Nails Care : ಉಗುರು ಪದೇ ಪದೇ ಮುರಿಯದಂತೆ ನೋಡಿಕೊಳ್ಳಲು ಈ ರೀತಿ ಮಾಡಿ
ಪ್ರತಿಯೊಬ್ಬ ಹುಡುಗಿಯೂ ತನಗೆ ಉದ್ದ ಮತ್ತು ಸುಂದರವಾದ ಉಗುರುಗಳು ಇರಬೇಕೆಂದು ಬಯಸುತ್ತಾಳೆ. ಅದಕ್ಕಾಗಿಯೇ ಕೆಲವು ಮಹಿಳೆಯರು ದೊಡ್ಡ ದೊಡ್ಡ ಪಾರ್ಲರ್ ನಲ್ಲಿ ಸಾವಿರಾರು ರೂಪಾಯಿ ಹಣ ವ್ಯರ್ಥ ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ಉಗುರುಗಳನ್ನು ಬಲವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ಕೆಲವು ಮನೆಮದ್ದುಗಳನ್ನು ಮಾಡಬಹುದು. ಇದು ನಿಮ್ಮ ಕೈ ಅಂದವನ್ನು ದುಪ್ಪಟ್ಟು ಮಾಡುವುದಲ್ಲದೆ ಪದೇ ಪದೇ ಉಗುರು ಮುರಿಯದಂತೆ ನೋಡಿಕೊಂಡು ಅವು ಬಲಗೊಳ್ಳಲು ಸಹಾಯ ಮಾಡುತ್ತದೆ.
ನಿಮಗೆ ತಿಳಿದಿರಬಹುದು, ಕೈಗಳ ಸೌಂದರ್ಯದಲ್ಲಿ ಉಗುರುಗಳು ಪ್ರಮುಖ ಪಾತ್ರವಹಿಸುತ್ತವೆ. ಅದಲ್ಲದೆ ಪ್ರತಿಯೊಬ್ಬ ಹುಡುಗಿಯೂ ತನಗೆ ಉದ್ದ ಮತ್ತು ಸುಂದರವಾದ ಉಗುರುಗಳು ಇರಬೇಕೆಂದು ಬಯಸುತ್ತಾಳೆ. ಅದಕ್ಕಾಗಿಯೇ ಕೆಲವು ಮಹಿಳೆಯರು ದೊಡ್ಡ ದೊಡ್ಡ ಪಾರ್ಲರ್ ನಲ್ಲಿ ಸಾವಿರಾರು ರೂಪಾಯಿ ಹಣ ವ್ಯರ್ಥ ಮಾಡುತ್ತಾರೆ. ಆದರೆ ಅದಕ್ಕೂ ಮೊದಲು ಉಗುರುಗಳನ್ನು ಬಲವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ಕೆಲವು ಮನೆಮದ್ದುಗಳನ್ನು ಮಾಡಬಹುದು. ಇದು ನಿಮ್ಮ ಕೈ ಅಂದವನ್ನು ದುಪ್ಪಟ್ಟು ಮಾಡುವುದಲ್ಲದೆ ಪದೇ ಪದೇ ಉಗುರು ಮುರಿಯದಂತೆ ನೋಡಿಕೊಂಡು ಅವು ಬಲಗೊಳ್ಳಲು ಸಹಾಯ ಮಾಡುತ್ತದೆ.
ಮುಖ್ಯವಾಗಿ, ಉಗುರುಗಳನ್ನು ಬಲಪಡಿಸಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಜೀವಸತ್ವಗಳಂತಹ ಪೋಷಕಾಂಶಗಳು ಬೇಕಾಗುತ್ತವೆ. ಇದಕ್ಕಾಗಿ ಸರಿಯಾದ ಆಹಾರವನ್ನು ಅನುಸರಿಸಬೇಕು. ಉಗುರುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವುದು, ರಾಸಾಯನಿಕ ಮತ್ತು ಇನ್ನಿತರ ಸೋಪನ್ನು ಬಳಸುವುದನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ. ಹಾಗಾದರೆ ಉಗುರುಗಳನ್ನು ಯಾವ ರೀತಿಯಲ್ಲಿ, ಹೇಗೆ ಬಲಪಡಿಸಬೇಕು? ಇಲ್ಲಿದೆ ಸರಳ ಮನೆಮದ್ದು.
*ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದನ್ನು ಬಿಸಿ ಮಾಡಿ ಪ್ರತಿದಿನ ಉಗುರುಗಳಿಗೆ ಹಚ್ಚುವ ಮೂಲಕ, ಉಗುರುಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಅದಲ್ಲದೆ ಇದು ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ.
*ವಿಟಮಿನ್ ಸಿ ಉಗುರುಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಉಗುರುಗಳಿಗೆ ನಿಂಬೆ ರಸವನ್ನು ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ಉಗುರುಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ.
*ನಿಯಮಿತವಾಗಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಉಗುರುಗಳಿಗೆ ಮಾಸ್ಕ್ ನಂತೆ ಹಚ್ಚಿ. ಹಾಗೆಯೇ ಆಲಿವ್ ಎಣ್ಣೆ ಕೂಡ ಆರೋಗ್ಯಕರ ಉಗುರುಗಳಿಗೆ ಪ್ರಯೋಜನಕಾರಿಯಾಗಿದೆ. ಇದನ್ನು ಕೂಡ ನಿಯಮಿತವಾಗಿ ಬಳಸಬಹುದು.
*ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಉಗುರುಗಳು ಆರೋಗ್ಯವಾಗಿ ಇರುತ್ತವೆ. ಆದ್ದರಿಂದ, ಪಾಲಕ್, ಮೆಂತ್ಯ, ಬ್ರೊಕೋಲಿಯಂತಹ ತರಕಾರಿಗಳನ್ನು ಸಾಧ್ಯವಾದಷ್ಟು ಸೇವಿಸಿ.
*ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಇದೆ. ಇದು ಉಗುರುಗಳ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಅದಕ್ಕಾಗಿಯೇ ಉಗುರುಗಳಿಗೆ ಬೆಳ್ಳುಳ್ಳಿ ಪೇಸ್ಟ್ ಅಥವಾ ಅದರ ಎಣ್ಣೆಯನ್ನು ಹಚ್ಚುವುದು ಬಹಳ ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ