ಸಾಂದರ್ಭಿಕ ಚಿತ್ರ
ಪತಿ ಪತ್ನಿ ಹಾಗೂ ಪ್ರೇಮಿಗಳ ನಡುವೆ ಪ್ರೀತಿಯೊಂದಿದ್ದರೆ ಸಾಲದು. ಈ ಸಂಬಂಧವು ಗಟ್ಟಿಯಾಗಬೇಕಾದರೆ ನಂಬಿಕೆ ಹಾಗೂ ಪ್ರಾಮಾಣಿಕತೆಯೂ ಬಹಳ ಮುಖ್ಯ. ಆದರೆ ಈಗೀಗ ಗಂಡ ಹೆಂಡತಿ, ಪ್ರೇಮಿಗಳು ಹಾಗೂ ಸ್ನೇಹಿತರ ನಡುವೆ ನಂಬಿಕೆ ಎನ್ನುವುದು ಮುರಿದು ಬೀಳುತ್ತಿದೆ. ಅದರಲ್ಲೂ ಈ ಸಂಬಂಧ ಎಷ್ಟೇ ಮಧುರವಾಗಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಇತರರನ್ನು ಬಳಸಿಕೊಳ್ಳುವ ಮೂಲಕ ಮೋಸ ಮಾಡುತ್ತಿದ್ದಾರೆ. ಆದರೆ ಮೋಸ ಹೋದವನಿಗೆ ಮಾತ್ರ ಆ ನೋವು ಹೃದಯವನ್ನು ಕೊರೆಯುತ್ತದೆ. ಹೀಗಾಗಿ ಪ್ರೀತಿಯಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ಚಾಣಕ್ಯ ಈ ನಾಲ್ಕು ವಿಷಯಗಳನ್ನು ನೆನಪಿನಲ್ಲಿರಲಿ ಎಂದು ಎಚ್ಚರಿಸಿದ್ದಾರೆ.
- ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ : ಸಂಬಂಧದಲ್ಲಿ ಅಥವಾ ಪ್ರೀತಿಯಲ್ಲಿ ಜನರು ಹೆಚ್ಚಾಗಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇದರಿಂದಾಗಿ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಚಾಣಕ್ಯನು ಪ್ರೀತಿಯಲ್ಲಿಯೂ ಒಬ್ಬ ವ್ಯಕ್ತಿಯು ತನ್ನ ಭಾವನೆಗಳನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಪ್ರೀತಿಯಲ್ಲಿ ಬೀಳುವ ಮೊದಲು, ಈ ವ್ಯಕ್ತಿಯೂ ಎಷ್ಟು ಸತ್ಯವಂತ ಹಾಗೂ ಪ್ರಾಮಾಣಿಕ ಎಂಬುದನ್ನು ಖಚಿತಪಡಿಸಿಕೊಳ್ಳಿ. ವ್ಯಕ್ತಿಯ ನೋಟ ಮುಖ್ಯವಲ್ಲ, ಆತನ ಕ್ರಿಯೆಗಳಿಗೆ ಗಮನ ಕೊಡಿ.
- ಮನಸ್ಸು ಹಾಗೂ ಹೃದಯದಿಂದ ಯೋಚಿಸಿ : ಪ್ರೀತಿಯಲ್ಲಿ ಹೃದಯ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಮನಸ್ಸನ್ನು ಹಿಂದೆ ಇಡಬೇಕು ಎನ್ನುವುದಲ್ಲ. ಪ್ರೀತಿಯಲ್ಲಿಯೂ ಪ್ರಾಯೋಗಿಕ ವಿಧಾನ ಅಗತ್ಯ ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ನೀವು ನಿಮ್ಮ ಮನಸ್ಸಿನಿಂದ ಯೋಚಿಸಿದಾಗ, ನೀವು ತಪ್ಪುಮಾಡುವುದನ್ನು ನಿಲ್ಲಿಸಲು ಸಾಧ್ಯ. ಯಾರಾದರೂ ನಿಮ್ಮನ್ನು ಮೋಸಗೊಳಿಸಲು ಬಯಸಿದರೆ , ಅವರ ನಡವಳಿಕೆ, ಮಾತುಗಳಿಂದ ಕೆಲವು ಸೂಚನೆ ಸಿಗುತ್ತದೆ. ಅದನ್ನು ಎಂದಿಗೂ ನಿರ್ಲಕ್ಷಿಸಬಾರದು. ಯಾರಾದರೂ ಪದೇ ಪದೇ ಸುಳ್ಳು ಹೇಳುತ್ತಿದ್ದರೆ, ಜಾಗರೂಕರಾಗಿರಿ. ಆ ವ್ಯಕ್ತಿಗಳಿಂದ ದೂರವಿದ್ದರೆ ಒಳ್ಳೆಯದು..ಇಲ್ಲದಿದ್ದರೆ ಸಂಬಂಧ ಹಾಗೂ ಪ್ರೀತಿಯಲ್ಲಿ ನಿಮ್ಮನ್ನು ಮೋಸಗೊಳಿಸುವುದೇ ಹೆಚ್ಚು ಎನ್ನುವ ಎಚ್ಚರಿಕೆ ನೀಡಿದ್ದಾರೆ ಚಾಣಕ್ಯ.
- ಸ್ವಾಭಿಮಾನ ಬೆಳೆಸಿಕೊಳ್ಳಿ : ಪ್ರೀತಿಯಲ್ಲಿ ಎಂದಿಗೂ ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು ಸಂಬಂಧವು ನಿಮ್ಮ ಸ್ವಾಭಿಮಾನವನ್ನು ಕಸಿದುಕೊಳ್ಳಲು ಪ್ರಾರಂಭಿಸಿದರೆ, ಅದನ್ನು ಅಲ್ಲಿಯೇ ಕೊನೆ ಗೊಳಿಸುವುದು ಉತ್ತಮ. ಹೌದು ನಿಮ್ಮ ಗೌರವದ ಬಗ್ಗೆ ಕಾಳಜಿ ವಹಿಸದ ವ್ಯಕ್ತಿ ನಿಮಗೆ ದ್ರೋಹ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ಸತ್ಯವನ್ನು ನಿರ್ಲಕ್ಷಿಸುವುದರಿಂದ ಸಂಬಂಧಗಳು ಮತ್ತಷ್ಟು ಹದಗೆಡಬಹುದು. ಹೀಗಾಗಿ ಮೋಸ ಹೋಗುವ ಮುನ್ನ ಈ ಸಂಬಂಧ ಮುರಿಯುವ ಮೂಲಕ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಉತ್ತಮವಾಗಿದೆಯಂತೆ.
- ಜಾಗರೂಕತೆ ಹಾಗೂ ತಿಳುವಳಿಕೆಯಿರಲಿ : ಪ್ರೀತಿಯಲ್ಲಿ ಬುದ್ಧಿವಂತಿಕೆ ಹಾಗೂ ಎಚ್ಚರಿಕೆ ಬಹಳ ಮುಖ್ಯ ಎಂದು ಚಾಣಕ್ಯ ತಿಳಿಸಿದ್ದಾರೆ. ಯಾವ ವಿಷಯದಲ್ಲಿಯೂ ಆತುರಪಡಬೇಡಿ. ನಿಮ್ಮ ಮನಸ್ಸಿನಿಂದ ಯೋಚಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಿ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ತಿಳಿಯಲು ಸಾಧ್ಯವಾಗುತ್ತದೆ. ಪ್ರೀತಿಯಲ್ಲಿ ಪದೇ ಪದೇ ತಪ್ಪುಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಒಂದು ವೇಳೆ ಮೋಸ ಹೋದರೆ ಹೆಚ್ಚು ತೊಂದರೆ ಅನುಭವಿಸುವವರು ನೀವೇ. ಹೀಗಾಗಿ ನಿಮ್ಮ ನೋವಿಗೆ ನೀವೇ ಕಾರಣವಾಗಬೇಡಿ. ಹೀಗಾಗಿ ಸಂಬಂಧ ನಿಭಾಯಿಸುವಾಗ ಜಾಗರೂಕತೆ ಹಾಗೂ ತಿಳುವಳಿಕೆಯಿಂದಿರುವುದು ಬಹಳ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ