AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿ ಅಥವಾ ತಣ್ಣೀರು, ಚಳಿಗಾಲದಲ್ಲಿ ಯಾವ ನೀರಿನಿಂದ ಸ್ನಾನ ಮಾಡುವುದು ಉತ್ತಮ?

Winter Body Care: ಚಳಿಗಾಲ ಆರಂಭವಾಗಿದೆ, ಈ ಋತುವಿನಲ್ಲಿ ಎಲ್ಲದರ ಜೊತೆಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಮತ್ತೊಂದೆಡೆ, ಬಿಸಿನೀರಿನ ಸ್ನಾನವು ಚರ್ಮವನ್ನು ಒಣಗಿಸುತ್ತದೆ, ಕೂದಲನ್ನು ಹಾನಿಗೊಳಿಸುತ್ತದೆ ಮತ್ತು ದೇಹದ ನೈಸರ್ಗಿಕ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಸೂಕ್ತವೇ, ಈ ಋತುವಿನಲ್ಲಿ ಸ್ನಾನಕ್ಕೆ ಯಾವ ನೀರನ್ನು ಬಳಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಿಸಿ ಅಥವಾ ತಣ್ಣೀರು, ಚಳಿಗಾಲದಲ್ಲಿ ಯಾವ ನೀರಿನಿಂದ ಸ್ನಾನ ಮಾಡುವುದು ಉತ್ತಮ?
Cold Vs Hot Water Bath In WinterImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Nov 12, 2025 | 11:50 AM

Share

ಚಳಿಗಾಲ (Winter) ಆರಂಭವಾಗಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ಜನರು ಸ್ನಾನಕ್ಕೆ ಮಾತ್ರವಲ್ಲ ಕೈ, ಕಾಲು ತೊಳೆದುಕೊಳ್ಳುವುದಕ್ಕೂ ಬಿಸಿನೀರನ್ನೇ ಬಳಸುತ್ತಾರೆ. ಆದರೆ ಕೆಲವರು ಯಾವುದೇ ಕಾಲವಾಗಿರಲಿ, ಅದೆಂತಹದ್ದೇ ಚಳಿಯಿರಲಿ ಅವರು ಸ್ನಾನಕ್ಕೆ ಮಾತ್ರ ತಣ್ಣೀರನ್ನೇ ಬಳಸುತ್ತಾರೆ. ಬೇಸಿಗೆ ಕಾಲದಲ್ಲಿ ತಣ್ಣೀರಿನ ಸ್ನಾನ ಮಾಡಬಹುದು ಆದರೆ ಚಳಿಗಾಲದಲ್ಲಿ ಮಾಡುವುದು ಸ್ವಲ್ಪ ಕಷ್ಟ. ಅದಕ್ಕಾಗಿಯೇ ಈ ಸಮಯದಲ್ಲಿ ಬಿಸಿ ನೀರಿನ ಸ್ನಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಸೂಕ್ತವೇ, ಈ ಋತುವಿನಲ್ಲಿ ಸ್ನಾನಕ್ಕೆ ಯಾವ ನೀರನ್ನು ಬಳಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಮತ್ತೊಂದೆಡೆ, ಬಿಸಿನೀರಿನ ಸ್ನಾನವು ಚರ್ಮವನ್ನು ಒಣಗಿಸುತ್ತದೆ, ಕೂದಲನ್ನು ಹಾನಿಗೊಳಿಸುತ್ತದೆ ಮತ್ತು ದೇಹದ ನೈಸರ್ಗಿಕ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ. ಹಾಗಾದರೆ ಇವೆರಡರಲ್ಲಿ ಯಾವುದು ಸತ್ಯ ಎಂಬುದು ಹಲವರ ಗೊಂದಲಕ್ಕೆ ಕಾರಣವಾಗುತ್ತದೆ.

ಬಿಸಿನೀರಿನ ಸ್ನಾನ

ಬಿಸಿ ನೀರಿನಿಂದ ಸ್ನಾನ ಮಾಡುವುದು ಚರ್ಮಕ್ಕೆ ಹಾನಿಕಾರಕ ಎಂಬುದು ನಿಜ, ಏಕೆಂದರೆ ಅತಿಯಾದ ಬಿಸಿ ನೀರು ನಿಮ್ಮ ಚರ್ಮದ ನೈಸರ್ಗಿಕ ರಕ್ಷಣಾತ್ಮಕ ಕೋಶಗಳನ್ನು ಹಾನಿಗೊಳಿಸುತ್ತದೆ. ಇದು ಶುಷ್ಕತೆಗೆ ಕಾರಣವಾಗಬಹುದು. ನಿಮ್ಮ ಚರ್ಮ ಈಗಾಗಲೇ ಒಣಚರ್ಮವಾಗಿದ್ದು ನೀವು ಬಿಸಿ ನೀರಿನಿಂದ ಸ್ನಾನ ಮಾಡಿದರೆ, ಅದು ಚರ್ಮದ ಕಿರಿಕಿರಿ ಮತ್ತು ಬಿರುಕು ಬಿಡುವ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ತಣ್ಣೀರಿನ ಸ್ನಾನ

ಅತಿಯಾದ ಚಳಿ ಇದ್ದಾಗ ದೇಹದ ಮೇಲೆ ತಣ್ಣೀರು ಹಾಕಿಕೊಂಡರೆ, ಅದು ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಏಕೆಂದರೆ ದೇಹವು ಇದ್ದಕ್ಕಿದ್ದಂತೆ ತುಂಬಾ ತಣ್ಣನೆಯ ಅಥವಾ ತುಂಬಾ ಬಿಸಿ ನೀರಿನ ಸಂಪರ್ಕಕ್ಕೆ ಬಂದಾಗ, ರಕ್ತನಾಳಗಳು ತಕ್ಷಣವೇ ಪ್ರತಿಕ್ರಿಯಿಸುತ್ತವೆ. ಈ ಪರಿಸ್ಥಿತಿಯಲ್ಲಿ, ತಣ್ಣೀರು ದೇಹದ ಮೇಲೆ ಬಿದ್ದ ತಕ್ಷಣ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿಯೇ ಪಾರ್ಶ್ವವಾಯು ಪ್ರಕರಣ ಹೆಚ್ಚಾಗುವುದಕ್ಕೆ ಈ ಅಂಶಗಳೇ ಕಾರಣ! ತಡೆಗಟ್ಟಲು ವೈದ್ಯರು ನೀಡಿದ ಈ ಸಲಹೆಗಳನ್ನು ಪಾಲಿಸಿ

ಚಳಿಗಾಲದಲ್ಲಿ ಸ್ನಾನಕ್ಕೆ ಯಾವ ನೀರನ್ನು ಬಳಸಬೇಕು?

ಆರೋಗ್ಯ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಬಹಳ ಉತ್ತಮ ಎಂದು ಹೇಳಲಾಗುತ್ತದೆ. ಒಣ ಚರ್ಮ ಮತ್ತು ತುರಿಕೆಯನ್ನು ತಡೆಗಟ್ಟಲು ಸ್ನಾನದ ನಂತರ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಬಹಳ ಒಳ್ಳೆಯದು. ಚಳಿಗಾಲದಲ್ಲಿ ಅತ್ಯಂತ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುವುದು ಮತ್ತು ದೇಹದ ಉಷ್ಣತೆಯ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ಈ ಋತುವಿನಲ್ಲಿ ಸ್ನಾನಕ್ಕೆ ಬೆಚ್ಚಗಿನ ನೀರನ್ನು ಬಳಸುವುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ಹ್ಯಾಂಡ್ ಪಂಪ್ ಅಥವಾ ಬೋರ್‌ವೆಲ್ ನೀರನ್ನು ಬಳಸಬಹುದೇ?

ಚಳಿಗಾಲದಲ್ಲಿ, ಬಿಸಿನೀರು ಹ್ಯಾಂಡ್ ಪಂಪ್ ಅಥವಾ ಬೋರ್‌ವೆಲ್‌ಗಳಿಂದ ಹೊರಬರುತ್ತದೆ, ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ನೀರನ್ನು ಬಿಸಿ ಮಾಡದೆಯೇ ಸ್ನಾನ ಮಾಡುತ್ತಾರೆ. ಆದರೆ ಈ ನೀರು ಕೆಲವೊಮ್ಮೆ ಚರ್ಮದ ಮೇಲೆ ಉರಿ ಮತ್ತು ತುರಿಕೆಗೆ ಕಾರಣವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು