ನಾವೆಲ್ಲರೂ ಖಂಡಿತವಾಗಿಯೂ ಒಂದಿಲ್ಲ ಒಂದು ದಿನ ಲವ್ (Love) ಬಿದ್ದಿರುತ್ತೇವೆ. ಕಡೆ ಪಕ್ಷ ಕ್ರಷ್ ಅಂತು ಆಗಿರುತ್ತೆ. ಒಂದು ಹಂತದಲ್ಲಿ ಪ್ರೀತಿಯಲ್ಲಿ ಬೀಳುವುದು ನಿಶ್ಚಿತ. ಪ್ರೀತಿಗೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಉತ್ತಮ ಗುಣ, ರೂಪ, ಸೌಂದರ್ಯ ಯಾರೊಂದಿಗಾದರೂ ಸಂಪರ್ಕ ಹೊಂದುತ್ತದೆ. ಪ್ರೀತಿ ಒಂದು ಸುಂದರ ಭಾವ. ಅದಕ್ಕೆ ಬೀಳಬೇಕು. ಅದೇ ಸಮಯದಲ್ಲಿ ನಾವು ಪ್ರೀತಿಸುವವರಿಂದ ನಾವು ಇಷ್ಟಪಡುತ್ತೇವೆ. ಇದಕ್ಕಾಗಿ ನಿಮ್ಮ ಪ್ರೀತಿಪಾತ್ರರನ್ನು ನಿಮ್ಮ ಕಡೆಗೆ ಆಕರ್ಷಿಸಲು ನೀವು ಅನೇಕ ಪ್ರಯತ್ನಗಳನ್ನು ಮಾಡಬಹುದು. ನೀವೂ ಕೂಡ ಹುಡುಗಿಯನ್ನು ಈ ರೀತಿ ಇಂಪ್ರೆಸ್ ಮಾಡಲು ಯೋಚಿಸುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ಎಚ್ಚರದಿಂದಿರಬೇಕು. ಏಕೆಂದರೆ ಹುಡುಗಿಯರನ್ನು ಮೆಚ್ಚಿಸುವುದು ಅಷ್ಟು ಸುಲಭವಲ್ಲ. ಈಗ ನೀವು ಹುಡುಗಿಯನ್ನು ಹೇಗೆ ಇಂಪ್ರೆಸ್ ಮಾಡಬಹುದು ಎನ್ನುವುದಕ್ಕೆ ಇಲ್ಲಿ ಕೆಲ ಟಿಪ್ಸ್ಗಳಿವೆ ನೋಡಿ.
ನಿಮ್ಮ ಹುಡುಗಿಯನ್ನು ಈ ರೀತಿ ಇಂಪ್ರೆಸ್ ಮಾಡಿ:
ಕೂದಲು – ಗಡ್ಡ:
ಹುಡುಗಿಯರು ಮೊದಲು ಕೂದಲು ಮತ್ತು ಗಡ್ಡಕ್ಕೆ ಆಕರ್ಷಿತರಾಗುತ್ತಾರೆ. ನಿಮ್ಮ ಗಡ್ಡವನ್ನು ಹೇಗೆ ಇಟ್ಟುಕೊಳ್ಳುತ್ತೀರಿ? ಹೆಚ್ಚಿನ ಹುಡುಗರಲ್ಲಿ ಹುಡುಗಿಯರು ಗಮನಿಸುವ ವಿಷಯ. ಹೌದು, ನೀವು ಗಡ್ಡವನ್ನು ಹೊಂದಿದ್ದರೆ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಮತ್ತೊಂದೆಡೆ ನೀವು ಉದ್ದ ಕೂದಲು ಹೊಂದಿದ್ದರೆ, ಕೂದಲನ್ನು ಸ್ವಚ್ಛವಾಗಿಡಿ. ಆಗಾಗ ತಲೆ ಸ್ನಾನ ಮಾಡಿ.
ಕೈಗಳು:
ಇದು ನಿಮಗೆ ನಗು ತರಿಸಬಹುದು ಅಥವಾ ವಿಚಿತ್ರವಾಗಿ ಕಾಣಿಸಬಹುದು. ಆದರೆ ಹುಡುಗಿಯರು ನಿಮ್ಮ ಕೈಗಳನ್ನು ಸಹ ಗಮನಿಸುತ್ತಾರೆ. ಹೌದು ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಕತ್ತರಿಸಬೇಕು. ಅಲ್ಲದೆ, ನಿಮ್ಮ ಕೈಗಳು ಒಣಗದಂತೆ ನೋಡಿಕೊಳ್ಳಿ.
ಡ್ರೆಸ್ಸಿಂಗ್ ಸ್ಟೈಲ್:
ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಎಂದರೆ ನೀವು ಧರಿಸುವ ರೀತಿ ಚೆನ್ನಾಗಿರಬೇಕು. ಆಕರ್ಷಕ ಡ್ರೆಸ್ ಸೆನ್ಸ್ ಹೊಂದಿರಬೇಕು. ಇದು ಯಾವುದೇ ಹುಡುಗಿಯನ್ನು ಮೆಚ್ಚಿಸುತ್ತದೆ. ಏಕೆಂದರೆ ಅನೇಕ ಹುಡುಗಿಯರು ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನೀವು ಯಾರನ್ನಾದರೂ ಮೆಚ್ಚಿಸಲು ಅಥವಾ ಆಕರ್ಷಿಸಲು ಯೋಜಿಸುತ್ತಿದ್ದರೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಗಮನ ಕೊಡಿ.
ಫಿಟ್ನೆಸ್:
ಫಿಟ್ನೆಸ್ ಬಹಳ ಮುಖ್ಯ ಏಕೆಂದರೆ ಹುಡುಗಿ ಒಬ್ಬ ಹುಡುಗನಲ್ಲಿ ಗಮನಿಸುವ ಮೊದಲ ವಿಷಯವೆಂದರೆ ನೀವು ನಿಮ್ಮನ್ನು ಫಿಟ್ ಆಗಿರಿಸಿಕೊಳ್ಳುತ್ತೀರಾ ಅಥವಾ ಇಲ್ಲವೇ ಎಂಬುದು. ಇದಕ್ಕಾಗಿ ವ್ಯಾಯಾಮ ಅಥವಾ ಜಿಮ್ಗೆ ಹೋಗುವುದರಿಂದ ಫಿಟ್ ದೇಹವನ್ನು ಪಡೆಯಬಹುದು ಜೊತೆಗೆ ಆರೋಗ್ಯವಾಗಿರಬಹುದು. ಹುಡುಗಿಯನ್ನು ಮೆಚ್ಚಿಸಲು ಈ ಕೆಲಸವು ತುಂಬಾ ಸಹಾಯ ಮಾಡುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.