
ಆಚಾರ್ಯ ಚಾಣಕ್ಯ (Acharya Chanakya) ಯಶಸ್ಸು, ಶ್ರೀಮಂತಿಕೆ, ವೃತ್ತಿ ಜೀವನ ಮಾತ್ರವಲ್ಲ ಪುರುಷರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಪುರುಷನಾದವನು ದಾಂಪತ್ಯ ಜೀವನವನ್ನು ಹೇಗೆ ಸಾಗಿಸಬೇಕು, ಮಕ್ಕಳಿಗೆ ಯಾವ ರೀತಿಯ ಸಂಸ್ಕಾರವನ್ನು ಕಲಿಸಿಕೊಡಬೇಕು ಎಂದು ಹೇಳಿರುವಂತೆ ಅವರು ಗಂಡಸರು ತಮಗೆ ಸಂಬಂಧಿಸಿದ ಈ ಕೆಲವೊಂದು ವಿಚಾರಗಳನ್ನು ಹೊರಗಿನ ಜನರ ಬಳಿ ಯಾವುದೇ ಕಾರಣಕ್ಕೂ ಶೇರ್ ಮಾಡಬಾರದು ಎಂದಿದ್ದಾರೆ. ಏಕೆಂದರೆ ಈ ವೈಯಕ್ತಿ ವಿಚಾರಗಳನ್ನು ಇತರರ ಬಳಿ ಹಂಚಿಕೊಂಡರೆ ಭವಿಷ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಿದ್ರೆ ಯಾರೊಂದಿಗೀ ಶೇರ್ ಮಾಡಬಾರದ ಆ ವಿಚಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
ಆರ್ಥಿಕ ನಷ್ಟ: ಪ್ರತಿಯೊಬ್ಬರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಇದರಿಂದ ದುಃಖವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ದುಃಖವನ್ನು ಕಡಿಮೆ ಮಾಡಲು, ಮನಸ್ಸನ್ನು ಹಗುರ ಮಾಡಿಕೊಳ್ಳಲು ಆ ವಿಚಾರವನ್ನು ಇತರರ ಬಳಿ ಹಂಚಿಕೊಳ್ಳುತ್ತಾರೆ. ಪುರುಷರು ಈ ರೀತಿ ಹಣದ ವಿಚಾರಗಳನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಮನೆಯ ನ್ಯೂನತೆಗಳ ಬಗ್ಗೆ ಹೇಳಬೇಡಿ: ಮನೆಯಲ್ಲಿ ನಡೆಯುವ ಕಲಹಗಳು, ಮನೆಯ ಸದಸ್ಯರ ನ್ಯೂನತೆಗಳ ಬಗ್ಗೆ ಯಾರೊಂದಿಗೂ ಶೇರ್ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಈ ರೀತಿ ಹೇಳಿದಾಗ ಅವರು ನಿಮ್ಮ ಮನೆಯ ಬಗ್ಗೆ ತಪ್ಪು ಯೋಚನೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಜೊತೆಗೆ ನಿಮ್ಮ ಬಗ್ಗೆ ನಿಮ್ಮ ಬೆನ್ನ ಹಿಂದೆಯೇ ಕೆಟ್ಟ ಮಾತುಗಳನ್ನಾಡುವ, ಗೇಲಿ ಮಾಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ತಪ್ಪಿಯೂ ಇಂತಹ ಜನರನ್ನು ನಿಮ್ಮ ಮನೆಗೆ ಆಹ್ವಾನಿಸಬೇಡಿ
ನಿಮಗಾದ ಮೋಸದ ಬಗ್ಗೆ ಹೇಳಬೇಡಿ: ನೀವು ಯಾರಿಂದಾದರೂ ಮೋಸಕ್ಕೊಳಗಾದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಈ ರೀತಿ ಹೇಳಿದಾಗ ಅವರು ನಿಮ್ಮ ಸಾಮರ್ಥ್ಯದ ಬಗ್ಗೆ ಕಡಿಮೆ ಅಂದಾಜು ಮಾಡುವ ಸಾಧ್ಯತೆ ಇರುತ್ತದೆ ಜೊತೆಗೆ ಅವರು ಭವಿಷ್ಯದಲ್ಲಿ ನಿಮಗೆ ಮೋಸ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಈ ಸೂಕ್ಷ್ಮ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ನಿಮಗಾದ ಅವಮಾನಗಳು: ನೀವು ಯಾರಿಂದಾದರೂ ಅವಮಾನಕ್ಕೊಳಗಾದರೆ, ಅದರ ಬಗ್ಗೆ ಎಲ್ಲರಿಗೂ ಹೇಳಬೇಡಿ. ಏಕೆಂದರೆ ಇದೇ ವಿಚಾರವನ್ನು ಇಟ್ಟುಕೊಂಡು ಅವರು ನಿಮ್ಮ ನಗೆಪಾಟಲಿಗೆ ಈಡಾಗಿಸುವ ಸಾಧ್ಯತೆ ಇರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ