AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅಮೃತದಷ್ಟು ಪ್ರಯೋಜನಗಳನ್ನು ನೀಡುವ ಹಾಲಿನಲ್ಲಿಯೂ ಕೂಡ ಕೆಲವು ನ್ಯೂನತೆಗಳಿರಬಹುದು ಎಂದರೆ ನಂಬುತ್ತೀರಾ? ಹೌದು, ಹಾಲಿನ ಸೇವನೆ ಎಲ್ಲರಿಗೂ ಸೂಕ್ತವಲ್ಲ. ಹಾಲು ಕುಡಿದ ನಂತರ ಜೀರ್ಣಕಾರಿ ಸಮಸ್ಯೆಗಳು ಕಂಡು ಬಂದಿರುವುದನ್ನು ಕೇಳಿರಬಹುದು ಅಥವಾ ನಿಮಗೂ ಈ ಅನುಭವವಾಗಿರಬಹುದು. ಹಾಗಾಗಿ ಹಾಲು ಎಲ್ಲರ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?
The Truth About Milk Not For EveryoneImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Jan 16, 2026 | 7:32 PM

Share

ಹಾಲು (Milk) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ತಿಳಿದ ವಿಚಾರ. ಬಾಲ್ಯದಿಂದಲೂ, ಹಾಲು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ, ಮೂಳೆಗಳು ಗಟ್ಟಿಯಾಗುತ್ತದೆ ಮತ್ತು ದೌರ್ಬಲ್ಯವನ್ನು ನಿವಾರಿಸುತ್ತದೆ ಎಂದು ಕೇಳಿರುತ್ತೇವೆ, ಓದಿರುತ್ತೇವೆ. ಹಾಲಿನಲ್ಲಿ ದೇಹದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳಿವೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಆದರೆ ಬದಲಾಗುತ್ತಿರುವ ಜೀವನಶೈಲಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳ ಬಗ್ಗೆ ತಿಳಿಯುವುದು ಅನಿವಾರ್ಯವಾಗಿದೆ. ಹೌದು, ನಾವು ತಿಳಿದಿರುವಂತೆ ಹಾಲು ಎಲ್ಲರಿಗೂ ಒಳ್ಳೆಯದಲ್ಲ, ಅದು ನಿಜವಾಗಿಯೂ ಪ್ರಯೋಜನಕಾರಿಯೇ ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ. ಇಂತಹ ಗೊಂದಲಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹಾಲು ಕುಡಿದ ನಂತರ ಜೀರ್ಣಕಾರಿ ಸಮಸ್ಯೆಗಳು ಕಂಡು ಬಂದಿರುವುದನ್ನು ಕೇಳಿರಬಹುದು ಅಥವಾ ನಿಮಗೂ ಈ ಅನುಭವವಾಗಿರಬಹುದು. ಇನ್ನು ಕೆಲವರಲ್ಲಿ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬಂದಿರಬಹುದು. ಹಾಗಾಗಿ ಹಾಲು ಎಲ್ಲರ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ನಿಮಗಿದ್ದು ರಾತ್ರಿ ಹಾಲು ಕುಡಿಯುತ್ತಿದ್ದರೆ ನೀವು ತುಂಬಾ ಅಪಾಯದಲ್ಲಿದ್ದೀರಿ ಎಂದರ್ಥ!

ಹಾಲು ಎಲ್ಲರಿಗೂ ಒಳ್ಳೆಯದಲ್ಲ ಎಂಬುದಕ್ಕೆ ಕಾರಣವೇನು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಹಾಲು ಎಲ್ಲರ ದೇಹಕ್ಕೂ ಸರಿಹೊಂದುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಲ್ಯಾಕ್ಟೋಸ್ ಅಸಹಿಷ್ಣುತೆ. ಈ ಸ್ಥಿತಿಯಿರುವ ಜನರಲ್ಲಿ ಲ್ಯಾಕ್ಟೇಸ್ ಕಿಣ್ವ ಕಡಿಮೆ ಮಟ್ಟದಲ್ಲಿರುವುದರಿಂದ ಹಾಲನ್ನು ಜೀರ್ಣಿಸಿಕೊಳ್ಳಲು ತೊಂದರೆಯಾಗುತ್ತದೆ. ಇದು ಗ್ಯಾಸ್, ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವರಿಗೆ ಹಾಲಿನ ಅಲರ್ಜಿ ಅಥವಾ ಲೋಳೆ ಅಥವಾ ಕಫದ ಸಮಸ್ಯೆ ಕೂಡ ಕಂಡುಬರುತ್ತದೆ. ಇದು ಶೀತ ಸಂಬಂಧಿತ ಅಥವಾ ಉಸಿರಾಟದ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೂ ಇದು ಒಳ್ಳೆಯದಲ್ಲ. ಕೆಲವರಲ್ಲಿ, ಹಾಲು ಸೇವನೆಯಿಂದ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ಎಣ್ಣೆಯುಕ್ತ ಚರ್ಮ ಇರುವವರಿಗೆ, ಮೊಡವೆಗಳಿಂದ ಬಳಲುತ್ತಿರುವವರಿಗೆ ಒಳ್ಳೆಯದಲ್ಲ.

ಹಾಲು ಕುಡಿಯುವುದರಿಂದಾಗುವ ಸಮಸ್ಯೆಗಳನ್ನು ತಡೆಯಲು ಮೊಸರು, ಮಜ್ಜಿಗೆ ಅಥವಾ ಲ್ಯಾಕ್ಟೋಸ್ ಮುಕ್ತ ಹಾಲನ್ನು ಸೇವಿಸಬಹುದು, ಇವು ಜೀರ್ಣಿಸಿಕೊಳ್ಳಲು ಸುಲಭ. ಚರ್ಮ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ, ವೈದ್ಯರು ಅಥವಾ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Fri, 16 January 26

ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಸಿದ್ದರಾಮಯ್ಯ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ, ಮುಂದೇನಾಯ್ತು?
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಎಲ್ಲೆಲ್ಲೂ ಗಿಲ್ಲಿ, ಎಲ್ಲೆಲ್ಲೂ ಗಿಲ್ಲಿ: ಅಭಿಮಾನಿಗಳ ಪ್ರೀತಿಯ ಅಭಿಯಾನ ನೋಡಿ
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಆಸ್ತಿಗಾಗಿ 4 ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನೇ ಕೊಂದ ಪಾಪಿ ಅಣ್ಣ!
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ
ಮದುವೆಗೆ ಏನಾದರೂ ತೊಂದ್ರೆ ಆದ್ರೆ ಗಿಲ್ಲಿಯೇ ಕಾರಣ; ನೇರವಾಗಿ ಹೇಳಿದ ಕಾವ್ಯಾ