
ಅತ್ತೆ-ಸೊಸೆ (daughter-in-law mother-in-law) ಜಗಳ ಕಾಮನ್. ಪ್ರತಿಯೊಂದು ಮನೆಯಲ್ಲೂ ಕೂಡಾ ಹೆಚ್ಚಾಗಿ ಅತ್ತೆ ಸೊಸೆಯ ನಡುವೆ ಜಟಾಪಟಿಗಳು ನಡೆಯುತ್ತಲೇ ಇರುತ್ತವೆ. ಅತ್ತೆಯ ಮಾತುಗಳು, ನಡವಳಿಕೆ ಸೊಸೆಗೆ ಕಿರಿಕಿರಿ ಉಂಟು ಮಾಡಿದ್ರೆ, ಸೊಸೆಯ ವರ್ತನೆ ಅತ್ತೆಗೆ ಕೋಪ ತರಿಸುತ್ತದೆ. ಹೀಗೆ ಅಡುಗೆ, ಮನೆ ಕೆಲಸ ಸೇರಿದಂತೆ ಸಣ್ಣಪುಟ್ಟ ವಿಷಯಗಳಿಗೂ ಅತ್ತೆ ಸೊಸೆಯಂದಿರ ನಡುವೆ ಮನಸ್ತಾಪ, ಜಗಳಗಳು (quarrel) ನಡೆಯುತ್ತಲೇ ಇರುತ್ತವೆ. ಕೆಲವೊಂದು ಬಾರಿ ಈ ಸಣ್ಣ ಜಗಳಗಳು ಬೀದಿ ರಂಪ ಆಗೋದು ಕೂಡ ಇದೆ. ಹೀಗಿರುವಾಗ ಸೊಸೆಯಾದವಳು ಈ ಒಂದಷ್ಟು ಸಲಹೆಗಳನ್ನು ಪಾಲಿಸಿದ್ರೆ ಜಗಳಗಳು ಕೂಡಾ ಏರ್ಪಡುವುದಿಲ್ಲ ಜೊತೆಗೆ ಮನೆಯಲ್ಲಿ ಶಾಂತಿ ಎನ್ನುವಂತಹದ್ದು ನೆಲೆಸುತ್ತದೆ. ಹಾಗಿದ್ರೆ ಅತ್ತೆಯೊಂದಿಗೆ ಜಗಳವಾಗಬಾರದೆಂದರೆ ಸೊಸೆಯಾದವಳು ಹೇಗಿರಬೇಕು ಎಂಬುದನ್ನು ನೋಡೋಣ ಬನ್ನಿ.
ತಪ್ಪುಗಳನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ: ಸೊಸೆ ಏನಾದ್ರೂ ತಪ್ಪು ಮಾಡಿದ್ರೆ ಖಂಡಿತವಾಗಿಯೂ ಅತ್ತೆ ಕೋಪ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ನಿಮ್ಮ ತಪ್ಪುಗಳಿಗೆ ಅತ್ತೆ ಕೋಪ ಮಾಡಿಕೊಂಡಿದ್ದರೆ, ಆ ತಪ್ಪು ಹಾಗೂ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವ ಬದಲು, ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ ಜೊತೆಗೆ ಸಮಸ್ಯೆಗೆ ಇಬ್ಬರೂ ಕುಳಿತು ಪರಿಹಾರ ಕಂಡುಕೊಳ್ಳಿ.
ಪ್ರತಿ ಸಣ್ಣ ವಿಷಯವನ್ನೂ ಗಂಡನ ಬಳಿ ಹೇಳಬೇಡಿ: ಕೆಲವರು ಅತ್ತೆಯ ದೂರುಗಳನ್ನು, ಮನೆಯಲ್ಲಿ ನಡೆಯುವ ಸಣ್ಣಪುಟ್ಟ ವಿಚಾರಗಳ ಬಗ್ಗೆಯೂ ಗಂಡನ ಬಳಿ ಚಾಡಿ ಹೇಳುತ್ತಾರೆ. ಹೀಗೆ ನೀವು ಪ್ರತಿನಿತ್ಯವೂ ಚಾಡಿ ಹೇಳಿದರೆ, ಅಮ್ಮ ಮಗನ ನಡುವೆಯೇ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಜೊತೆಗೆ ಅಮ್ಮ ಮಗನನ್ನು ದೂರ ಮಾಡಿದ ಆರೋಪವೂ ನಿಮ್ಮ ಮೇಲೆ ಬರುತ್ತದೆ. ಹಾಗಾಗಿ ಅತ್ತೆ ಸೊಸೆ ನೀವು ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಎಲ್ಲದಕ್ಕೂ ಕೋಪ ಮಾಡಿಕೊಳ್ಳಬೇಡಿ: ಕೆಲವರು ಅತ್ತೆ ಏನೇ ಹೇಳಿದ್ರೂ ಕೋಪ ಮಾಡಿಕೊಳ್ಳುತ್ತಾರೆ. ಹಿರಿಯರು ನಿಮ್ಮ ಒಳ್ಳೆಯದಕ್ಕಾಗಿಯೇ ಎಲ್ಲವನನ್ನು ಹೇಳುತ್ತಾರೆ. ಆದರೆ ಅವರು ಹೇಳುವ ರೀತಿ ಸ್ಪಲ್ಪ ಕಠಿಣವಾಗಿರಬಹುದು. ಅದಕ್ಕೆಲ್ಲಾ ನೀವು ಕೋಪ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಹೀಗೆ ಅತ್ತೆ ಹೇಳಿದ ಪ್ರತಿಯೊಂದು ವಿಷಯಕ್ಕೂ ಕೋಪ ಮಾಡಿಕೊಂಡರೆ ನಿಮ್ಮ ಹಾಗೂ ಅತ್ತೆಯ ನಡುವಿನ ಅಂತಹ ಇನ್ನಷ್ಟು ಹೆಚ್ಚಾಗುತ್ತದೆ.
ಇದನ್ನೂ ಓದಿ: ತಂದೆಯಾದವನು ತನ್ನ ಮಗಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ
ಕೋಪದಲ್ಲಿ ಮಾತನಾಡಬೇಡಿ: ಅತ್ತೆ ಏನಾದ್ರೂ ಹೇಳಿದ್ರೆ ಅದಕ್ಕೆಲ್ಲಾ ಕೋಪ ಮಾಡಿಕೊಳ್ಳಬೇಡಿ ಅಥವಾ ಕೋಪದಲ್ಲಿ ಅವರ ಮೇಲೆ ರೇಗಾಡಬೇಡಿ. ಹೀಗೆ ಮಾಡುವುದರಿಂದ ಜಗಳ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅತ್ತೆ-ಮಾವ ಏನೇ ಹೇಳಿದರೂ ಕೋಪ ಮಾಡಿಕೊಳ್ಳಬೇಡಿ. ಇದು ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಅತ್ತೆ-ಮಾವನನ್ನು ಹೆತ್ತವರಂತೆ ನೋಡಿಕೊಳ್ಳಿ: ಮೊದಲು ನೀವು ನಿಮ್ಮ ಅತ್ತೆ ಮಾವನನ್ನು ನಿಮ್ಮ ಹೆತ್ತವರಂತೆ ನೋಡಿಕೊಳ್ಳಲು ಪ್ರಾರಂಭಿಸಿ. ಅತ್ತೆ ಮಾವನನ್ನು ನಿಮ್ಮ ತಂದೆ ತಾಯಿಯಂತೆ ನೋಡಿಕೊಳ್ಳಲು ಪ್ರಾರಂಭಿಸಿದಾಗ ಅರ್ಧದಷ್ಟು ಜಗಳಗಳು ಕೊನೆಗೊಳ್ಳುತ್ತವೆ. ಹೀಗಿದ್ದರೆ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ