AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ತಿನ್ನುವ ಸ್ಟೈಲ್‌ನಿಂದ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿಯಬಹುದು

ಮಾತಾಡುವ ಶೈಲಿ, ನಡೆಯುವ ರೀತಿ, ವ್ಯಕ್ತಿತ್ವಗಳಲ್ಲಿ ಭಿನ್ನತೆಗಳು ಇರುವಂತೆ ಊಟ ಮಾಡುವ ಶೈಲಿಯಲ್ಲೂ ಸಹ ಸಾಕಷ್ಟು ಭಿನ್ನತೆಗಳಿರುತ್ತವೆ. ಹೌದು ಕೆಲವರು ಗಬಗಬನೇ ಫಾಸ್ಟ್‌ ಆಗಿ ಊಟ ತಿಂದು ಮುಗಿಸಿದ್ರೆ, ಇನ್ನೂ ಕೆಲವರು ಸ್ಲೋ ಆಗಿ ಊಟ ಮಾಡ್ತಾರೆ, ಇನ್ನೊಂದಿಷ್ಟು ಜನ ತಾವು ತಿನ್ನುವಂತಹ ಪ್ರತಿಯೊಂದು ತುತ್ತನ್ನು ಸಹ ಎಂಜಾಯ್‌ ಮಾಡಿಕೊಂಡು ತಿನ್ನುತ್ತಾರೆ. ಇದರಲ್ಲಿ ನೀವು ಊಟ ಮಾಡುವ ಸ್ಟೈಲ್‌ ಯಾವುದು? ಇದರ ಮೂಲಕವೂ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಕ್ಷಣಮಾತ್ರದಲ್ಲಿ ತಿಳಿಯಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Personality Test: ನೀವು ತಿನ್ನುವ ಸ್ಟೈಲ್‌ನಿಂದ  ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿಯಬಹುದು
ವ್ಯಕ್ತಿತ್ವ ಪರೀಕ್ಷೆImage Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 22, 2025 | 4:22 PM

Share

ದೇಹಕಾರ ಆಗಿರ್ಬೇದು, ಮಾತನಾಡುವ ಶೈಲಿ, ನಡೆಯುವ ರೀತಿ, ಆಹಾರ ಪದ್ಧತಿ, ಹವ್ಯಾಸಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತವೆ. ಇದರ ಮೂಲಕ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಲ್ವಾ. ಈ ಅಂಶಗಳಿಗೆ ಸಂಬಂಧಿಸಿದ ಪರ್ಸನಾಲಿಟಿ ಟೆಸ್ಟ್‌ಗಳು (Personality Test) ಹರಿದಾಡುತ್ತಲೇ ಇರುತ್ತವೆ. ಇದು ಮಾತ್ರವಲ್ಲ ಒಬ್ಬ ವ್ಯಕ್ತಿ ಹೇಗೆ ಊಟ ಮಾಡ್ತಾನೆ ಅನ್ನೋದರ ಮೇಲೂ ಆತನ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಊಟ ಮಾಡುವ ಶೈಲಿಯಲ್ಲೂ ಸಾಕಷ್ಟು ಭಿನ್ನತೆಗಳಿರುತ್ತವೆ. ಕೆಲವರು ಫಾಸ್ಟ್‌ ಆಗಿ ತಿಂದು ಮುಗಿಸಿದ್ರೆ, ಇನ್ನೂ ಕೆಲವರು ಸ್ಲೋ ಆಗಿ ಊಟ ಮಾಡ್ತಾರೆ. ಊಟ ಮಾಡುವ ಶೈಲಿಯೂ ವ್ಯಕ್ತಿಯ ಗುಣ ಸ್ವಭಾವದ ಬಗ್ಗೆ ತಿಳಿಸುತ್ತಂತೆ. ಇಂದಿನ ಈ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಊಟ ಮಾಡುವ ಸ್ಟೈಲ್‌ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿದುಕೊಳ್ಳಿ.

ಊಟ ಮಾಡುವ ಸ್ಟೈಲ್‌ನಿಂದಲೂ ತಿಳಿಯಬಹುದು ವ್ಯಕ್ತಿತ್ವದ ರಹಸ್ಯ:

ನಿಧಾನವಾಗಿ ತಿನ್ನುವವರು: ಊಟವನ್ನು ನಿಧಾನವಾಗಿ ತಿನ್ನುವ ಜನರಿಗೆ ತಾಳ್ಮೆಯೂ ಹೆಚ್ಚಿರುತ್ತಂತೆ. ಇವರು ಎಂದಿಗೂ ಯಾವ ವಿಷಯದಲ್ಲೂ ಆತುರ ಪಡುವುದಿಲ್ಲ. ಇವರು ತಮ್ಮ ಎಲ್ಲಾ ಗಮನ ಮತ್ತು ಶಕ್ತಿಯನ್ನು ತಿನ್ನುವುದರ ಮೇಲೆ ಕೇಂದ್ರೀಕರಿಸುವಂತೆ ತಮ್ಮ ಕೆಲಸ ಹಾಗೂ ವೈಯಕ್ತಿಕ ಜೀವನದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ.

ಫಾಸ್ಟ್ ಆಗಿ ತಿನ್ನುವವರು: ಕೆಲವರು ತುಂಬಾನೇ ಫಾಸ್ಟ್‌ ಆಗಿ ಊಟ ಮಾಡ್ತಾರೆ. ಈ  ರೀತಿಯ ಜನರಿಗೆ ಆತುರ ತುಂಬಾನೇ ಜಾಸ್ತಿ. ಅಲ್ಲದೆ ಇವರು ಬಹುಕಾರ್ಯಗಳಲ್ಲಿ ಪರಿಣಿತರು. ಇವರು ಯಾವಾಗಲೂ ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಅಥವಾ ಕೆಲವೊಮ್ಮೆ ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸುತ್ತಾರೆ.

ಸೂಕ್ಷ್ಮವಾಗಿ ತಿನ್ನುವವರು: ಊಟ ಮಾಡುವಾಗ,  ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಅಂದ್ರೆ ತಟ್ಟೆಯಲ್ಲಿರುವ ಭಕ್ಷ್ಯಗಳು ಹೇಗೆ ಕಾಣುತ್ತವೆ, ಅದರ ವಾಸನೆ ಏನು, ಬಣ್ಣ ಏನು ಎಲ್ಲದರ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲಿಸುವ ಜನರು ತಮ್ಮ ಸುತ್ತಲಿನವರನ್ನು ನಿಯಂತ್ರಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರು ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಭಾವನಾತ್ಮಕವಾಗಿ ಸೂಕ್ಷ್ಮರಾಗಿರುವ ಇವರು ಸ್ನೇಹಪರರು ಹೌದು.

ತಿನ್ನುವುದರಲ್ಲಿ ಕುತೂಹಲ: ತಾವು ಎಂದಿಗೂ ಸೇವಿಸದ ಹೊಸ ಆಹಾರಗಳನ್ನು ಪ್ರಯತ್ನಿಸಲು ಯಾವಾಗಲೂ ಕುತೂಹಲವಿರುವವರು, ಹೊಸ ರುಚಿ ಹಾಗೂ ವಿಲಕ್ಷಣ ಫುಡ್‌ಗಳನ್ನು ಸವಿಯಲು ಬಯಸುವವರು ತಿನ್ನುವುದನ್ನು ಒಂದು ಮೋಜಿನ ಚಟುವಟಿಕೆಯಂತೆ ನೋಡುತ್ತಾರೆ. ಇವರ ವ್ಯಕ್ತಿತ್‌ ಹೇಗಿದೆ ಎಂಬುದನ್ನು ನೋಡುವುದಾದರೆ ಇವರು ಸಾಹಸಮಯ ಸ್ವಭಾವದವರು ಹಾಗೂ ಹೃದಯವಂತರು. ಇವರು ತಮ್ಮ ಜೀವನವನ್ನು ಪರಿಪೂರ್ಣವಾಗಿ ಬದುಕಲು ಇಷ್ಟಪಡುತ್ತಾರೆ.

ಇದನ್ನೂ ಓದಿ: ಚಿತ್ರದಲ್ಲಿ ನೀವು ಮೊದಲು ನೋಡುವ ಬಣ್ಣ ನಿಮ್ಮ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತೆ

ಜೋರಾಗಿ ಅಗಿಯುತ್ತಾ ತಿನ್ನುವವರು: ಕೆಲವು ಜನರು ಆಹಾರವನ್ನು ಜೋರಾಗಿ ಅಗಿಯುತ್ತಾ ತಿನ್ನುತ್ತಾರೆ. ಈ ಸೌಂಡ್‌ ಅನೇಕರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಆದರೆ ಇದ್ಯಾವುದರ ಬಗ್ಗೆಯೂ ಇವರು ಕೇರ್‌ ಮಾಡುವುದಿಲ್ಲ. ಇಂತಹ ಜನರು ತುಂಬಾನೇ ಮಾತನಾಡುವವರಾಗಿರುತ್ತಾರೆ.  ಬಹಿರ್ಮುಖಿಗಳಾದ ಇವರು ತುಂಬಾ ಸ್ನೇಹಪರರು ಮತ್ತು ಇವರು ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಸ್ವಲ್ಪವೂ ಕೇರ್‌ ಮಾಡುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ