Kannada News Lifestyle Consuming okra water with honey will definitely bring these 6 changes to your body's health
ಜೇನುತುಪ್ಪದೊಂದಿಗೆ ಬೆಂಡೆಕಾಯಿ ನೀರು ಸೇವನೆ, ದೇಹದ ಆರೋಗ್ಯದಲ್ಲಿ ಈ 6 ಬದಲಾವಣೆ ಖಂಡಿತ
ಬೆಂಡೆಕಾಯಿ ಅನೇಕ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರ ಆಗಿದೆ. ಇದು ದೇಹದ ಆರೋಗ್ಯ ಜತೆಗೆ ಮದುಳಿನ ಆರೋಗ್ಯಕ್ಕೂ ಉತ್ತಮ. ಇದನ್ನು ಬೆಳಿಗ್ಗೆ ನೀರಿಗೆ ಜೇನುತಪ್ಪ ಜತೆಗೆ ಸೇವನೆ ಮಾಡಿದ್ರೆ ಆರೋಗ್ಯದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಯಾವೆಲ್ಲ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಉಂಟಾಗುವ ಅಡ್ಡಪರಿಣಾಗಳೇನು? ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಬೆಂಡೆಕಾಯಿ ಆರೋಗ್ಯಕ್ಕೆ ಬ್ರಹ್ಮಸ್ತ್ರ, ಮನುಷ್ಯನ ದೇಹದಲ್ಲಿ ಉತ್ಪಾತಿಯಾಗುವ ಕೆಟ್ಟ ಅಂಶಗಳನ್ನು ದೂರ ಮಾಡುವ ಶಕ್ತಿ ಬೆಂಡೆಕಾಯಿಗೆ ಇದೆ. ಬೆಂಡೆಕಾಯಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ಆರೋಗ್ಯದಲ್ಲಿ ಇನ್ನು ಹೆಚ್ಚಿನ ಬದಲಾವಣೆಯನ್ನು ತರುತ್ತದೆ. ಇದರ ಜತೆ ಇದಕ್ಕೆ ಜೇನುತುಪ್ಪ ಹಾಕಿ ಕುಡಿದರೆ ಅಥವಾ ತಿಂದರೆ ಹೆಚ್ಚಿನ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರಮುಖವಾಗಿ ಇದನ್ನು ಬೆಳಿಗ್ಗೆ ಸೇವನೆ ಮಾಡುವುದು ಇನ್ನು ಉತ್ತಮ. ಪ್ರತಿದಿನ ಇದನ್ನು ಮಾಡಿದ್ರೆ ದೇಹದಲ್ಲಿ ಯಾವೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ಗಮನಿಸಿ.
ಜೇನುತುಪ್ಪದೊಂದಿಗೆ ಬೆಂಡೆಕಾಯಿ ನೀರು ಕುಡಿದ್ರೆ ಒಳ್ಳೆಯದು, ಹಾಗೂ ಆಯುರ್ವೇದದ ಮತ್ತು ಆಧುನಿಕ ವಿಜ್ಞಾನ ಎರಡರಿಂದಲೂ ಇದು ಸಾಂಪ್ರದಾಯಿಕ ಪರಿಹಾರ ಎಂದು ಪ್ರಮಾಣಿತ ಗೊಂಡಿದೆ ಎಂದು ಪೌಷ್ಟಿಕತಜ್ಞೆ ಮತ್ತು ಕ್ಷೇಮ ತರಬೇತುದಾರ ಇಶಾ ಲಾಲ್ indianexpress ಜತೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಜೇನುತುಪ್ಪದೊಂದಿಗೆ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ 6 ಪ್ರಯೋಜನ:
ಕರುಳಿನ ಆರೋಗ್ಯ ಮತ್ತು ಉತ್ತಮ ಜೀರ್ಣಕ್ರಿಯೆ: ಬೆಂಡೆಕಾಯಿಯಲ್ಲಿ ಕರಗುವ ನಾರುಗಳಿದ್ದು, ಇದರಲ್ಲಿ ಲೋಳೆಯು ಸಮೃದ್ಧವಾಗಿದೆ. ಇದನ್ನು ನೀರಿನಲ್ಲಿ ನೆನೆಸಿದಾಗ ಜೆಲ್ ತರಹದ ಸ್ಥಿರತೆಯನ್ನು ಸೃಷ್ಟಿಸುತ್ತದೆ. ಇದು ಕರುಳಿನ ಒಳಪದರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಶಮನಗೊಳಿಸುತ್ತದೆ, ಮತ್ತು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವ ಜನರಿಗೆ ಪ್ರಯೋಜನಕಾರಿಯಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಬೆಂಡೆಕಾಯಿ ನೀರು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಅಂಶವಿದೆ.ಬೆಂಡೆಕಾಯಿಯಲ್ಲಿರುವ ಮೈರಿಸೆಟಿನ್ ಮತ್ತು ಫ್ಲೇವನಾಯ್ಡ್‌ಗಳಂತಹ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಚರ್ಮ ಕಾಂತಿ ಮತ್ತು ಯುವಕರಂತೆ ಕಾಣುವಂತೆ ಮಾಡುತ್ತದೆ: ಬೆಂಡೆಕಾಯಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳಿಂದ ತುಂಬಿದ್ದು, ಇದು ಚಿರ ಯುವಕರಂತೆ ಕಾಣುವಂತೆ ಮಾಡುತ್ತದೆ. ಬೆಂಡೆಕಾಯಿಯಲ್ಲಿರುವ ಲೋಳೆಯು ಚರ್ಮವನ್ನು ಒಳಗಿನಿಂದ ಹೈಡ್ರೇಟ್ ಮಾಡುತ್ತದೆ, ಆದರೆ ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಕಾಂತಿಯುತ ಹೊಳಪನ್ನು ಉತ್ತೇಜಿಸುತ್ತದೆ.
ತೂಕ ನಿರ್ವಹಣೆ: ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ಫೈಬರ್ ಅಂಶವು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹಸಿವಿನ ಹಂಬಲವನ್ನು ಕಡಿಮೆ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಬೆಳಿಗ್ಗೆ ಇದರ ಜತೆಗೆ ಜೇನುತುಪ್ಪವನ್ನು ಸೇವಿಸಿದಾಗ, ಅದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
ಹೃದಯದ ಆರೋಗ್ಯ: ಬೆಂಡೆಕಾಯಿಯ ಲೋಳೆಯು ಕೊಲೆಸ್ಟ್ರಾಲ್ನ್ನು ಕಡಿಮೆ ಮಾಡುತ್ತದೆ. LDL (Low-density lipoprotein) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಂಡೆಕಾಯಿ ಮತ್ತು ಜೇನುತುಪ್ಪ ಎರಡೂ ಉರಿಯೂತನ ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ .ಜೇನುತುಪ್ಪವು ಋತುಮಾನದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಆಂಟಿಮೈಕ್ರೊಬಿಯಲ್ ಪ್ರಯೋಜನ ಹೊಂದಿದೆ.
ಪ್ರೇಮ ವಿವಾಹ ಅಥವಾ ಕೋರ್ಟ್ ಮ್ಯಾರೇಜ್ ಆಗಲು ಈ ದಾಖಲೆಗಳು ಬೇಕೇ ಬೇಕು
ಪರಶುರಾಮರ ಬಗೆಗಿನ ಆಸಕ್ತಿದಾಯಕ ಕಥೆಗಳು
ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸುವ ಉದ್ದೇಶವೇನು?
ಮೇ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ಅಡ್ಡಪರಿಣಾಮಗಳು:
ಜೀರ್ಣಕ್ರಿಯೆಯ ಸಮಸ್ಯೆಗಳು
ಅಲರ್ಜಿಯ ಪ್ರತಿಕ್ರಿಯೆಗಳು
ರಕ್ತದಲ್ಲಿನ ಸಕ್ಕರೆ ಇಳಿಕೆ
ಹೆಚ್ಚುವರಿ ಲೋಳೆಯ ಉತ್ಪಾದನೆ
ಜೇನುತುಪ್ಪದೊಂದಿಗೆ ಬೆಂಡೆಕಾಯಿ ನೀರು ಪ್ರಯೋಜನಕಾರಿಯಾಗಿದ್ದರೂ, ಪ್ರತಿದಿನ ಸೇವನೆ ಮಾಡುುದು ಎಲ್ಲರಿಗೂ ಸೂಕ್ತವಲ್ಲದಿರಬಹುದು. ಬೆಂಡೆಕಾಯಿ ತಂಪಾಗಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು. ಈ ಸಮಸ್ಯೆ ಇರುವವರಿಗೆ ಅತಿಯಾದ ಸೇವನೆಯು ಸೂಕ್ತವಲ್ಲ ಎಂದು ಇಶಾ ಲಾಲ್ ಹೇಳಿದ್ದಾರೆ.