ಬಜೆಟ್ ಫ್ರೆಂಡ್ಲಿ ಏರ್ ಟಿಕೆಟ್‌ಗಳನ್ನು ಹುಡುಕುವುದು, ವಿಶೇಷವಾಗಿ ವಾರಾಂತ್ಯ(Weekend) ಅಥವಾ ರಾಜಾ ದಿನಗಳಲ್ಲಿ ಅಷ್ಟೊಂದು ಸುಲಭವಲ್ಲ. ಏರ್‌ಲೈನ್‌ಗಳು ಮತ್ತು ಟೂರ್ ಆಪರೇಟರ್‌ಗಳು ಪ್ರತಿದಿನ ನೀಡುವ ಡೀಲ್‌ಗಳ ಹೊರತಾಗಿಯೂ, ನೀವು ಕೆಲವೊಂದು ಟ್ರಿಕ್ಸ್ಗಳನ್ನು ಬಳಸಿಕೊಂಡು ನಿಮ್ಮ ಸ್ಪಲ್ಪ ಹಣ ಉಳಿಸಬಹುದಾಗಿದೆ. ಅಗ್ಗದ ಏರ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಈ ಸಲಹೆಗಳನ್ನು ನೆನಪಿನಲ್ಲಿಡಿ. ನಿಮ್ಮ ಮುಂದಿನ ಬಾರಿಯ ವಿಮಾನ ಪ್ರಯಾಣದಲ್ಲಿ ಸ್ವಲ್ಪ ಹಣ ಉಳಿಸಲು ನೀವು ಈ ಕೆಳಗಿನ ಟಿಪ್ಸ್ಗಳನ್ನು ಫಾಲೋ ಮಾಡಿ.
ನೀವು ವಿದ್ಯಾರ್ಥಿಯಾಗಿದ್ದರೆ ಅದು ಬೋನಸ್ ಆಗಿರುತ್ತದೆ. ಯಾಕೆಂದರೆ ನೀವು ನಿಮ್ಮ ಡಾಕ್ಯುಮೆಂಟ್ನಿಂದಾಗಿ ನಿಮ್ಮ ವಿಮಾನ ಪ್ರಯಾಣದಲ್ಲಿ ರಿಯಾಯಿತಿಯನ್ನು ಪಡೆಯಬಹುದು. ಹೆಚ್ಚುವರಿಯಾಗಿ, ಕೆಲವು ಏರ್‌ಲೈನ್‌ಗಳು ತಮ್ಮ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಕೆಲವು ಹೆಚ್ಚುವರಿ ಕಿಲೋಗಳನ್ನು ನೀವು ತೆಗೆದುಕೊಂಡು ಹೋಗಬಹುದು.
ನೀವು ದಿನಾಂಕಗಳ ಲಭ್ಯತೆಯ ಆಧಾರದ ಮೇಲೆ ನಿಮ್ಮ ಪ್ರವಾಸವನ್ನು ಕಾಯ್ದಿರಿಸಿ. ಯಾಕೆಂದರೆ ನೀವು ಪ್ರಯಾಣಿಸಲು ಬಯಸುವ ದಿನ ವಾರಾಂತ್ಯ ಅಥವಾ ರಜಾದಿನವಾಗಿದ್ದರೆ, ಆ ಸಮಯದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಆಗ ನೀವು ಅಧಿಕ ಮೊತ್ತ ನೀಡಿ ಟಿಕೇಟ್ ಖರೀದಿಸಬೇಕಾಗುತ್ತದೆ. ಆದ್ದರಿಂದ ಏರ್‌ಲೈನ್‌ಗಳು ಮತ್ತು ಟೂರ್ ಆಪರೇಟರ್‌ಗಳು ನೀಡುವ ಡೀಲ್‌ಗಳು, ಆಫರ್ಗಳನ್ನು ಚೆಕ್ ಮಾಡಿ ನೀವು ಪ್ರಯಾಣ ಬೆಳೆಸಬಹುದು.
ಇದನ್ನೂ ಓದಿ: ಕಡಿಮೆ ವೆಚ್ಚದ ಪ್ರವಾಸಿ ತಾಣಗಳನ್ನು ಹುಡುಕುತ್ತಿದ್ದೀರಾ? ಇಲ್ಲಿವೆ ನೋಡಿ
ನೀವು ವಿದೇಶ ಪ್ರಯಾಣವನ್ನು ಬೆಳೆಸುವಾಗ, ವಿಶೇಷವಾಗಿ ನೀವು ಹೋಗುವ ತಾಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರಿಂದಲೂ ನೀವು ಸ್ವಲ್ಪ ಹಣ ಉಳಿಸಬಹುದಾಗಿದೆ. ಭಾರತದ ಕರೆನ್ಸಿಗೆ ಯಾವ ರಾಷ್ಟ್ರಗಳಲ್ಲಿ ಹೆಚ್ಚಿನ ಮೌಲ್ಯವಿದೆ ಎಂದು ತಿಳಿದುಕೊಂಡು ನೀವು ನಿಮ್ಮವರೊಂದಿಗೆ ಕಡಿಮೆ ವೆಚ್ಚದಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದು.
ಟ್ರಾವೆಲ್ ಅಗ್ರಿಗೇಟರ್‌ಗಳು ಕೆಲವೊಮ್ಮೆ ನಿಮ್ಮ ಇಮೇಲ್ಗೆ ಪ್ರಚಾರದ ಕೋಡ್‌ಗಳು ಅಥವಾ ಕಡಿತಗೊಳಿಸಿದ ವಿಮಾನ ಟಿಕೆಟ್‌ಗಳೊಂದಿಗೆ ಉತ್ತಮ ವ್ಯವಹಾರಗಳನ್ನು ಕಳುಹಿಸುತ್ತಾರೆ. ಆದ್ದರಿಂದ, ಸ್ಪ್ಯಾಮ್ ಫೋಲ್ಡರ್‌ಗಳನ್ನು ಒಮ್ಮೆ ಪರಿಶೀಲಿಸುವುದರಿಂದ ನೀವು ರಿಯಾಯಿತಿಗಳನ್ನು ಪಡೆಯಬಹುದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:30 pm, Sat, 4 February 23