Kannada News Lifestyle Deepavali 2024: How to choose the perfect deepavali gifts for your loved ones? Kannada News
Deepavali 2024: ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿಯ ಉಡುಗೊರೆ ನೀಡಿ
ದೀಪಾವಳಿ ಹಬ್ಬವು ಬಂದೇ ಬಿಟ್ಟಿತು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಎಲ್ಲರ ಮನೆಗಳಲ್ಲಿ ಬೆಳಕಿನ ಹಬ್ಬದ ಸಂಭ್ರಮವು ಮನೆ ಮಾಡುತ್ತದೆ. ಮನೆಯ ಹಿರಿಯರು, ಹೆಂಗಳೆಯರು ಹಬ್ಬದ ತಯಾರಿಯಲ್ಲಿ ಬ್ಯುಸಿಯಾಗಿದ್ದರೆ, ಮಕ್ಕಳು ಪಟಾಕಿ ಹೊಡೆಯಲು ಕಾತುರರಾಗಿದ್ದಾರೆ. ಈ ಬಾರಿಯ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಆತ್ಮೀಯರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ ಈ ಕೆಲವು ಗಿಫ್ಟ್ ಗಳು ನೀಡುವುದು ಉತ್ತಮ. ಹಾಗಾದ್ರೆ ಈ ಬಾರಿಯ ಹಬ್ಬಕ್ಕೆ ಯಾವ ರೀತಿಯ ಉಡುಗೊರೆ ನೀಡಬೇಕು ಎನ್ನುವುದಕ್ಕೆ ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on
ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವು ದಿನಗಳಷ್ಟೇ ಮಾತ್ರ ಬಾಕಿ ಉಳಿದಿವೆ. ಹಿಂದೂಗಳ ಪಾಲಿನ ದೊಡ್ಡ ಹಬ್ಬವಾಗಿರುವ ಈ ದೀಪಾವಳಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅನೇಕರು ದೀಪಾವಳಿ ಹಬ್ಬದಂದು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ನೀಡುವ ಮೂಲಕ ಖುಷಿ ಪಡಿಸುತ್ತಾರೆ. ನಿಮ್ಮ ಪ್ರೀತಿ ಪಾತ್ರರ ಇಷ್ಟ ಹಾಗೂ ಅಭಿರುಚಿ ಬಗ್ಗೆ ನಿಮಗೆ ಚೆನ್ನಾಗಿ ಮಾಹಿತಿ ಇರುತ್ತದೆ. ಅದಕ್ಕೆ ತಕ್ಕಂತಹ ಉಡುಗೊರೆಗಳನ್ನು ಆಯ್ಕೆ ಮಾಡಿದರೆ ಅವರಿಗೆ ಖುಷಿಯಾಗುವುದರಲ್ಲಿ ಸಂಶಯವಿಲ್ಲ.
ಸಾಂಪ್ರದಾಯಿಕತೆ ಉಡುಗೊರೆಗಳು : ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸ್ಪಡುವುದರಿಂದ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡುವುದು ಉತ್ತಮ. ಬಟ್ಟೆ ನೀಡುವುದಾದರೆ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ವಿವಿಧ ವಿನ್ಯಾಸದ ದೀಪ, ಸುವಾಸನೆಯುಕ್ತ ಕ್ಯಾಂಡಲ್, ಅಗರ್ ಬತ್ತಿ ಹಾಗೂ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿದರೆ ನಿಮ್ಮವರಿಗೆ ಇಷ್ಟವಾಗುತ್ತದೆ.
ಹೂವಿನ ಗಿಡಗಳು : ನಿಮ್ಮ ಆತ್ಮೀಯ ವ್ಯಕ್ತಿಯೂ ಪರಿಸರವನ್ನು ಹೆಚ್ಚು ಇಷ್ಟ ಪಡುತ್ತಿದ್ದರೆ ಹೂದೋಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಗಿಡಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಹೂವಿನ ಗಿಡಗಳಲ್ಲದೆ ಅದೃಷ್ಟ ತರುವ ಗಿಡಗಳಾದ ಬಿದಿರಿನ ಗಿಡ, ಸಿಂಗೋನಿಯಂ ಗಿಡ, ಮನಿ ಪ್ಲಾಂಟ್, ಡ್ರಕೇಸಿನ ಪ್ಲಾಂಟ್, ಹರ್ಬಲ್ ಗಿಡಗಳನ್ನ ನೀಡುವುದು ಉತ್ತಮ. ಇವುಗಳ ನಿರ್ವಹಣೆಯೂ ಸುಲಭದಾಯಕವಾಗಿದ್ದು, ಮನೆಯ ಅಂದವನ್ನು ಹೆಚ್ಚಿಸುತ್ತದೆ.
ಬ್ಯೂಟಿ ಹ್ಯಾಂಪರ್ : ನೀವೇನಾದ್ರೂ ಹೆಣ್ಣು ಮಕ್ಕಳಿಗೆ ಗಿಫ್ಟ್ ನೀಡಬೇಕು ಎಂದುಕೊಂಡಿದ್ದರೆ ಅಂತಹವರು ಸೌಂದರ್ಯ ವರ್ಧಕ ಉತ್ಪನ್ನಗಳನ್ನು ನೀಡಬಹುದು ಈ ಬ್ಯೂಟಿ ಹ್ಯಾಂಪರ್‌ಗಳಲ್ಲಿ ಸುಗಂಧ ದ್ರವ್ಯಗಳು, ಕ್ರೀಮ್ ಮತ್ತು ಇತರ ಬ್ಯೂಟಿ ಪ್ರಾಡಕ್ಟ್ ಗಳಿದ್ದು ಹೆಣ್ಣು ಮಕ್ಕಳಿಗೆ ನಿಜಕ್ಕೂ ಇಷ್ಟವಾಗುತ್ತದೆ.
ದೇವರ ವಿಗ್ರಹಗಳು : ನಿಮ್ಮ ಆತ್ಮೀಯ ವ್ಯಕ್ತಿಯ ಮೇಲೆ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತ ಗಣಪತಿ, ಲಕ್ಷ್ಮೀ ಜತೆಗೆ ಅವರಿಷ್ಟದ ದೇವರ ವಿಗ್ರಹವನ್ನೂ ನೀಡಬಹುದು. ಅದಲ್ಲದೇ, ದೀಪಾವಳಿ ಆಚರಣೆಗೆ ಅಗತ್ಯವಾದ ವಸ್ತುಗಳಿಂದ ತಟ್ಟೆ, ಹರಿವಾಣ, ದೀಪಗಳನ್ನು ಉಡುಗೊರೆಯಾಗಿ ನೀಡಬಹುದು.