AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ನಿಮ್ಮ ಮಕ್ಕಳ ಆಹಾರ ಕ್ರಮ ಹೇಗಿರಬೇಕು? ತಜ್ಞರು ನೀಡಿರುವ ಸಲಹೆ ಇಲ್ಲಿವೆ​​​

ಏರುತ್ತಿರುವ ತಾಪಮಾನದ ಸಮಯದಲ್ಲಿ ಸೂಕ್ತವಾದ ಆಹಾರಗಳನ್ನು ನಿಮ್ಮ ಮಕ್ಕಳಿಗೆ ನೀಡುವುದು ಅಗತ್ಯವಾಗಿದೆ. ಹೆಚ್ಚುತ್ತಿರುವ ತಾಪಮಾನವು ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡಬಹುದು.

ಬೇಸಿಗೆಯಲ್ಲಿ ನಿಮ್ಮ ಮಕ್ಕಳ ಆಹಾರ ಕ್ರಮ ಹೇಗಿರಬೇಕು? ತಜ್ಞರು ನೀಡಿರುವ ಸಲಹೆ ಇಲ್ಲಿವೆ​​​
Childcare TipsImage Credit source: MissMalini
TV9 Web
| Edited By: |

Updated on: Jun 14, 2023 | 6:26 AM

Share

ಬೇಸಿಗೆಯ ಸುಡು ಬಿಸಿಲು, ಶಾಖದ ವಾತಾವರಣವು ನಿಮ್ಮ ಮಕ್ಕಳ ಆರೋಗ್ಯವನ್ನು ಕೆಡಿಸಬಹುದು. ಏರುತ್ತಿರುವ ತಾಪಮಾನದ ಸಮಯದಲ್ಲಿ ಸೂಕ್ತವಾದ ಆಹಾರಗಳನ್ನು ನಿಮ್ಮ ಮಕ್ಕಳಿಗೆ ನೀಡುವುದು ಅಗತ್ಯವಾಗಿದೆ. ಹೆಚ್ಚುತ್ತಿರುವ ತಾಪಮಾನವು ಮಕ್ಕಳಿಗೆ ಕಿರಿಕಿರಿಯನ್ನುಂಟುಮಾಡಬಹುದು. ಶಿಶುವೈದ್ಯರಾದ ಡಾ.ಸಂಕೇತ್ ಗೋಯಲ್ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೆಲವೊಂದು ಸಲಹೆ ನೀಡಿದ್ದಾರೆ. ಬೇಸಿಗೆಯ ಶಾಖವು ಮಕ್ಕಳಿಗರ ಸಾಕಷ್ಟು ಕಿರಿಕಿರಿಯನ್ನುಂಟು ಮಾಡುವುದರಿಂದ ಆಹಾರ ಕಂಡಾಕ್ಷಣ ದೂರ ಓಡುತ್ತಾರೆ. ಬೇಸಿಗೆಯಲ್ಲಿ ನಿಮ್ಮ ಮಗುವನ್ನು ಸಾಂತ್ವನಗೊಳಿಸಲು ನೀವು ಮಾಡಬಹುದಾದ ಕೆಲವು ವಿಷಯಗಳನ್ನು ಡಾ ಗೋಯಲ್ ಸೂಚಿಸುತ್ತಾರೆ:

  • ನಿಮ್ಮ ಮನೆಯನ್ನು ತಂಪಾಗಿರಿಸಿ.
  • ನಿಮ್ಮ ಮಗುವನ್ನು ಹಸಿವನ್ನು ಹೆಚ್ಚಿಸಲು ಮತ್ತು ಚೆನ್ನಾಗಿ ತಿನ್ನಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.
  • ನಿಯಮಿತ ಮಧ್ಯಂತರದಲ್ಲಿ ಸ್ನಾನ ಮಾಡಿಸಿ ಮತ್ತು ಅವರನ್ನು ಉಲ್ಲಾಸಕರವಾಗಿರಿಸಿ.
  • ವಿವಿಧ ಹಣ್ಣುಗಳ ರಸವನ್ನು ಅಥವಾ ಕಲ್ಲಂಗಡಿಯಂತಹ ಅಧಿಕ ನೀರಿನಾಂಶವಿರುವ ಹಣ್ಣುಗಳನ್ನು ನೀಡಿ.

ಇದನ್ನೂ ಓದಿ: ನೇರಳೆ ಹಣ್ಣನ್ನು ಬಳಸಿ ತಯಾರಿಸಬಹುದಾದ 3 ರುಚಿಕರ ಭಾರತೀಯ ಪಾಕವಿಧಾನಗಳು

ಬೇಸಿಗೆಯಲ್ಲಿ ಮಕ್ಕಳನ್ನು ಆರೋಗ್ಯಕರವಾಗಿ ಇರಿಸಲು ಸಲಹೆಗಳು:

1. ನೇರ ಸೂರ್ಯನ ಬೆಳಕನ್ನು ತಪ್ಪಿಸಿ 2. ತಂಪು ಪಾನೀಯಗಳನ್ನು ತಪ್ಪಿಸಿ. 3. ಮಸಾಲೆಯುಕ್ತ, ಕರಿದ ಆಹಾರವನ್ನು ತಪ್ಪಿಸಿ 4. ಕಲ್ಲಂಗಡಿ ಮತ್ತು ಸೌತೆಕಾಯಿಯಂತಹ ನೈಸರ್ಗಿಕ ಮತ್ತು ತಾಜಾ ಹಣ್ಣುಗಳನ್ನು ಸೇವಿಸಿ, ಮೊಸರಿನಂತಹ ಆಹಾರ ಮತ್ತು ನಿಂಬೆ ಪಾನೀಯ ಮತ್ತು ಎಳನೀರು ಕುಡಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: