Guinness World Records: ಕೇಕನ್ನು ಬಟ್ಟೆತರ ಧರಿಸಿ 5ಮೀ ದೂರ ನಡೆದ ಯುವತಿ, ಇಲ್ಲಿದೆ ನೋಡಿ ವಿಡಿಯೋ

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್​​​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಿಳಿ ಕೇಕ್ ಡ್ರೆಸ್ ಧರಿಸಿದ್ದಾಳೆ. ಅವಳ ಸುತ್ತಲ್ಲಿರುವ ಜನರು ಆಕೆ ಧರಿಸಿರುವುದರಿಂದ ಕೇಕ್ ತುಂಡುಗಳನ್ನು ಕತ್ತರಿಸುವುದನ್ನು ಸಹ ಕಾಣಬಹುದು. ಇದೀಗಾ ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.

Guinness World Records: ಕೇಕನ್ನು ಬಟ್ಟೆತರ ಧರಿಸಿ 5ಮೀ ದೂರ ನಡೆದ ಯುವತಿ, ಇಲ್ಲಿದೆ ನೋಡಿ ವಿಡಿಯೋ
ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್Image Credit source: Instagram
Follow us
ಅಕ್ಷತಾ ವರ್ಕಾಡಿ
|

Updated on:Feb 04, 2023 | 4:13 PM

ಮದುವೆ ಹಾಗೂ ವಿಶೇಷ ಸಮಾರಂಭಗಳಲ್ಲಿ ಕೇಕ್​​​ ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ವಿವಿಧ ವಿನ್ಯಾಸ ಹಾಗೂ ರುಚಿಗಳಿಂದ ಕೂಡಿದ ಕೇಕ್​​ಗಳನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ಬಟ್ಟೆ ರೀತಿಯಲ್ಲಿ ಧರಿಸಬಹುದಾದ ಕೇಕ್​​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ತ್​​ ಆಗಿ ವೈರಲ್​ ಆಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್​​​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಬಿಳಿ ಕೇಕ್ ಡ್ರೆಸ್ ಧರಿಸಿದ್ದಾಳೆ. ಅವಳ ಸುತ್ತಲ್ಲಿರುವ ಜನರು ಆಕೆ ಧರಿಸಿರುವುದರಿಂದ ಕೇಕ್ ತುಂಡುಗಳನ್ನು ಕತ್ತರಿಸುವುದನ್ನು ಸಹ ಕಾಣಬಹುದು. ಇದೀಗಾ ವೀಡಿಯೊ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸ್ಥಾಪಿಸಿದ ಮಾರ್ಗಸೂಚಿಗಳ ಪ್ರಕಾರ, ಐದು ಮೀಟರ್ (16 ಅಡಿ) ಈ ಬಟ್ಟೆಯಲ್ಲಿ ನಡೆದು ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಎಂದು ಮಾನ್ಯತೆ ಪಡೆದು ಕೊಂಡಿದೆ.

ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್​ ಪಡೆದ ಕೇಕ್​​ನ ವೀಡಿಯೊವನ್ನೊಮ್ಮೆ ನೀವೇ ನೋಡಿ.

ಇದನ್ನೂ ಓದಿ: ಐಫೋನ್ ನ ಆ್ಯಪಲ್ ಲೋಗೋ ಹಿಂದಿದೆ ಇಂಟರೆಸ್ಟಿಂಗ್ ಸ್ಟೋರಿ, ಅದೇನು ಗೊತ್ತಾ? ಇಲ್ಲಿದೆ ನೋಡಿ

ಸುಮಾರು 131.15 ಕಿಲೋಗ್ರಾಂಗಳಷ್ಟು ತೂಕದ ಈ ಕೇಕ್​​ನ್ನು ವಿಶ್ವದ ಅತಿದೊಡ್ಡ ಧರಿಸಬಹುದಾದ ಕೇಕ್ ಘೋಷಿಸಲಾಗಿದೆ. ಇದು ಸ್ವಿಟ್ಜರ್ಲೆಂಡ್​​ನ ಸ್ವಿಸ್ ವರ್ಲ್ಡ್ ವೆಡ್ಡಿಂಗ್ ಈವೆಂಟ್​​​ನಲ್ಲಿ ಅನಾವರಣಗೊಳಿಸಲಾಗಿದೆ. ಈ ಕೇಕ್​​ನ್ನು ನತಾಶಾ ಕೊಲಿನ್ ಕಿಮ್ ಫಾಹ್ ಲೀ ಫೋಕಾಸ್ ಎಂಬ ಹೆಸರಿನ ಸ್ವಿಟ್ಜರ್ಲೆಂಡ್ ವ್ಯಕ್ತಿ ವಿನ್ಯಾಸಗೊಳಿಸಿದ್ದಾರೆ. ಈ ಕೇಕಿನ ಕೆಳಗಿನ ಭಾಗವನ್ನು ಅಲ್ಯೂಮಿನಿಯಂ ಫ್ರೇಮ್ ಮತ್ತು ಎರಡು ಲೋಹದ ಬೋಲ್ಟ್‌ಗಳನ್ನು ಬಳಸಿ ತಯಾರಿಸಲಾಗಿದೆ. ಮೇಲಿನ ಭಾಗವನ್ನು ಸಕ್ಕರೆ ಪೇಸ್ಟ್ ಮತ್ತು ಫಾಂಡೆಂಟ್ ಮಿಶ್ರಣವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:12 pm, Sat, 4 February 23