AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Cashew Day 2025: ಗೋಡಂಬಿ ದಿನದ ಆಚರಣೆಯ ಹಿಂದಿನ ಇಂಟರೆಸ್ಟಿಂಗ್‌ ಕಥೆಯ ಬಗ್ಗೆ ತಿಳಿಯಿರಿ

ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುವ ಗೋಡಂಬಿ ಕೊಂಚ ದುಬಾರಿ ಬೆಲೆಯ ಒಣ ಬೀಜ ಎಂದರೆ ತಪ್ಪಾಗಲಾರದು. ದುಬಾರಿಯಾಗಿದ್ದರೂ ಸಹ ಇದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾಗಿ ಈ ಒಣ ಬೀಜವನ್ನು ತಮ್ಮ ಆಹಾರದ ಭಾಗವಾಗಿಸಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತಿವರ್ಷ ನವೆಂಬರ್‌ 23 ರಂದು ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.

National Cashew Day 2025: ಗೋಡಂಬಿ ದಿನದ ಆಚರಣೆಯ ಹಿಂದಿನ ಇಂಟರೆಸ್ಟಿಂಗ್‌ ಕಥೆಯ ಬಗ್ಗೆ ತಿಳಿಯಿರಿ
ರಾಷ್ಟ್ರೀಯ ಗೋಡಂಬಿ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Nov 23, 2025 | 10:10 AM

Share

ಗೋಡಂಬಿಯನ್ನು (Cashew) ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರೂ ತಿನ್ನಲು ಇಷ್ಟಪಡುತ್ತಾರೆ. ತಿನ್ನಲು ಮಾತ್ರವಲ್ಲದೆ ಇದರಿಂದ ಸಾಕಷ್ಟು ಖಾದ್ಯಗಳನ್ನೂ ತಯಾರಿಸುತ್ತಾರೆ, ರುಚಿ ಹೆಚ್ಚಿಸಲು ಅಡುಗೆಯಲ್ಲೂ ಬಳಸುತ್ತಾರೆ. ಈ ಒಣ ಬೀಜ ಸಖತ್‌ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹೌದು ನೋಡಲು ಕಿಡ್ನಿಯಾಕಾರದಂತೆ ಕಾಣುವ ಗೋಡಂಬಿ ಪೌಷ್ಟಿಕಾಂಶಗಳಿಂದ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯ, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾನೇ ಸಹಕಾರಿಯಾಗಿದೆ. ಗೋಡಂಬಿಯ ಈ ಆರೋಗ್ಯ ಪ್ರಯೋಜನ ಹಾಗೂ ಅದರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿವರ್ಷ ನವೆಂಬರ್‌ 233 ರಂದು ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ರಾಷ್ಟ್ರೀಯ ಗೋಡಂಬಿ ದಿನದ ಇತಿಹಾಸವೇನು?

ಪ್ರತಿ ವರ್ಷ ನವೆಂಬರ್ 23 ರಂದು ಪ್ರಪಂಚದಾದ್ಯಂತ ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ಸಂದರ್ಭವಾಗಿ ಆಚರಿಸುವ ಸಂಪ್ರದಾಯವು ಯುನೈಟೆಡ್ ಸ್ಟೇಟ್ಸ್‌ನಲ್ಲಿ (ಅಮೆರಿಕ) ಹುಟ್ಟಿಕೊಂಡಿತು. ಮೊದಲ ಬಾರಿಗೆ 2015 ರಲ್ಲಿ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್‌ 23 ರಂದು ವಿಶ್ವದಾದ್ಯಂತ ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಗೋಡಂಬಿಯ ಇತಿಹಾಸವೇನು ಗೊತ್ತಾ?

ಇಂದು, ಬ್ರೆಜಿಲ್, ವಿಯೆಟ್ನಾಂ, ಭಾರತ ಮತ್ತು ಹಲವಾರು ಆಫ್ರಿಕನ್ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ  ಗೋಡಂಬಿಯ ಮೂಲ ಬ್ರೆಜಿಲ್.‌ ನಂತರ ಪೋರ್ಚುಗೀಸ್ ಪರಿಶೋಧಕರು ಈ ಬೆಳೆಯನ್ನು ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಿಗೆ ಹರಡಿದರು. 1558 ರಲ್ಲಿ ಯುರೋಪಿಯನ್ನರು ಮೊದಲ ಬಾರಿಗೆ ಬ್ರೆಜಿಲ್‌ನಲ್ಲಿ ಗೋಡಂಬಿಯನ್ನು ಕಂಡುಕೊಂಡಾಗ, ಅವುಗಳ ಹೊರ ಚಿಪ್ಪುಗಳು ಅನಾಕಾರ್ಡಿಕ್ ಆಮ್ಲವನ್ನು ಹೊಂದಿರುವುದರಿಂದ ಅವುಗಳನ್ನು ತಿನ್ನಲಾಗದು ಎಂದು ಪರಿಗಣಿಸಿದರು, ಅಂತಿಮವಾಗಿ ಸ್ಥಳೀಯ ಟುಪಿ ಬುಡಕಟ್ಟು ಜನಾಂಗದ ಮುಖಾಂತರ ಗೋಡಂಬಿ ಬೀಜಗಳನ್ನು ಹುರಿಯುವುದರಿಂದ ಅವು ತಿನ್ನಲು ಅತ್ಯಂತ ರುಚಿಕರವಾಗಿರುತ್ತವೆ ಎಂಬುದನ್ನು ಕಲಿತರು.

ನಂತರ 1560 ರಲ್ಲಿ ಪೋರ್ಚುಗೀಸ್ ಮಿಷನರಿಗಳು ಭಾರತದ ಗೋವಾಕ್ಕೆ ಗೋಡಂಬಿಯನ್ನು ತಂದಾಗಿನಿಂದ, ಗೋಡಂಬಿ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ವೇಗವಾಗಿ ಜನಪ್ರಿಯತೆಯನ್ನು ಗಳಿಸಿತು.. 1905 ರಲ್ಲಿ ಗೋಡಂಬಿ ಅಮೆರಿಕಕ್ಕೇ ಪ್ರವೇಶ ಪಡೆದಾಗಿನಿಂದ ಅದರ ಜಾಗತಿಕ ಬೇಡಿಕೆ ಮತ್ತಷ್ಟು ಹೆಚ್ಚಿತು.  ಇಂದು, ಗೋಡಂಬಿ ಅನೇಕ ಸಾಂಪ್ರದಾಯಿಕ ಭಕ್ಷ್ಯಗಳ ಅವಿಭಾಜ್ಯ ಅಂಗವಾಗಿದ್ದು, ರಾಷ್ಟ್ರೀಯ ಗೋಡಂಬಿ ದಿನವು ಈ ಪಾಕಶಾಲೆಯ ಪರಂಪರೆಯನ್ನು ನೆನಪಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?

ರಾಷ್ಟ್ರೀಯ ಗೋಡಂಬಿ ದಿನದ ಮಹತ್ವವೇನು?

  • ರಾಷ್ಟ್ರೀಯ ಗೋಡಂಬಿ ದಿನವನ್ನು ಆಚರಿಸುವ ಹಿಂದಿನ ಗುರಿ ಜನರು ಈ ಆರೋಗ್ಯಕರ ಒಣ ಬೀಜವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.
  • ಗೋಡಂಬಿಯು ವಿವಿಧ ಖಾದ್ಯಗಳಿಗೆ ವಿಶಿಷ್ಟವಾದ ಸುವಾಸನೆ ಮತ್ತು ವಿನ್ಯಾಸವನ್ನು ನೀಡುವ ಮೂಲಕ ಪಾಕಶಾಲೆಯ ಸಂಪ್ರದಾಯಗಳಿಗೆ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ. ಈ ಶ್ರೀಮಂತ ಪರಂಪರೆಯನ್ನು ಆನಂದಿಸಲು ಮತ್ತು ಅಡುಗೆಯಲ್ಲಿ ಗೋಡಂಬಿ ವಹಿಸುವ ಪಾತ್ರವನ್ನು ಗೌರವಿಸಲು ರಾಷ್ಟ್ರೀಯ ಗೋಡಂಬಿ ದಿನವು ಒಂದು ಜ್ಞಾಪನೆಯಾಗಿದೆ.
  • ಈ ವಿಶೇಷ ದಿನದಂದು ಗೇರು ಕೃಷಿಯನ್ನು ಉತ್ತೇಜಿಸಲು ಕಾರ್ಯಗಾರಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ