AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಭಯವೇನು ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ

ವ್ಯಕ್ತಿತ್ವ ಪರೀಕ್ಷೆಯ ಆಟಗಳು ತಕ್ಕ ಮಟ್ಟಿಗೆ ನಮ್ಮ ನಿಗೂಢ ಗುಣ ಸ್ವಭಾವ, ವ್ಯಕ್ತಿತ್ವ, ಭಾವನೆಗಳು ಹೇಗಿವೆ ಎಂಬುದನ್ನು ತಿಳಿಸುತ್ತವೆ. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅದೇ ರೀತಿಯ ಚಿತ್ರ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಗೋಚರಿಸುವ ಅಂಶ ಯಾವುವು ಎಂಬುದರ ಮೇಲೆ ನೀವು ಯಾವುದಕ್ಕೆ ಹೆಚ್ಚು ಭಯಪಡುತ್ತೀರಿ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ಭಯವೇನು ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on:Nov 23, 2025 | 5:12 PM

Share

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ಕೆಲಸ ನೀಡುವಂತಹ ಒಗಟಿನ ಆಟ ಮಾತ್ರವಲ್ಲದೆ ನಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿಸುವ ಮೋಜಿನ ವ್ಯಕ್ತಿತ್ವ ಪರೀಕ್ಷೆಯೂ (Personality Test) ಹೌದು. ಮನೋವಿಜ್ಞಾನದ ಆಧಾರಿತವಾಗಿರುವ ಈ ಚಿತ್ರಗಳಲ್ಲಿ ಮೊದಲಿಗೆ ನಿಮ್ಮ ಕಣ್ಣಿಗೆ ಗೋಚರಿಸುವ ಅಂಶ ಯಾವುದು ಅನ್ನೋದರ ಮೇಲೆ ನೀವು ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಪಟ್ಟ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳಬಹುದು. ಹೌದು ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಕೋಪಿಷ್ಟರೇ, ಶಾಂತ ಸ್ವಭಾವದವರೇ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಬಹುದು. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಏನು ಕಾಣಿಸಿತು ಎಂಬುದರ ಮೇಲೆ ನೀವು ಯಾವುದಕ್ಕೆ ಹೆಚ್ಚು ಭಯಪಡುವವರು ಎಂಬುದನ್ನು ಪರೀಕ್ಷಿಸಿ.

ನಿಮ್ಮ ಭಯವೇನು ಎಂಬುದನ್ನು ತಿಳಿಸುವ ಚಿತ್ರವಿದು:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊಲ ಹಾಗೂ ಹದ್ದು ಇದ್ದು, ಇದರಲ್ಲಿ ಮೊದಲು ನಿಮ್ಮ ಕಣ್ಣಿಗೆ ಕಾಣಿಸಿದ ಅಂಶ ಯಾವುವು ಎಂಬುದರ ಆಧಾರದ ಮೇಲೆ ನೀವು ಯಾವುದಕ್ಕೆ ಹೆಚ್ಚು ಭಯಪಡುವವರು ಎಂಬುದನ್ನು ಟೆಸ್ಟ್‌ ಮಾಡಿ.

ಮೊದಲು ಮೊಲವನ್ನು ನೋಡಿದರೆ:

Rabbit

ನೀವು ಈ ಚಿತ್ರದಲ್ಲಿ ಮೊದಲು ಮೊಲವನ್ನು ನೋಡಿದರೆ, ನಿಮ್ಮ ಸೌಕರ್ಯ ವಲಯದಿಂದ ಹೊರಗೆ ಹೆಜ್ಜೆ ಹಾಕುವುದು ನಿಮಗೆ ಸವಾಲಿನ ಸಂಗತಿಯಾಗಬಹುದು. ಇದುವೆ ನಿಮ್ಮ ಭಯ. ನೀವು ತೃಪ್ತಿಕರ ಜೀವನದ ಆಕಾಂಕ್ಷೆಗಳನ್ನು ಹೊಂದಿರುವ ನೀವು ಅವಕಾಶಗಳನ್ನು ಕಳೆದುಕೊಳ್ಳುವ ಬಗ್ಗೆ ಯಾವಾಗಲೂ ಚಿಂತಿಸುತ್ತಿರುತ್ತೀರಿ. ಆದರೆ ಮುನ್ನುಗ್ಗಲು ಅಪಾಯಗಳನ್ನು ತೆಗೆದುಕೊಳ್ಳಲು ನೀವು ಭಯಪಡುತ್ತೀರಿ. ಮೊದಲು ಈ ನಿಮ್ಮ ಆಂತರಿಕ ಭಯವನ್ನು ಹೋಗಲಾಡಿಸಿದಾಗ ಮಾತ್ರ ಬದಲಾವಣೆಗಳನ್ನು ಸ್ವೀಕರಿಸಲು, ವಿಶ್ವಾಸದಿಂದ ಮುನ್ನುಗ್ಗಲು ಸಾಧ್ಯ.

ಇದನ್ನೂ ಓದಿ: ಚಿತ್ರದಲ್ಲಿ ನೀವು ಮೊದಲು ನೋಡುವ ಬಣ್ಣ ನಿಮ್ಮ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತೆ

ಹದ್ದು ಮೊದಲು ನಿಮ್ಮ ಕಣ್ಣಿಗೆ ಬಿದ್ದರೆ:

Eagle

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಕಪ್ಪು ಹದ್ದನ್ನು ನೀವು ಮೊದಲು ಗಮನಿಸಿದರೆ, ದುರ್ಬಲತೆ ನಿಮಗೆ ಸ್ವಲ್ಪ ಭಯವೆನಿಸಬಹುದು.  ನೀವು ಯಾವಾಗಲೂ ಅರ್ಥಪೂರ್ಣ ಸಂಪರ್ಕಗಳು ಮತ್ತು ಆಳವಾದ ಸಂಬಂಧಗಳಿಗಾಗಿ ಹಂಬಲಿಸುತ್ತೀರಿ. ಆದರೆ ಇತರರೊಂದಿಗೆ ಹೊಂದಿಕೊಳ್ಳಲು ಭಯಪಡುತ್ತೀರಿ. ಜೊತೆಗೆ ಸಂಬಂಧದಲ್ಲಿ ನಂಬಿಕೆ ಇಡಲು ನೀವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಒಮ್ಮೆ ನಂಬಿಕೆ ಇಟ್ಟರೆ ಅವರಿಗೆ ನಿಷ್ಠರಾಗಿರುತ್ತೀರಿ ಮತ್ತು ಬದ್ಧರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sun, 23 November 25

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ