AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಡಂಬಿ ಬೀಜ ಇಷ್ಟೊಂದು ಕಾಸ್ಟ್ಲಿಯಾಗಿರೋದು ಏಕೆ ಗೊತ್ತಾ?

ದುಬಾರಿ ಡ್ರೈ ನಟ್ಸ್‌ಗಳ ಪೈಕಿ ಗೋಡಂಬಿ ಕೂಡ ಒಂದು. ತಿನ್ನುವುದರ ಜೊತೆಗೆ ಅಡುಗೆಯ ರುಚಿ ಹೆಚ್ಚಿಸಲು, ಬೇರೆ ಬೇರೆ ಖಾದ್ಯಗಳನ್ನು ತಯಾರಿಸಲು ಗೋಡಂಬಿಯನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್‌, ಆರೋಗ್ಯಕರ ಕೊಬ್ಬು ಸೇರಿದಂತೆ ಹಲವಾರು ಪೋಷಕಾಂಶಗಳನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿ. ಗೋಡಂಬಿಯ ಈ ಆರೋಗ್ಯ ಪ್ರಯೋಜನ ಹಾಗೂ ಜಾಗತಿಕ ಮನ್ನಣೆಯ ಕಾರಣದಿಂದಾಗಿ ಇದು ತುಂಬಾ ದುಬಾರಿ ಎಂದು ಹಲವರು ಭಾವಿಸುತ್ತಾರೆ. ಇದರ ಹಿಂದೆ ಇನ್ನೊಂದಿಷ್ಟು ಕಾರಣಗಳೂ ಇವೆ. ಅವು ಯಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಗೋಡಂಬಿ ಬೀಜ ಇಷ್ಟೊಂದು ಕಾಸ್ಟ್ಲಿಯಾಗಿರೋದು ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Freepik
ಮಾಲಾಶ್ರೀ ಅಂಚನ್​
|

Updated on: Nov 23, 2025 | 3:18 PM

Share

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಹುತೇಕ ಎಲ್ಲರೂ ಗೋಡಂಬಿಯನ್ನು (cashew nuts) ಇಷ್ಟಪಟ್ಟು ತಿನ್ನುತ್ತಾರೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಅನೇಕರು ಪ್ರತಿನಿತ್ಯ ಸ್ವಲ್ಪ ಗೋಡಂಬಿಯನ್ನು ತಿನ್ನುತ್ತಾರೆ. ಇದಲ್ಲದೆ ಇದರಿಂದ ರುಚಿಕರವಾದ ಹಲವಾರು ಖಾದ್ಯಗಳನ್ನು ಸಹ ತಯಾರಿಸಲಾಗುತ್ತದೆ. ಪೌಷ್ಟಿಕಾಂಶದ ಗಣಿಯಾಗಿರುವ ಈ ಗೋಡಂಬಿ ಕೊಂಚ ದುಬಾರಿ ಒಣ ಫಲವು ಹೌದು. 1 ಕೆಜಿ ಗೋಡಂಬಿ ಬೆಲೆ ಸಾವಿರಕ್ಕಿಂತ ಹೆಚ್ಚಿರುತ್ತವೆ. ಹೌದು ಗೇರು ಹಣ್ಣನ್ನು ಬೆಳೆಯುವುದರಿಂದ ಹಿಡಿದು ಗೋಡಂಬಿ ಮಾರುಕಟ್ಟೆಗೆ ಹೋಗುವವರೆಗಿನ ಪ್ರಕ್ರಿಯೆ ತುಂಬಾ ಕಷ್ಟಕರ ಮತ್ತು ಸುದೀರ್ಘವಾಗಿದ್ದು, ಇದರಿಂದ ಗೋಡಂಬಿ ತುಂಬಾನೇ ಕಾಸ್ಟ್ಲಿಯಾಗಿರುತ್ತವೆ. ಈ ಕುರಿತ ಮತ್ತಷ್ಟು ಸಂಗತಿಯನ್ನು ತಿಳಿಯಿರಿ.

ಗೋಡಂಬಿ ಬೀಜ ಏಕೆ ತುಂಬಾನೇ ದುಬಾರಿ?

ಗೋಡಂಬಿ ಕೃಷಿ ಅತ್ಯಂತ ಸವಾಲಿನದ್ದು:  ಗೇರು ಮರಗಳು ಫಲ ನೀಡಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಹವಾಮಾನದಲ್ಲಿನ ಸಣ್ಣಪುಟ್ಟ ಬದಲಾವಣೆಗಳು ಈ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಅಲ್ಲದೆ ಗೇರು ಮರವು ಉಷ್ಣವಲಯದ ಹವಾಮಾನದಲ್ಲಿ ಮಾತ್ರ ಹೆಚ್ಚಿನ ಇಳುವರಿಯನ್ನು ನೀಡುತ್ತದೆ. ಇದಕ್ಕೆ ತೇವಾಂಶ, ಉಷ್ಣತೆ ಮತ್ತು ಸಕಾಲಿಕ ಮಳೆಯ ಅಗತ್ಯವಿರುತ್ತದೆ.  ಹವಾಮಾನದಲ್ಲಿದ ಸ್ವಲ್ಪ ಬದಲಾವಣೆಯೂ ಸಹ ಬೆಳೆಯ ಮೇಲೆ ಪರಿಣಾಮ ಬೀರುತ್ತವೆ. ಅಲ್ಲದೆ ಒಂದು ಗೇರು ಹಣ್ಣು ಕೇವಲ ಒಂದು ಬೀಜವನ್ನು ಹೊಂದಿರುತ್ತದೆ. ಈ ಅಂಶ ಬೆಲೆ ಹೆಚ್ಚಾಗಲು ಒಂದು ಕಾರಣ ಅಂತಾನೇ ಹೇಳಬಹುದು.

ಮೌಲ್ಯವರ್ಧಿತ ಸಂಸ್ಕರಣೆ: ಆರಂಭಿಕ ಕೊಯ್ಲಿನ ನಂತರ, ಗೋಡಂಬಿಯ ಶುಚಿಗೊಳಿಸುವಿಕೆ, ಒಣಗಿಸುವುದು, ಹುರಿಯುವುದು ಮತ್ತು ಪ್ಯಾಕೇಜಿಂಗ್ ಸೇರಿದಂತೆ ಹಲವಾರು ಸಂಸ್ಕರಣಾ  ಹಂತಗಳಿವೆ. ಅದರಲ್ಲೂ ಗೇರು ಬೀಜಗಳ ಚಿಪ್ಪು ಗಟ್ಟಿಯಾಗಿರುವುದು ಮಾತ್ರವಲ್ಲದೆ ವಿಷಕಾರಿಯಾಗಿದೆ. ಈ ಗೇರುಸಿಪ್ಪೆಯಲ್ಲಿ  CNSL ಎಂಬ ಕಾಸ್ಟಿಕ್ ಎಣ್ಣೆಯಿದ್ದು, ಇದು ಚರ್ಮದ ಮೇಲೆ ತಾಕಿದರೆ ಚರ್ಮ  ಸುಡುತ್ತದೆ. ಜೊತೆಗೆ ಕಲೆ ಹಾಗೆಯೇ ಇರುತ್ತವೆ. ಹೀಗೆ ಗೋಡಂಬಿ ಉದ್ಯಮದಲ್ಲಿರುವವರಿಗೆ ಹಾಗೂ ಕಾರ್ಮಿಕರು ಇದರ ಸಂಸ್ಕರಣೆಯಲ್ಲಿ ಸಾಕಷ್ಟು ಅಪಾಯಗಳನ್ನು ಎದುರಿಸುತ್ತಾರೆ. ಅಲ್ಲದೆ ಸಂಸ್ಕರಣಾ ವೆಚ್ಚವೂ ದುಬಾರಿಯಾಗಿರುತ್ತವೆ. ಕೊಯ್ಲು, ಬೀಜಗಳನ್ನು ಒಳಗಿಸುವುದು, ಸಿಪ್ಪೆ ತೆಗೆಯುವುದರಿಂದ ಹಿಡಿದು ಪ್ಯಾಕೇಜಿಂಗ್‌ ವರೆಗೆ ಗೋಡಂಬಿ ತಯಾರಿಸಲು ಹಲವು ಹಂತಗಳಿದ್ದು, ಈ ಸಂಪೂರ್ಣ ಪ್ರಕ್ರಿಯೆಗೆ ಸಾಕಷ್ಟು ಸಮಯ ಮತ್ತು ಉತ್ತಮ ಕೌಶಲ್ಯ ಬೇಕಾಗುತ್ತದೆ. ಹಾಗಾಗಿ ನುರಿತ ಕೆಲಸಗಾರರಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಕಾರ್ಮಿಕ ವೆಚ್ಚದಲ್ಲಿನ ಈ ಹೆಚ್ಚಳವು ಗೋಡಂಬಿಯ ಬೆಲೆಯನ್ನು ಸಹ ಹೆಚ್ಚಾಗಲು ಕಾರಣ.

ಹೆಚ್ಚಿನ ಬೇಡಿಕೆ, ಕಡಿಮೆ ಉತ್ಪಾದನೆ: ವಿಶ್ವದಾದ್ಯಂತ ಗೋಡಂಬಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹಬ್ಬಗಳಲ್ಲಿ, ಸಿಹಿತಿಂಡಿಗಳನ್ನು ತಯಾರಿಸಲು, ಅಡುಗೆಗಳಿಗೆ ಗೋಡಂಬಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.  ಆದರೆ ಗೋಡಂಬಿಯ ದೇಶೀಯ ಉತ್ಪಾದನೆಯು ಬೇಡಿಕೆಯಷ್ಟು ವೇಗವಾಗಿ ಬೆಳೆಯುತ್ತಿಲ್ಲ. ಈ ಬೇಡಿಕೆ-ಪೂರೈಕೆ ಅಂತರವು ಬೆಲೆ ಹೆಚ್ಚಾಗಲು ಕಾರಣ. ಹೌದು  ಹೆಚ್ಚಿನ ಬೇಡಿಕೆ ಮತ್ತು ಸೀಮಿತ ಪೂರೈಕೆಯಿಂದಾಗಿ, ಗೋಡಂಬಿ ತುಂಬಾನೇ ದುಬಾರಿಯಾಗಿದೆ. ಇದಲ್ಲದೆ, ಹೆಚ್ಚಿನ ಪ್ರಮಾಣದ ರಫ್ತು ದರ್ಜೆಯ ಗೋಡಂಬಿಯನ್ನು ವಿದೇಶಗಳಿಗೆ ಸಾಗಿಸಲಾಗುತ್ತದೆ, ಇದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದನ್ನೂ ಓದಿ: ಗೋಡಂಬಿ ದಿನದ ಆಚರಣೆಯ ಹಿಂದಿನ ಇಂಟರೆಸ್ಟಿಂಗ್‌ ಕಥೆಯ ಬಗ್ಗೆ ತಿಳಿಯಿರಿ

ಶ್ರೇಣೀಕರಣ: ಗೇರು ಸಿಪ್ಪೆ ತೆಗೆದು ಹುರಿದ ಬಳಿಕ ಅವುಗಳನ್ನು ಗಾತ್ರ, ಗುಣಮಟ್ಟ ಹಾಗೂ ಆಕಾರವನ್ನು ಆಧರಿಸಿ ಪ್ರತ್ಯೇಕಿಸಲಾಗುತ್ತದೆ. ಈ ಪ್ರಕ್ರಿಯೆಗೆ ನುರಿತ ಕಾರ್ಮಿಕರ ಅವಶ್ಯಕತೆ ತುಂಬಾನೇ ಇದೆ. ಈ ಇಡಿಯ, ತುಂಡಾಗದ ಗೋಡಂಬಿಗಳು ತುಂಬಾನೇ ದುಬಾರಿಯಾಗಿರುತ್ತವೆ. ತುಂಡಾದಂತಹ ಗೋಡಂಬಿಗೆ ಸ್ವಲ್ಪ ಕಮ್ಮಿ ಬೆಲೆ ಇರುತ್ತದೆ.

ಸಂಗ್ರಹಣೆ ಮತ್ತು ಸಾರಿಗೆ ವೆಚ್ಚಗಳು: ಗಾಳಿಯಾಡದ ಪ್ಯಾಕೇಜಿಂಗ್, ಕೋಲ್ಡ್ ಸ್ಟೋರೇಜ್ ಮತ್ತು ಸುರಕ್ಷಿತ ಸಾಗಣೆಗೆ ಸಹ ಗಮನಾರ್ಹ ವೆಚ್ಚಗಳು ತಗಲುತ್ತವೆ. ಈ ಅಂಶ  ಅಂತಿಮವಾಗಿ ಗೋಡಂಬಿ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತವು ಹಲವಾರು ದೇಶಗಳಿಂದ ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಆಫ್ರಿಕನ್ ದೇಶಗಳು ಗಮನಾರ್ಹ ಪಾಲನ್ನು ಹೊಂದಿವೆ. ಅಂತಾರಾಷ್ಟ್ರೀಯ ಬೆಲೆಗಳಲ್ಲಿನ ಏರಿಳಿತಗಳು, ಸಾಗಣೆ ವೆಚ್ಚಗಳು, ಕಂಟೇನರ್ ಶುಲ್ಕಗಳು ಮತ್ತು ಲಾಜಿಸ್ಟಿಕ್ಸ್ ಇವೆಲ್ಲವೂ ಗೋಡಂಬಿ ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ