಐರನ್‌ಮ್ಯಾನ್ ಎಂದೂ ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಬೇಡಿಕೆಯ ಟ್ರಯಥ್ಲಾನ್‌ಗಳಲ್ಲಿ ಒಂದಾಗಿದೆ. ಇದರಲ್ಲಿರು 70.3 ಅದರ ದೂರವನ್ನು ಸೂಚಿಸುತ್ತದೆ.

ಇದು  ಮೂರು ಸಹಿಷ್ಣುತಾ ವಿಭಾಗಗಳನ್ನು ಒಳಗೊಂಡಿದೆ:

  • ತೆರೆದ ನೀರಿನಲ್ಲಿ 1.9 ಕಿಮೀ ಈಜುವುದು
  • ಬೆಟ್ಟಗುಡ್ಡಗಳಾದ್ಯಂತ 90 ಕಿ.ಮೀ ಸೈಕ್ಲಿಂಗ್
  • 21.1 ಕಿಮೀ ಓಟ (ಆಫ್ ಮ್ಯಾರಥಾನ್)

ಸ್ಪರ್ಧಿಗಳ ದೈಹಿಕ ಸಹಿಷ್ಣುತೆ, ಮಾನಸಿಕ ಶಕ್ತಿ ಮತ್ತು ಶಿಸ್ತಿನ ತರಬೇತಿಯನ್ನು ಪರೀಕ್ಷಿಸುವ ಈ ಕಠಿಣ ಸ್ಪರ್ಧೆಯನ್ನು  ವರ್ಲ್ಡ್ ಟ್ರಯಥ್ಲಾನ್ ಕಾರ್ಪೊರೇಷನ್ ಆಯೋಜಿಸುತ್ತದೆ. ಹಾಫ್ ಐರನ್ ಮ್ಯಾನ್, ಅಥವಾ ಐರನ್ ಮ್ಯಾನ್ 70.3, 113 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇದು 1.9-ಕಿಲೋಮೀಟರ್ ಈಜು, 90-ಕಿಲೋಮೀಟರ್ ಸೈಕಲ್ ಮತ್ತು 21.1-ಕಿಲೋಮೀಟರ್ ಓಟವನ್ನು ಒಳಗೊಂಡಿದೆ. ಈ ರೇಸ್ ಅನ್ನು 8 ಗಂಟೆ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ಅವಧಿಯ ಒಳಗಾಗಿ ಸ್ಪರ್ಧೆಯನ್ನು ಪೂರ್ಣಗೊಳಿಸುವ ವ್ಯಕ್ತಿಗೆ ಐರನ್ ಮ್ಯಾನ್ ಎಂಬ ಬಿರುದನ್ನು ನೀಡಲಾಗುತ್ತದೆ.

ದೈಹಿಕ ಶಕ್ತಿ ಹಾಗೂ ಮಾನಸಿಕ ಸಾಮರ್ಥ್ಯದ ಪ್ರದರ್ಶನವಿದು:

ಐರನ್‌ಮ್ಯಾನ್ ಟ್ರಯಥ್ಲಾನ್ ಅನೇಕ ಜನರಿಗೆ ಪರಿಚಯವಿಲ್ಲದ ವಿಷಯ ಅಂತಾನೇ ಹೇಳಬಹುದು. ಈ ಸ್ಪರ್ಧೆಯ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇದು ಕೇವಲ ರೇಸ್‌ ಅಲ್ಲ. ನಾವು ಎದುರಿಸುವ ಸವಾಲುಗಳನ್ನು ನಾವು ಎಷ್ಟು ತಡೆದುಕೊಳ್ಳಬಲ್ಲೆವು ಎಂಬುದರ ಪರೀಕ್ಷೆಯಾಗಿದೆ. 3.8 ಕಿಲೋಮೀಟರ್ ಓಪನ್ ವಾಟರ್ ಈಜು, 180 ಕಿಲೋಮೀಟರ್ ಸೈಕ್ಲಿಂಗ್‌  ಮತ್ತು 42.2 ಕಿಲೋಮೀಟರ್ ಮ್ಯಾರಥಾನ್ ಓಟ… ಈ ಮೂರರ ಸಂಯೋಜನೆಯೇ ಈ ಸ್ಪರ್ಧೆ. ಈ ಎಲ್ಲಾ ಚಾಲೆಂಜ್‌ಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಇದಕ್ಕೆ ದೈಹಿಕ ಶಕ್ತಿ ಮಾತ್ರವಲ್ಲ,  ಮಾನಸಿಕ  ಸಾಮರ್ಥ್ಯವೂ ಅತ್ಯಗತ್ಯ. ಒಟ್ಟಾರೆಯಾಗಿ ಈ ಸ್ಪರ್ಧೆ ಕ್ರೀಡಾಪಟುವಿನ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಪರೀಕ್ಷಿಸುತ್ತದೆ.

ಐರನ್‌ ಮ್ಯಾನ್‌  70.3 ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬೇಕಾದ ಅರ್ಹತೆಗಳು:

  • 18 ವರ್ಷ ಮೇಲ್ಪಟ್ಟವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • ವೈದ್ಯಕೀಯ ಅನುಮತಿ: ಸ್ಪರ್ಧಿಗಳು ತಾವು  ಈ ಸ್ಪರ್ಧೆಯಲ್ಲು  ಸ್ಪರ್ಧಿಸಲು ತಾವು ಅರ್ಹರು ಎಂದು ವೈದ್ಯರಿಂದ ಪ್ರಮಾಣೀಕರಿಸಬೇಕು.

ಇದನ್ನೂ ಓದಿ: ಬಿಡುವಿಲ್ಲದ ಜೀವನದಲ್ಲಿ ಫಿಟ್ ಅಂಡ್ ಫೈನ್ ಆಗಿರುವುದು ಹೇಗೆ? ಚಟುವಟಿಕೆಗಳಿಗೆ ಬಾಬಾ ರಾಮದೇವ್ ಶಿಫಾರಸು

ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗಾಗಿ ಪ್ರಮುಖ ತರಬೇತಿ ಸಲಹೆ:

ಸ್ಪಷ್ಟ ಗುರಿಗಳನ್ನು ಹೊಂದಿಸಿ: ಪ್ರತಿಯೊಂದು ವಿಭಾಗಕ್ಕೂ (ಈಜು, ಬೈಕಿಂಗ್, ಓಟ) ಮತ್ತು ಒಟ್ಟಾರೆ ಓಟಕ್ಕೆ ನಿರ್ದಿಷ್ಟ, ಸಾಧಿಸಬಹುದಾದ ಗುರಿಗಳನ್ನು ಹೊಂದಿಸಿ. ಸೂಕ್ತ ತರಬೇತಿಯನ್ನು ಪಡೆಯಿರಿ.

ಸೂಕ್ತ ತರಬೇತಿ: ಈಜು, ಸೈಕ್ಲಿಂಗ್ ಮತ್ತು ಓಟದಲ್ಲಿ ಕ್ರಮೇಣ ಸಹಿಷ್ಣುತೆಯನ್ನು ನಿರ್ಮಿಸುವ ಸಮಗ್ರ ತರಬೇತಿ ವೇಳಾಪಟ್ಟಿಯನ್ನು ಅಭಿವೃದ್ಧಿಪಡಿಸಿ. ಚೆನ್ನಾಗಿ ವ್ಯಾಯಾಮವನ್ನು ಮಾಡಿ. ನೀವು ಟ್ರಯಥ್ಲಾನ್‌ ಸ್ಪರ್ಧೆಯಲ್ಲಿ ಭಾಗವಹಿಸಲು ಹೊಸಬರಾಗಿದ್ದರೆ, ಐರನ್‌ಮ್ಯಾನ್‌ ತರಬೇತುದಾರರಿಂದ ತರಬೇತಿಯನ್ನು ಪಡೆಯುವುದು ಸೂಕ್ತ.

ವ್ಯಾಯಾಮ: ಸ್ಥಿರವಾದ ತರಬೇತಿ ಮುಖ್ಯ. ಕಡಿಮೆ ಅವಧಿಯ ವ್ಯಾಯಾಮ ಮಾಡಿದರೂ ನಿಯಮಿತ ವ್ಯಾಯಾಮಗಳನ್ನು ಮಾಡುವ ಗುರಿಯಿಟ್ಟುಕೊಳ್ಳಿ. ಇದು ನಿಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ಸ್ಪರ್ಧೆಯನ್ನು ಪೂರ್ಣಗೊಳಿಸಲು ಸಹ ಸಹಾಯ ಮಾಡುತ್ತದೆ. ಮುಖ್ಯವಾಗಿ ಈಜು, ಸೈಕ್ಲಿಂಗ್‌ ಮತ್ತು ಓಟಕ್ಕೆ ಸಹಾಯವಾಗುವ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳತ್ತ ಗಮನ ಹರಿಸಿ.

ರೇಸ್ ಸ್ಥಿತಿಗತಿಗಳನ್ನು ಅನುಕರಿಸಿ: ತರಬೇತಿಯ ಸಮಯದಲ್ಲಿ ರೇಸ್-ಡೇ ಪರಿಸ್ಥಿತಿಗಳನ್ನು ಅನುಕರಿಸಿ. ಸ್ವಿಮ್ಮಿಂಗ್‌ಫುಲ್‌ ಅಭ್ಯಾಸ ಮಾಡಿ, ನಿಮ್ಮ ರೇಸ್ ಕೋರ್ಸ್‌ಗೆ ಹೋಲುವ ಸ್ಥಳಗಳಲ್ಲಿ ಸೈಕ್ಲಿಂಗ್‌, ಓಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಪೋಷಣೆ ಮತ್ತು ಜಲಸಂಚಯನ: ದೀರ್ಘ ತರಬೇತಿಯ ಅವಧಿಯಲ್ಲಿ ದೇಹಕ್ಕೆ ಬೇಕಾದ ಪೋಷಣೆ ಮತ್ತು ಜಲಸಂಚಯನದ ಬಗ್ಗೆಯೂ ಗಮನ ಹರಿಸಿ. ಶಕ್ತಿಯ ಮಟ್ಟವನ್ನು ಉಳಿಸಿಕೊಳ್ಳಲು ಯಾವ ಆಹಾರ ಸೇವನೆ ಮಾಡಬೇಕು, ಎಷ್ಟು ನೀರು ಕುಡಿಯಬೇಕು ಎಂಬುದನ್ನು ತರಬೇತಿಯ ಹಂತದಲ್ಲಿಯೇ ನೋಡಿಕೊಳ್ಳಿ.

ದೇಹಾರೋಗ್ಯದ ಕಡೆ ಗಮನ ಕೊಡಿ: ತರಬೇತಿಯ ಸಮಯದಲ್ಲಿ ಆಯಾಸ, ಅಸ್ವಸ್ಥತೆ ಅಥವಾ ದೇಹಕ್ಕೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿಶ್ರಾಂತಿ ಮತ್ತು ಚೇತರಿಕೆಯ ಕಡೆಗೂ ಗಮನ ನೀಡಿ. ಉತ್ತಮ ನಿದ್ರೆಯನ್ನೂ ಮಾಡಿ. ಜೊತೆಗೆ ಸ್ಪರ್ಧೆಗೆ ದಿನ ಹತ್ತಿರವಾಗುತ್ತಿದ್ದಂತೆ ತರಬೇತಿಯನ್ನು ಕಮ್ಮಿ ಮಾಡುತ್ತಾ ಬನ್ನಿ, ಏಕೆಂದರೆ ಇದು ಇದು ನಿಮ್ಮ ದೇಹವು ಚೇತರಿಸಿಕೊಳ್ಳಲು ಮತ್ತು ಸ್ಪರ್ಧೆಯ ದಿನ ನೀವು ಆಕ್ಟಿವ್‌ ಆಗಿರಲು ಅನುವು ಮಾಡಿಕೊಡುತ್ತದೆ. ಐರನ್‌ ಮ್ಯಾನ್‌  ಟ್ರಯಥ್ಲಾನ್‌ಗಳಲ್ಲಿ ನಿರ್ದಿಷ್ಟ ಗುರಿ ತಲುಪಲು  ತಾಳ್ಮೆ ಮತ್ತು ಪರಿಶ್ರಮ, ಮಾನಸಿಕ ಸ್ಥೈರ್ಯ ತುಂಬಾನೇ ಮುಖ್ಯ. ಹಾಗಾಗಿ ಮಾನಸಿಕವಾಗಿ ಬಲಿಷ್ಠರಾಗಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!