
ಎಷ್ಟೇ ಕ್ಲೀನ್ ಮಾಡಿ ಇಟ್ಟುಕೊಂಡರು, ಅಡುಗೆ, ಇನ್ನಿತರೆ ಕೆಲಸ ಮಾಡುವಾಗ ಅಡುಗೆ ಮನೆ (Kitchen) ಕೊಳೆಯಾಗುವುದು, ಅದರಲ್ಲೂ ವಿಶೇಷವಾಗಿ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟವ್ (Gas Stove) ಕೊಳೆಯಾಗುವುದು ಮತ್ತು ಬಟ್ಟೆಗಳ (cloths) ಮೇಲೆ ಜಿಡ್ಡು, ಪದಾರ್ಥಗಳ ಕಲೆ ಆಗೋದು ಸಾಮಾನ್ಯ. ಡಿಟರ್ಜಂಟ್‌ನಿಂದ ಎಷ್ಟೇ ಎಷ್ಟೇ ಸ್ಕ್ರಬ್ ಮಾಡಿದರೂ ಆ ಬಟ್ಟೆ ಮೇಲಿನ ಕಲೆ ಹೋಗುವುದಿಲ್ಲ. ಇನ್ನೂ ಗ್ಯಾಸ್ ಸ್ವವ್‌ಗಳನ್ನು ಪ್ರತಿ ಬಾರಿ ಅಡುಗೆ ಮಾಡಿದ ನಂತರ ಕ್ಲೀನ್ ಮಾಡಿದ್ರೂ ಕೂಡಾ ಅದರ ಕೊಳೆ ಮಾತ್ರ ಹೋಗೋದಿಲ್ಲ ಎಂದು ಗೃಹಿಣಿಯರು ಗೊಣಗುತ್ತಿರುತ್ತಾರೆ. ಹೀಗಿರುವಾಗ ಕೆಲವೊಂದು ಸಿಂಪಲ್ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು.
ಕ್ಲೀನಿಂಗ್ ಟಿಪ್ಸ್‌ಗಳಿಗೆ ಸಂಬಂಧಿಸಿದ ಉಪಯುಕ್ತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಜೀನ್ಸ್ ಪ್ಯಾಂಟ್ ಮೇಲಿನ ಕಲೆ, ಗ್ಯಾಸ್ ಸ್ಟವ್ ಮೇಲಿನ ಕೊಳೆ ಹಾಗೂ ಇಸ್ತ್ರಿ ಪೆಟ್ಟಿಗೆಯ ಮೇಲಿನ ಕಲೆಯನ್ನು ಸುಲಭವಾಗಿ ತೆಗೆದು ಹಾಕುವ ಟಿಪ್ಸ್ ನೀಡಲಾಗಿದೆ.
ಇದನ್ನೂ ಓದಿ: ಚಿಕನ್‌ನಿಂದಲೂ ಸಖತ್ ಟೇಸ್ಟಿ ಉಪ್ಪಿನಕಾಯಿ ಮಾಡ್ಬೋದು; ಇಲ್ಲಿದೆ ನೋಡಿ ರೆಸಿಪಿ
Next-Level Cleaning Tips pic.twitter.com/jpLf8QPYYV
— Learn Something (@cooltechtipz) May 6, 2025
ಒಂದು ವೇಳೆ ಜೀನ್ಸ್ ಪ್ಯಾಂಟ್ ಮೇಲೆ ಕಲೆಗಳಾದ್ರೆ ಅದನ್ನು ಡಿಟರ್ಜಂಟ್ ಬಳಸಿ ತಿಕ್ಕಿ ತಿಕ್ಕಿ ಬಣ್ಣ ಮಾಸುವಂತೆ ಮಾಡುವ ಬದಲು ಕಲೆಯಾದ ಜಾಗಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಅದರ ಮೇಲೆ ಪ್ಲೈನ್ ಪೇಪರ್ ಇಟ್ಟು ಇಸ್ತ್ರಿ ಪೆಟ್ಟಿಗೆಯಿಂದ ಸ್ವಲ್ಪ ಬಿಸಿ ಮಾಡಿದರೆ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು.
ಇನ್ನೂ ಗ್ಯಾಸ್ ಸ್ಟವ್ ಮೇಲೆ ಜಿಡ್ಡು ಇನ್ನಿತರೆ ಕೊಳೆಯಾದರೆ ಅದರ ಮೇಲೆ ಸಾಬೂನೂ ನೀರು ಹಾಕಿ ಸ್ಕ್ರಬ್ಬರ್‌ನಿಂದ ನಿಧಾನಕ್ಕೆ ತಿಕ್ಕಿದರೆ ಕೊಳೆ ತೆಗೆದು ಹಾಕಬಹುದು. ಒಂದು ವೇಳೆ ಬಟ್ಟೆ ಇಸ್ತ್ರಿ ಮಾಡುವಾಗ ಆ ಬಟ್ಟೆಯ ಬಣ್ಣ ಇಸ್ತ್ರಿ ಪೆಟ್ಟಿಗೆಯ ಮೇಲೆ ಅಂಟಿಕೊಂಡರೆ, ಇಸ್ತ್ರಿ ಪೆಟ್ಟಿಗೆಯನ್ನು ಸ್ವಲ್ಪ ಬಿಸಿ ಮಾಡಿ ಕಲೆಯಿರುವ ಜಾಗಕ್ಕೆ ಆಸ್ಪಿರಿನ್ ಮಾತ್ರೆಯನ್ನು ತಿಕ್ಕುವ ಮೂಲಕ ಕಲೆಯನ್ನು ಸುಲಭವಾಗಿ ತೆಗೆದು ಹಾಕಬಹುದು. ಇಂತಹ ಸಿಂಪಲ್ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಸುಲಭವಾಗಿ ಕಲೆ, ಕೊಳೆಗಳನ್ನು ತೆಗೆದುಹಾಕಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ