AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರ್ಚು ಕಮ್ಮಿ ಮಾಡಿ, ಉಳಿತಾಯ ಹೆಚ್ಚು ಮಾಡಲು ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು

ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಬಹಳ ಮುಖ್ಯವಾಗಿದೆ. ಆದ್ರೆ ಅನೇಕರು ಕೈಗೆ ದುಡ್ಡು ಬಂದ ತಕ್ಷಣ ಏನೇನಕ್ಕೋ ಖರ್ಚು ಮಾಡಿ ಹಣವನ್ನು ಸುಖಾಸುಮ್ಮನೆ ವ್ಯರ್ಥ ಮಾಡಿಬಿಡುತ್ತಾರೆ. ಇದು ಮುಂದೊಂದು ದಿನ ಆರ್ಥಿಕ ಸಂಕಷ್ಟ ಎದುರಾಗಲು ಕಾರಣವಾಗಬಹುದು. ಆದ್ದರಿಂದ ಹಣವನ್ನು ಯೋಚಿಸಿ ವ್ಯಯಿಸಬೇಕು, ಸರಿಯಾಗಿ ನಿರ್ವಹಿಸಬೇಕು. ಹಾಗಿದ್ರೆ ಹಣ ವ್ಯರ್ಥ ಮಾಡೋದನ್ನು ತಪ್ಪಿಸಲು ಏನು ಮಾಡಿದರೆ ಸೂಕ್ತ ಎನ್ನುವುದನ್ನು ಮೊದಲು ತಿಳಿಯಿರಿ.

ಖರ್ಚು ಕಮ್ಮಿ ಮಾಡಿ, ಉಳಿತಾಯ ಹೆಚ್ಚು ಮಾಡಲು ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Nov 20, 2025 | 4:20 PM

Share

ಹಣ (money) ಯಾರಿಗೂ ಸುಲಭವಾಗಿ ಬರುವುದಿಲ್ಲ. ಕಷ್ಟಪಟ್ಟು ದುಡಿದರೆ ಮಾತ್ರ ಕೈತುಂಬಾ ಹಣ ಸಿಗುತ್ತದೆ. ಈ ದುಡ್ಡನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಕೆಲವೊಂದು ತಪ್ಪುಗಳಿಂದ ದುಡಿದ ಹಣ ಸುಖಾಸುಮ್ಮನೆ ವ್ಯರ್ಥವಾಗುತ್ತದೆ. ಅದರಲ್ಲೂ ಕೆಲವರು ಪ್ರದರ್ಶನಕ್ಕಾಗಿ ಬ್ರ್ಯಾಂಡೆಡ್‌ ವಸ್ತುಗಳನ್ನು ಖರೀದಿಸಲು ಹಣ ವ್ಯಯಿಸುತ್ತಾರೆ. ಹೀಗೆ ಅನಗತ್ಯವಾಗಿ, ಅಜಾಗರೂಕತೆಯಿಂದ ಖರ್ಚು ಮಾಡುವ ಅಭ್ಯಾಸ ಭವಿಷ್ಯದಲ್ಲಿ ಖಂಡಿತವಾಗಿಯೂ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು. ಆದ್ದರಿಂದ ಹಣವನ್ನು ಯೋಚಿಸಿ ವ್ಯಯಿಸಬೇಕು, ಸರಿಯಾಗಿ ನಿರ್ವಹಿಸಬೇಕು. ಇದಕ್ಕಾಗಿ ಈ ಕೆಲವೊಂದು ಸಲಹೆಗಳನ್ನು ಅನುಸರಿಸಿ.

ಹಣ ವ್ಯರ್ಥವಾಗುವುದನ್ನು ತಪ್ಪಿಸಲು ನೀವು ಅನುಸರಿಸಬೇಕಾದ  ಸಲಹೆಗಳು:

ಅಗತ್ಯ ಮತ್ತು ಬಯಕೆಯ ನಡುವಿನ ವ್ಯತ್ಯಾಸವನ್ನು ತಿಳಿಯಿರಿ:

ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ, ನಿಮ್ಮ ಬಯಕೆಗಳಿಗೆ ಹೆಚ್ಚು ವ್ಯಯ ಮಾಡಬೇಡಿ. ಉದಾಹರಣೆಗೆ, ಹಳೆ ಫೋನ್‌ ಹಾಳಾಗಿರುವ ಕಾರಣಕ್ಕೆ ಹೊಸ  ಮೊಬೈಲ್ ಫೋನ್ ಬೇಕು ಮತ್ತು ಮೊಬೈಲ್‌ ಇದ್ರೂ ಸಹ ಹೊಸ ಆವೃತ್ತಿಯ ಮೊಬೈಲ್‌ ಖರೀದಿಸಬೇಕು ಇವೆರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದರಿಂದ  ಬಹಳಷ್ಟು ಹಣ ಉಳಿಸಬಹುದು. ಹಾಗಾಗಿ ಏನನ್ನಾದರೂ ಖರೀದಿಸುವ ಮೊದಲು ಎರಡು ಬಾರಿ ಯೋಚಿಸಿ. ಅಗತ್ಯ ವಸ್ತುಗಳಿಗೆ ಮಾತ್ರ ಹಣ ಖರ್ಚು ಮಾಡಿ. ಈ ರೀತಿ ಮಾಡುವುದರಿಂದ ಹಣ ವ್ಯರ್ಥವಾಗುವುದನ್ನು ತಪ್ಪಿಸಬಹುದು.

ಬಜೆಟ್ ರೂಪಿಸಿ:

ನಿಮ್ಮ ಮಾಸಿಕ ಆದಾಯ ಮತ್ತು ಖರ್ಚುಗಳನ್ನು ಬರೆದು ವರ್ಗೀಕರಿಸುವುದು ಸಣ್ಣ ಕೆಲಸ ಆದರೆ ಇದು ದೊಡ್ಡ ಫಲಿತಾಂಶವನ್ನು ನೀಡುತ್ತದೆ. ಒಂದು ಬಜೆಟ್‌ ರೂಪಿಸಿ ಪ್ರತಿ ವಾರ ಅಥವಾ ಹಿಂದಿನ ತಿಂಗಳು ನಿಮ್ಮ ಖರ್ಚುಗಳು ಎಲ್ಲಿ ಹೆಚ್ಚಿವೆ ಎಂಬುದನ್ನು ನೋಡಿ ಮತ್ತು ಮುಂದಿನ ತಿಂಗಳು ಅವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಅನಗತ್ಯ ವಸ್ತುಗಳನ್ನು ಖರೀದಿಸುವುದನ್ನೂ ತಪ್ಪಿಸಬಹುದು ಜೊತೆಗೆ ಅನಗತ್ಯ ಖರ್ಚುಗಳೂ ಕಡಿಮೆಯಾಗುತ್ತದೆ.

ಆತುರದಿಂದ ಶಾಪಿಂಗ್ ಮಾಡಬೇಡಿ:

ದಿನಸಿ ಅಥವಾ ಇನ್ಯಾವುದೇ ಶಾಪಿಂಗ್‌ ಹೋದಾಗ ಹೆಚ್ಚಿನವರು ಟೈಮ್‌ ವೇಸ್ಟ್‌ ಆಗುತ್ತೆ ಅಂತ ಆತುರದಿಂದ ಶಾಪಿಂಗ್‌ ಮಾಡುತ್ತಾರೆ. ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಖರೀದಿಸುತ್ತಾರೆ. ಆದರೆ ಯಾವತ್ತಿಗೂ ಹೀಗೆ ಮಾಡಬೇಡಿ, ಅಗತ್ಯವಾಗಿ ಬೇಕಾಗಿರುವ ವಸ್ತುಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ, ಜೊತೆಗೆ ಆ ವಸ್ತುಗಳಿಗೆ ಎಷ್ಟು ಖರ್ಚಾಗಬಹುದೆಂದು ಅಂದಾಜು ಮಾಡಿ, ಅಷ್ಟೇ ಹಣವನ್ನು ಕೊಂಡುಹೋಗಿ. ಡಿಜಿಟಲ್ ಪಾವತಿಗಳನ್ನು ತಪ್ಪಿಸಿ.  ನಾವು ನಗದು ಹಣ ನೀಡಿದಾಗ, ಎಷ್ಟು ಹಣ ಖರ್ಚು ಮಾಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಇದು ವ್ಯರ್ಥ ಮಾಡುವುದಕ್ಕೆ ಕಡಿವಾಣ ಹಾಕಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ:

ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಉಳಿತಾಯ. ನೀವು ಪ್ರತಿ ತಿಂಗಳು ನಿಮ್ಮ ಆದಾಯದಲ್ಲಿ ಕನಿಷ್ಠ 10 ರಿಂದ 20 ಶೇಕಡಾದಷ್ಟು ಹಣ ಉಳಿತಾಯ ಮಾಡಬೇಕು. ಇಲ್ಲವೆ ಅದನ್ನು ಉಳಿಸಬೇಕು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಈ ಅಭ್ಯಾಸವು ಭವಿಷ್ಯದಲ್ಲಿ ಖಂಡಿತವಾಗಿಯೂ ನಿಮ್ಮ ಸಹಾಯ ಬರುತ್ತದೆ.

ಇದನ್ನೂ ಓದಿ: ನಾಲ್ಕು ಕೆಲಸಗಳನ್ನು ಮಾಡುವ ಜನರಿಗೆ ಎಂದಿಗೂ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲವಂತೆ

ಕ್ರೆಡಿಟ್ ಕಾರ್ಡ್‌ಗಳನ್ನು ಎಚ್ಚರಿಕೆಯಿಂದ ಬಳಸಿ:

ಈಗಂತೂ ಅನೇಕ ಜನರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ. ಆದರೆ ಅದನ್ನು ನಿಯಂತ್ರಣವಿಲ್ಲದೆ ಬೇಕಾಬಿಟ್ಟಿ ಬಳಸಿದರೆ ಸಾಲಕ್ಕೆ ಸಿಲುಕುವ ಅಪಾಯವಿರುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಇದು ಹಣ ವ್ಯರ್ಥವಾಗುವುದನ್ನು ತಡೆಯಬಹುದು. ಇಲ್ಲದಿದ್ದರೆ ಬಡ್ಡಿ ಮತ್ತು ಶುಲ್ಕಗಳ ಪಾವತಿಯಲ್ಲಿನ ವಿಳಂಬವು ಸುಖಾಸುಮ್ಮನೆ ಹಣ ವ್ಯರ್ಥವಾಗಲು ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!