AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Television Day 2025: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?

ಶಿಕ್ಷಣ, ಮನರಂಜನೆ, ರಾಜಕೀಯ ಚಟುವಟಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ ಸಮೂಹ ಸಂವಹನದ ಪ್ರಬಲ ಮಾಧ್ಯಮವಾಗಿ ಬೆಳೆದು ನಿಂತಿರುವ ದೂರದರ್ಶನ, ಇಂಟರ್‌ನೆಟ್‌, ಸ್ಮಾರ್ಟ್‌ಫೋನ್‌ಗಳ ಈ ಡಿಜಿಟಲ್‌ ಯುಗದಲ್ಲೂ ತನ್ನ ಗತ್ತನ್ನು ಹಾಗೆಯೇ ಉಳಿಸಿಕೊಂಡಿದೆ. ಹೀಗೆ ದೂರದರ್ಶನವು ಸಮಾಜ ಮತ್ತು ವ್ಯಕ್ತಿಗಳ ಮೇಲೆ ಬೀರುವ ಪ್ರಣಾವದ ಬಗ್ಗೆ ತಿಳಿಸಲು ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.

World Television Day 2025: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?
ವಿಶ್ವ ದೂರದರ್ಶನ ದಿನImage Credit source: Google
ಮಾಲಾಶ್ರೀ ಅಂಚನ್​
|

Updated on: Nov 21, 2025 | 9:27 AM

Share

ಕ್ರೀಡೆ, ಮನರಂಜನೆ, ರಾಜಕೀಯ ವಿಷಯಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಒದಗಿಸುವ ಸಮೂಹ ಸಂವಹನದ ಮಾಧ್ಯಮವಾಗಿರುವ ಟಿವಿ (Television) ನಮ್ಮೆಲ್ಲರ ಬದುಕಿನ ಭಾಗವಾಗಿ ಹೋಗಿದೆ. ಕಪ್ಪು ಬಿಳುಪಿನ ಪರದೆಯಿಂದ ಆರಂಭವಾದ ಈ ಪಯಣ ಇಂದು ಸ್ಮಾರ್ಟ್‌ ಟಿವಿ ಹಂತಕ್ಕೆ ಬಂದು ತಲುಪಿದೆ. ದೂರದರ್ಶನ ಕೇವಲ ಮನರಂಜನೆಯ ಸಾಧನ ಮಾತ್ರವಲ್ಲ, ಅದರ ಮೂಲಕ ನಾವು ಜಗತ್ತಿನ ಮೂಲೆ ಮೂಲೆಗಳನ್ನು ನಡೆಯುವ ಪ್ರಚಲಿತ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಈ ಮೂಲಕ ದೂರದರ್ಶನವು ಜಗತ್ತನ್ನು ಒಟ್ಟಿಗೆ ಸಂಪರ್ಕಿಸಿದೆ. ಇಂದಿನ ಈ ಡಿಜಿಟಲ್‌ ಜಮಾನದಲ್ಲೂ ಟಿವಿಯ ಮಹತ್ವ ಕಡಿಮೆಯಾಗಿಲ್ಲ. ಈ ಮಹತ್ವದ ಬಗ್ಗೆ ತಿಳಿಸಲು, ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮುಖ್ಯ ಪಾತ್ರದ ಬಗ್ಗೆ ತಿಳಿಸಲು ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ದೂರದರ್ಶನ ದಿನದ ಇತಿಹಾಸವೇನು?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 17, 1996 ರಂದು ವಿಶ್ವ ದೂರದರ್ಶನ ದಿನವನ್ನು ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿತು. ಇದಕ್ಕೂ ಮೊದಲು, ವಿಶ್ವಸಂಸ್ಥೆಯು ನವೆಂಬರ್ 21 ಮತ್ತು 22, 1996 ರಂದು ವಿಶ್ವ ದೂರದರ್ಶನ  ( ಟೆಲಿವಿಷನ್ ಫೋರಂ) ವೇದಿಕೆಯನ್ನು ಸ್ಥಾಪಿಸಿತು. ಪರಿಣಾಮವಾಗಿ, ಇದರಿಂದ ದೂರದರ್ಶನದ  ಮಹತ್ವವನ್ನು ಚರ್ಚಿಸಲು ಮಾಧ್ಯಮಗಳಿಗೆ ವೇದಿಕೆ ಸಿಕ್ಕಿತು. ಅಲ್ಲದೆ ಇಲ್ಲಿ ಜಗತ್ತನ್ನು ಬದಲಾಯಿಸಲು ಟೆಲಿವಿಷನ್ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಚರ್ಚೆ ಕೂಡಾ ನಡೆಯಿತು.  ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ  ದೂರದರ್ಶನದ ಮಹತ್ವದ ಬಗ್ಗೆ ಹಾಗೂ ಸಂವಹನ ಮತ್ತು ಜಾಗತೀಕರಣದಲ್ಲಿ ದೂರದರ್ಶನವು ವಹಿಸಿದ ಮಹತ್ತರ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21 ರಂದು ವಿಶ್ವ ದೂದರ್ಶನ ದಿನವನ್ನು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ದೂರದರ್ಶನ ದಿನದ ಮಹತ್ವವೇನು?

  • ವಿಶ್ವ ದೂರದರ್ಶನ ದಿನವನ್ನು ಆಚರಿಸುವ ಉದ್ದೇಶವೆಂದರೆ ದೂರದರ್ಶನವು ಕೇವಲ ಮನರಂಜನೆಯಲ್ಲ, ಜಾಗತಿಕ ಸಂವಹನಕ್ಕೆ ಪರಿಣಾಮಕಾರಿ ಮಾಧ್ಯಮವಾಗಿದೆ ಎಂಬುದನ್ನು ಎತ್ತಿ ತೋರಿಸುವುದು.
  • ಜಗತ್ತಿನಲ್ಲಿ ದೂರದರ್ಶನದ ಸಕಾರಾತ್ಮಕ ಪಾತ್ರವನ್ನು ಗುರುತಿಸುವುದು ಮತ್ತು ಮಾಧ್ಯಮದ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಭವಿಷ್ಯವನ್ನು ರೂಪಿಸುವುದು ನಮ್ಮೆಲ್ಲರ ಹೊಣೆ

ದೂದರ್ಶನದ ಪಾತ್ರ:

  • ಇದು ಪ್ರಪಂಚದ ಮೂಲೆ ಮೂಲೆಗೂ ಸಮಾನ ಮಾಹಿತಿಯನ್ನು ಒದಗಿಸುವ ಮೂಲಕ ಸಾಮಾಜಿಕ ಜಾಗೃತಿಯನ್ನು ಉತ್ತೇಜಿಸುತ್ತದೆ. ಶಿಕ್ಷಣ, ಆರೋಗ್ಯ, ಹವಾಮಾನ, ಪರಿಸರ, ವಿಪತ್ತು ನಿರ್ವಹಣೆ ಮತ್ತು ಮಾನವ ಹಕ್ಕುಗಳಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಟಿವಿ ಪ್ರಮುಖ ಪಾತ್ರ ವಹಿಸುತ್ತಿದೆ.
  • ಬಡತನ, ಸಂಘರ್ಷ, ಹವಾಮಾನ ಬದಲಾವಣೆ ಮತ್ತು ಮಾನವೀಯ ಬಿಕ್ಕಟ್ಟುಗಳಂತಹ ಹೆಚ್ಚಾಗಿ ಕಡೆಗಣಿಸಲ್ಪಡುವ ಸಮಸ್ಯೆಗಳನ್ನು ಟಿವಿ ಎತ್ತಿ ತೋರಿಸುತ್ತದೆ. ಇದು ಜನರಿಗೆ ಮಾಹಿತಿ ನೀಡುವುದಲ್ಲದೆ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮಾಜದಲ್ಲಿ ಸಕ್ರಿಯ ಪಾತ್ರ ವಹಿಸಲು ಅವರನ್ನು ಪ್ರೇರೇಪಿಸುತ್ತದೆ.
  • ಇದು ವಿಪತ್ತುಗಳು, ಯುದ್ಧಗಳು, ಬಿಕ್ಕಟ್ಟುಗಳು ಮತ್ತು ಮಾನವೀಯ ಸಮಸ್ಯೆಗಳ ಬಗ್ಗೆ ತ್ವರಿತ ಮಾಹಿತಿಯನ್ನು ಒದಗಿಸುತ್ತದೆ.
  • ಶಿಕ್ಷಣ, ಜಾಗೃತಿ ಮತ್ತು ಸಾಮಾಜಿಕ ಅಭಿವೃದ್ಧಿಗೆ ಟಿವಿಯ ಕೊಡುಗೆ ಮಹತ್ತರವಾದದ್ದು.
  • ಇದು ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸುತ್ತದೆ ಮತ್ತು ಚರ್ಚೆ, ಸಂವಾದ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುತ್ತದೆ.
  • ಟಿವಿ ಸಾಂಸ್ಕೃತಿಕ ವೈವಿಧ್ಯತೆ, ಕಲೆ ಮತ್ತು ಮನರಂಜನೆಯನ್ನು ಪ್ರಸಾರ ಮಾಡುವುದರ ಜೊತೆಗೆ ಕಲೆಯನ್ನು ಸಂರಕ್ಷಿಸುವಂತಹ ಕೆಲಸವನ್ನು ಮಾಡುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ