AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ಎರಡು ಕೈ ಜೋಡಿಸಿದಾಗ ನಿಮ್ಮ ಹೆಬ್ಬೆರಳೇ ಹೇಳುತ್ತೆ ರಹಸ್ಯಮಯ ವ್ಯಕ್ತಿತ್ವ

ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವ ಹೊಂದಿರುತ್ತಾರೆ. ಹೀಗಾಗಿ ವ್ಯಕ್ತಿಯ ವರ್ತನೆ ಹಾಗೂ ನಡವಳಿಕೆಯಿಂದ ಒಬ್ಬ ವ್ಯಕ್ತಿ ಹೀಗೆಯೇ ಎನ್ನುವ ನಿರ್ಧಾರಕ್ಕೆ ಬರಬಹುದು. ಅದೇ ರೀತಿ ವ್ಯಕ್ತಿಯ ದೇಹದ ಪ್ರತಿಯೊಂದು ಅಂಗದ ಆಕಾರವು ವ್ಯಕ್ತಿಯ ಸಾಮರ್ಥ್ಯ, ದೌರ್ಬಲ್ಯ, ನಡವಳಿಕೆಯನ್ನು ಬಿಚ್ಚಿಡುತ್ತದೆ. ಎರಡು ಕೈಯನ್ನು ಜೋಡಿಸಿದಾಗ ಹೆಬ್ಬೆರಳು ಯಾವ ರೀತಿ ಇರುತ್ತದೆ ಎನ್ನುವುದು ರಹಸ್ಯಮಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Personality Test : ಎರಡು ಕೈ ಜೋಡಿಸಿದಾಗ ನಿಮ್ಮ ಹೆಬ್ಬೆರಳೇ ಹೇಳುತ್ತೆ ರಹಸ್ಯಮಯ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 27, 2025 | 3:43 PM

Share

ಒಬ್ಬ ವ್ಯಕ್ತಿ ಪರಿಚಯವಾದ ಕೂಡಲೇ ಆತನ ವ್ಯಕ್ತಿತ್ವ (Personality) ವನ್ನು ನಿರ್ಣಯಿಸಲು ಸಾಧ್ಯವಿಲ್ಲ. ವ್ಯಕ್ತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಇಡೀ ಜೀವಮಾನವಿದ್ದರೂ ಸಾಲದು. ಅದಲ್ಲದೇ ಪ್ರತಿಯೊಬ್ಬ ವ್ಯಕ್ತಿಯೂ ಸಂದರ್ಭಕ್ಕೆ ಅನುಗುಣವಾಗಿ ತನ್ನ ಗುಣಸ್ವಭಾವವನ್ನು ಬದಲಾಯಿಸುತ್ತಿರುತ್ತಾನೆ. ಕೈಗಳ ಆಕಾರದಿಂದ ಹಿಡಿದು, ನೀವು ಕುಳಿತುಕೊಳ್ಳುವ ಹಾಗೂ ಮಲಗುವ ಭಂಗಿಯೇ ವ್ಯಕ್ತಿತ್ವವನ್ನು ಬಹಿರಂಗ ಪಡಿಸುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಎರಡು ಕೈಯನ್ನು ಜೋಡಿಸುವ ರೀತಿಯಿಂದಲೇ ನಿಮ್ಮ ಗುಣಸ್ವಭಾವವನ್ನು ನಿರ್ಣಯಿಸಬಹುದು. ನಿಮ್ಮ ಹೆಬ್ಬೆರಳು ಹೇಗೆ ಇರುತ್ತದೆ ಎನ್ನುವುದರ ಆಧಾರದ ಮೇಲೆ ವ್ಯಕ್ತಿತ್ವ ನಿರ್ಧಾರವಾಗುತ್ತದೆ.

  • ಬಲಗೈಯ ಹೆಬ್ಬೆರಳು ಎಡಗೈಯ ಹೆಬ್ಬೆರಳಿನ ಮೇಲೆ ಇದ್ದರೆ : ಎರಡು ಕೈಯನ್ನು ಜೋಡಿಸಿದಾಗ ಬಲಗೈಯ ಹೆಬ್ಬೆರಳು ಎಡಗೈಯ ಹೆಬ್ಬೆರಳಿನ ಮೇಲೆ ಇದ್ದರೆ ಅಂತಹ ಜನರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಲ್ಲಿ ನಾಯಕತ್ವದ ಗುಣ ಹೆಚ್ಚಿದ್ದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಜನರು ತುಂಬಾನೇ ಮುಂದಾಲೋಚನೆಯುಳ್ಳವರು. ಹೀಗಾಗಿ ವ್ಯವಹಾರಗಳಲ್ಲಿ ಲಾಭ ನಷ್ಟಗಳನ್ನು ಮೊದಲೇ ಊಹಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ತಮ್ಮ ಜೀವನದ ರಹಸ್ಯಗಳನ್ನು ಯಾರಿಗೂ ಹೇಳದೇ ತಮ್ಮಲ್ಲೇ ಕಾಪಾಡಿಕೊಳ್ಳುತ್ತಾರೆ.
  • ಎಡಗೈಯ ಹೆಬ್ಬೆರಳು ಬಲಗೈಯ ಹೆಬ್ಬೆರಳಿನ ಮೇಲೆ ಇದ್ದರೆ : ಎರಡು ಕೈ ಜೋಡಿಸಿದಾಗ ಹೆಬ್ಬೆರಳು ಈ ರೀತಿಯಿದ್ದರೆ ಈ ಜನರನ್ನು ಬಹಳ ಅಪರೂಪವೆಂದು ಪರಿಗಣಿಸಲಾಗುತ್ತದೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಹಾಗೂ ಎಲ್ಲಾ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ದಯಾಳು ಗುಣ ಹೊಂದಿದ್ದು ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇವರು ತನ್ನ ಸುತ್ತಮುತ್ತಲಿನವರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ಕಷ್ಟ ಎನ್ನುವವರ ಜೊತೆಗೆ ಈ ವ್ಯಕ್ತಿಗಳು ಸದಾ ಬೆನ್ನ ಹಿಂದೆ ನಿಲ್ಲುತ್ತಾರೆ. ಸಲಹೆ ಸೂಚನೆ ನೀಡುವುದರಲ್ಲಿ ಈ ವ್ಯಕ್ತಿಗಳು ಒಂದು ಹೆಜ್ಜೆ ಮುಂದೆ ಇರುತ್ತಾರೆ.
  • ಎರಡು ಕೈಯ ಹೆಬ್ಬೆರಳು ನೇರವಾಗಿದ್ದರೆ : ಎರಡು ಕೈ ಜೋಡಿಸಿದಾಗ ಎರಡು ಕೈಯ ಹೆಬ್ಬೆರಳು ನೇರವಾಗಿದ್ದರೆ ಅಂತಹ ವ್ಯಕ್ತಿಗಳು ಎಲ್ಲರ ಮಾತಿಗೂ ಕಿವಿಗೊಡುತ್ತಾರೆ. ಇವರಲ್ಲಿ ನಾಯಕತ್ವ ಗುಣ ಹೆಚ್ಚಿರುತ್ತದೆ. ಪ್ರಾಮಾಣಿಕರಾಗಿದ್ದು ತಮ್ಮ ನೇರವಾದ ಮಾತಿನಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಇತರರ ಅಭಿಪ್ರಾಯಗಳನ್ನು ಗೌರವಿಸುತ್ತಾರೆ. ಯಾವುದೇ ಕೆಲಸ ಕಾರ್ಯಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಾಣುತ್ತಾರೆ. ಈ ವ್ಯಕ್ತಿಗಳಲ್ಲಿ ಸ್ಪಷ್ಟ ಮತ್ತು ಪ್ರಾಮಾಣಿಕ ಸಂವಹನವು ಎದ್ದು ಕಾಣುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಹೆಚ್ಚು ಗಮನ ಹರಿಸುತ್ತಾರೆ. ಒತ್ತಡದ ಸಂದರ್ಭಗಳಲ್ಲಿಯೂ ನಿರಾಳವಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ತಮ್ಮ ಜೊತೆಗಿರುವವರಿಗೆ ನಿಷ್ಠೆ ಮತ್ತು ಬದ್ಧತೆಯಿಂದ ಇರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ