Chanakya Niti: ಈ ಅಭ್ಯಾಸಗಳು ನಿಮ್ಮ ಸಂಪೂರ್ಣ ಜೀವನವನ್ನೇ ನಾಶ ಮಾಡಬಹುದು ಎಚ್ಚರ!

ಯಶಸ್ಸಿಗಾಗಿ ಏನು ಮಾಡಬೇಕು, ಜೀವನವನ್ನು ಹೇಗೆ ನಡೆಸಬೇಕು ಸೇರಿದಂತೆ ಜೀವನಕ್ಕೆ ಸಂಬಂಧಿಸಿ ಅನೇಕಾರು ವಿಷಯಗಳ ಬಗ್ಗೆ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಅದೇ ರೀತಿ ಅವರು ವಿಶೇಷವಾಗಿ ಯುವ ಜನರ ಈ ಕೆಲವೊಂದು ಅಭ್ಯಾಸಗಳು ಜೀವನಕ್ಕೆ ಮಾರಕವಾಗಬಹುದು, ಅದನ್ನು ತ್ಯಜಿಸಿದರೆ ಸೂಕ್ತ ಎಂದು ಹೇಳಿದ್ದಾರೆ. ಹಾಗಿದ್ದರೆ ಜೀವನವನ್ನು ಹಾಳು ಮಾಡುವ ಆಭ್ಯಾಸಗಳು ಯಾವುದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಅಭ್ಯಾಸಗಳು ನಿಮ್ಮ ಸಂಪೂರ್ಣ ಜೀವನವನ್ನೇ ನಾಶ ಮಾಡಬಹುದು ಎಚ್ಚರ!
ಚಾಣಕ್ಯ ನೀತಿ
Image Credit source: Pinterest

Updated on: Jan 16, 2026 | 8:19 PM

ನಮ್ಮ ಅಭ್ಯಾಸಗಳಿಂದಲೂ (habits) ನಮ್ಮ ಒಳಿತು ಕೆಡುಕು ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಒಳ್ಳೆಯ ಅಭ್ಯಾಸಗಳನ್ನು, ಸದ್ಗುಣಗಳನ್ನು ಬೆಳೆಸಬೇಕು ಎಂದು ಹಿರಿಯರು ಆಗಾಗ್ಗೆ ಹೇಳುವುದು. ಅದರಲ್ಲೂ ಈ ಕೆಲವೊಂದು ಅಭ್ಯಾಸಗಳಿದ್ದರೆ ಜೀವನವೇ ಸರ್ವನಾಶವಾಗುವ ಸಾಧ್ಯತೆ ಇದೆ, ಅಂತಹ ಅಭ್ಯಾಸಗಳನ್ನು ಕೂಡಲೇ ತ್ಯಜಿಸಬೇಕು. ಯುವ ಜನರಂತೂ ಆ ಅಭ್ಯಾಸಗಳನ್ನು ತ್ಯಜಿಸದಿದ್ದರೆ ಖಂಡಿತವಾಗಿಯೂ ಜೀವನದಲ್ಲಿ  ಮುಂದೆ ಬರಲು ಸಾಧ್ಯವಿಲ್ಲ  ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಜೀವನವನ್ನು ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳು ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ

ಮಾದಕ ವಸ್ತುಗಳು: ಮಾದಕ ವಸ್ತುಗಳ ಸೇವನೆಯಿಂದ ಜೀವನವೇ ನಾಶವಾಗಬಹುದು. ಅದರಲ್ಲೂ ಈ ಅಭ್ಯಾಸ
ಯುವಜನರಿಗೆ ಶಾಪವಾಗಿದೆ. ಇದು ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುವುದಲ್ಲದೆ, ಅವರ ಸಮಯವನ್ನು ವ್ಯರ್ಥ ಮಾಡುತ್ತದೆ. ಮಾದಕ ವಸ್ತುಗಳ ವ್ಯಸನವು ಯುವ ಜನರನ್ನು ಕೆಟ್ಟ ಸಹವಾಸಕ್ಕೆ ಮತ್ತಷ್ಟು ಕರೆದೊಯ್ಯುತ್ತದೆ ಮತ್ತು ಅವರು ಎಂದಿಗೂ ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ ಎಂದಿದ್ದಾರೆ ಚಾಣಕ್ಯ. ಆದ್ದರಿಂದ ಈ ಅಭ್ಯಾಸವನ್ನು ತ್ಯಜಿಸಿದರೆ ಉತ್ತಮ.

ಸೋಮಾರಿತನ:  ಸೋಮಾರಿತನ ಯುವ ಜನರ ಅತೀ ದೊಡ್ಡ ಶತ್ರು ಎಂದಿದ್ದಾರೆ ಚಾಣಕ್ಯ. ಒಬ್ಬ ಯುವಕ ಯಶಸ್ವಿಯಾಗಲು ಬಯಸಿದರೆ, ಆತ ಸೋಮಾರಿತನ ಎಂಬ ಈ ಶತ್ರುವನ್ನು ತೊಡೆದುಹಾಕಬೇಕು. ಇಲ್ಲದಿದ್ದರೆ, ಆತ ಎಂದಿಗೂ ಯಶಸ್ಸನ್ನು ಪಡೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಪುರುಷರು ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಲೇಬಾರದು

ಕೆಟ್ಟವರ ಸಹವಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಯಾವಾಗಲೂ ಕೆಟ್ಟ ಸಹವಾಸದಿಂದ ದೂರವಿರಬೇಕು. ಏಕೆಂದರೆ ಆತನೂ ದಾರಿ ತಪ್ಪುವ ಸಾಧ್ಯತೆ ಇರುತ್ತದೆ, ಕೆಟ್ಟವರ ಸಹವಾಸದಿಂದ ಹಣ ಮಾತ್ರವಲ್ಲ ಗೌರವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.

ಹಣ ಖರ್ಚು ಮಾಡುವುದು: ಅತಿಯಾದ ಹಣ ಖರ್ಚು ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ, ಇದು ಒಬ್ಬ ವ್ಯಕ್ತಿಯನ್ನು ಬಡತನಕ್ಕೆ ನೂಕುತ್ತದೆ. ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಆಸೆಯಿರುವವರು ಯೋಚಿಸಿ ಖರ್ಚು ಮಾಡಬೇಕು, ಅದರಲ್ಲೂ ಯುವಕರು ಈ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿರಬೇಕು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ