ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಗಿಡಗಳನ್ನು ನೆಡಬೇಡಿ; ಯಾಕೆ ಗೊತ್ತಾ?
ಮನೆ ಸುತ್ತಲಿನ ಪರಿಸರ ಸುಂದರವಾಗಿರಲು, ಪರಿಸರವನ್ನು ತಾಜಾವಾಗಿಡಲು ಮನೆಯಲ್ಲಿ ಬಗೆಬಗೆಯ ಗಿಡಗಳನ್ನು ನೆಡುತ್ತಾರೆ. ಹಚ್ಚ ಹಸಿರಾಗಿರುವ ಈ ಸಸ್ಯಗಳು ಸಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಆದ್ರೆ ಕೆಲವು ಗಿಡಗಳನ್ನು ನೆಟ್ಟರೆ ಮನೆಯಲ್ಲಿ ನಕಾರಾತ್ಮಕತೆ ಹರಡುತ್ತಂತೆ. ಹಾಗಿದ್ರೆ ಯಾವ ಗಿಡಗಳನ್ನು ನೆಡಬಾರದು ಎಂಬುದನ್ನು ತಿಳಿಯಿರಿ.

ಮನೆಯ ವಾತಾವರಣವನ್ನು ಸುಂದರಗೊಳಿಸುತ್ತದೆ, ಪ್ರಶಾಂತವಾಗಿರಿಸುತ್ತದೆ ಎಂಬ ಕಾರಣಕ್ಕೆ ಎಲ್ಲರೂ ಮನೆ ಸುತ್ತಲೂ ತರಹೇವಾರಿ ಗಿಡಗಳನ್ನು (plant) ನೆಡುತ್ತಾರೆ. ಹಚ್ಚ ಹಸಿರಿನ ಈ ಸಸ್ಯಗಳು ಶಾಂತಿ, ನೆಮ್ಮದಿಯನ್ನು ನೀಡುತ್ತವೆ. ಸಸ್ಯಗಳು ಧನಾತ್ಮಕ ವಾತಾವರಣವನ್ನು ಸೃಷ್ಟಿಸುದರ ಜೊತೆಗೆ ನಮ್ಮ ಮಾನಸಿಕ, ದೈಹಿಕ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೂ ಆಳವಾದ ಪರಿಣಾಮ ಬೀರುತ್ತವೆ ಬೀರುತ್ತವೆ. ಅದರಲ್ಲಿ ಕೆಲವು ಸಸ್ಯಗಳು ಸಕಾರಾತ್ಮಕ ಶಕ್ತಿ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತವೆ ಎಂದು ನಂಬಲಾಗಿದೆ ಅದೇ ರೀತಿ ಕೆಲವು ಸಸ್ಯಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದಂತೆ, ಅವುಗಳನ್ನು ಮನೆಯಲ್ಲಿ ನೆಡಬಾರದು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಯಾವ ಸಸ್ಯಗಳನ್ನು ನೆಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಈ ಗಿಡಗಳನ್ನು ಮನೆಯಲ್ಲಿ ನೆಡಬಾರದು:
ಅಕೇಶಿಯಾ ಸಸ್ಯ: ಅಕೇಶಿಯಾ ಒಂದು ಮುಳ್ಳಿನ ಸಸ್ಯವಾಗಿದ್ದು, ಈ ಮುಳ್ಳಿನ ಸಸ್ಯವನ್ನು ಮನೆಯಲ್ಲಿ ನೆಡುವುದು ಅಷ್ಟು ಸೂಕ್ತವಲ್ಲ. ಈ ಸಸ್ಯವು ಮನೆಯಲ್ಲಿ ಕಿರಿಕಿರಿ, ಸಂಘರ್ಷ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ. ಅಕೇಶಿಯಾ ಸಂಬಂಧಗಳ ಸಾಮರಸ್ಯವನ್ನು ನಾಶಪಡಿಸುತ್ತದೆ ಮತ್ತು ಮಾನಸಿಕ ಅಶಾಂತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸಸ್ಯವನ್ನು ನೆಡುವುದು ಸೂಕ್ತವಲ್ಲ.
ಕಳ್ಳಿ ಗಿಡ: ಕಳ್ಳಿ ಗಿಡ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಮನೆಯ ಒಳಗೂ ಈ ಗಿಡವನ್ನು ಹಲವರು ನೆಡುತ್ತಾರೆ. ಆದರೆ ಈ ಸಸ್ಯ ಆಕರ್ಷಕವಾಗಿ ಕಂಡರೂ, ಅದರ ಮುಳ್ಳುಗಳನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಉದ್ವಿಗ್ನತೆ, ಸಂಘರ್ಷವನ್ನು ಹೆಚ್ಚಿಸಲು ಕಾರಣವಾಗುತ್ತದಂತೆ. ಅಲ್ಲದೆ ಮಾನಸಿಕ ಒತ್ತಡ ಮತ್ತು ಆರ್ಥಿಕ ನಷ್ಟವನ್ನೂ ಉಂಟುಮಾಡಬಹುದಂತೆ.
ಇದನ್ನೂ ಓದಿ: ಮನೆಯಲ್ಲಿ ಯಾವ ತುಳಸಿ ಗಿಡ ನೆಡುವುದು ಬಹಳ ಒಳ್ಳೆಯದು?
ಮೆಹಂದಿ ಗಿಡ: ಈ ಗಿಡ ಪರಿಮಳಯುಕ್ತ ಮತ್ತು ಪ್ರಯೋಜನಕಾರಿಯಾಗಿದ್ದರೂ, ಮನೆಯ ಬಳಿ ಈ ಗಿಡವನ್ನು ನೆಡುವುದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಸಸ್ಯವು ನಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ, ಇದು ಮನೆಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಮತ್ತು ಅಸ್ಥಿರತೆಯನ್ನು ಉಂಟುಮಾಡುತ್ತದಂತೆ
ಒಣಗಿದ ಸಸ್ಯಗಳು: ಮನೆಯಲ್ಲಿ ಒಣಗಿದ ಸಸ್ಯಗಳನ್ನು ಇಡಬಾರದು. ಈ ಸಸ್ಯಗಳನ್ನು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದು ಮನೆಯ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




