ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಈ ಉಮ್ಮತ್ತಿ ಗಿಡ ಅಥವಾ ದತ್ತೂರಿ ಗಿಡವನ್ನು ಔಷಧವಾಗಿ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಎಲ್ಲೆಂದರಲ್ಲಿ ಬೆಳೆಯುವ ಈ ಸಸ್ಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಗಿಡವೂ ಔಷಧೀಯ ಗುಣಗಳ ಅಗರವಾಗಿದ್ದರೂ ಇದರ ಕಾಯಿಗಳು ಚೆಂಡಿನಾಕಾರದಲ್ಲಿದ್ದು ಮುಳ್ಳಿನಿಂದ ಕೂಡಿದ್ದು, ಇದು ಬಹಳಷ್ಟು ವಿಷಕಾರಿಯಾಗಿದೆ. ಆದರೆ, ಈ ಸಸ್ಯವನ್ನು ಚರ್ಮದಿಂದ ಹಿಡಿದು ತಲೆನೋವಿನ ಸಮಸ್ಯೆಗೆ ಮನೆ ಮದ್ದಾಗಿ ಬಳಕೆ ಮಾಡಲಾಗುತ್ತದೆ.
- ಕಾಲು ನೋವು, ಕೀಲು ನೋವಿನಂತಹ ಸಮಸ್ಯೆಗೆ ಉಮ್ಮತ್ತಿ ಎಲೆಗೆ ಎಳ್ಳೆಣ್ಣೆ ಹಚ್ಚಿ ಸ್ವಲ್ಪ ಬಿಸಿ ಮಾಡಿ ನೋವು ಇರುವಲ್ಲಿ ಇಟ್ಟುಕೊಂಡರೆ ನೋವು ಶಮನವಾಗುತ್ತದೆ.
- ತಲೆನೋವು ಮತ್ತು ಮೈಗ್ರೇನ್ ತಲೆನೋವಿಗೆ ಈ ಎಲೆಗಳನ್ನು ಎಳ್ಳೆಣ್ಣೆಯೊಂದಿಗೆ ಬಿಸಿ ಮಾಡಿ ಹಣೆಯ ಮೇಲೆ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.
- ಉಮ್ಮತ್ತಿ ಎಲೆಗಳ ರಸವನ್ನು ತುರಿಕೆ ಮತ್ತು ಹುಣ್ಣುಗಳ ಮೇಲೆ ಹಚ್ಚಿದರೆ ಬೇಗನೇ ಗುಣವಾಗುತ್ತದೆ.
- ಮಂಗನ ಬಾವು ಕಾಯಿಲೆಗೆ ಉಮ್ಮತ್ತಿ ಎಲೆಯನ್ನು ಚೆನ್ನಾಗಿ ಅರೆದು ಬಾವು ಅದಲ್ಲಿಗೆ ಹಚ್ಚಿದರೆ ಗುಣಮುಖವಾಗುತ್ತದೆ.
- ಆಕಳಲ್ಲಿ ಕಾಣುವ ಕೆಚ್ಚಲು ಬಾವು ಸಮಸ್ಯೆಗೆ ಈ ಸಸ್ಯದ ಎಲೆಯನ್ನು ಶುದ್ಧ ಹಸುವಿನ ಹಾಲು ಹಾಗೂ ಜೀರಿಗೆ ಹಾಕಿ ಅರೆದು ಕೆಚ್ಚಲಿಗೆ ಹಚ್ಚುವುದರಿಂದಬಾವು ಕಡಿಮೆಯಾಗುತ್ತದೆ.
- ತಲೆಯಲ್ಲಿ ಹೇನು, ಹುಣ್ಣು ಇರುವವರು ಈ ಎಲೆಗಳ ರಸವನ್ನು ಆಲದ ಎಣ್ಣೆಗೆ ಬೆರೆಸಿ ಹಚ್ಚಿದರೆ ಈ ಸಮಸ್ಯೆಗಳು ದೂರವಾಗುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: