ಮನೆ ಮುಂದೆ ಈ ಸಸ್ಯಗಳನ್ನು ನೆಟ್ಟರೆ ಇಲಿಗಳ ಕಾಟಕ್ಕೆ ಮುಕ್ತಿ ಗ್ಯಾರಂಟಿ

ಮನೆಯಲ್ಲಿರುವ ರಾಶಿ ರಾಶಿ ಇಲಿಗಳನ್ನು ಓಡಿಸುವುದೇ ಸವಾಲಿನ ಕೆಲಸ. ಈ ಹಂಚಿನ ಮನೆಗಳಲ್ಲಿ ಇಲಿಗಳ ಕಾಟವಂತೂ ವಿಪರೀತವಾಗಿರುತ್ತದೆ. ಅಡುಗೆ ಸಾಮಾಗ್ರಿಯಿಂದ ಹಿಡಿದು , ಫೈಬರ್ ವಸ್ತುಗಳು, ಬಟ್ಟೆ, ಪುಸ್ತಕಗಳು ಹೀಗೆ ಸಿಕ್ಕ ಸಿಕ್ಕಾದೆಲ್ಲವನ್ನು ಕಚ್ಚಿ ತಿಂದು ಚಿಂದಿ ಮಾಡಿರುತ್ತದೆ. ಇಲಿಗಳಿಗೆ ಅಂತ್ಯ ಕಾಣಿಸಲು ಬೋನ್ ತಂದು ಇಲಿ ಹಿಡಿಯಲು ಪ್ರಯತ್ನಿಸುವುದು, ಇಲಿ ಪಾಶನ ಇಡುವುದು ಹೀಗೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಈ ಕೆಲವು ಗಿಡಗಳನ್ನು ನೆಟ್ಟರೆ ಇಲಿಗಳ ಕಾಟದಿಂದ ಮುಕ್ತಿ ಹೊಂದಬಹುದು.

ಮನೆ ಮುಂದೆ ಈ ಸಸ್ಯಗಳನ್ನು ನೆಟ್ಟರೆ ಇಲಿಗಳ ಕಾಟಕ್ಕೆ ಮುಕ್ತಿ ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2024 | 4:54 PM

ಮನೆಗೆ ಕರೆದರೆ ಬರುವ ಅತಿಥಿಯೆಂದರೆ ಅದುವೇ ಈ ಇಲಿಗಳು. ಮನೆಯಲ್ಲಿ ಅತ್ತಿಂದ ಇತ್ತ, ಓಡಾಡುತ್ತ ಕಾಟ ಕೊಡುವ ಇಲಿಗಳನ್ನು ಓಡಿಸುವುದೇ ದೊಡ್ಡ ತಲೆನೋವು. ಒಂದೇ ಒಂದು ಇಲಿಯಿದ್ದು ಬಿಟ್ಟರೆ ಮನೆಯಲ್ಲಿ ರಾಶಿ ರಾಶಿ ಇಲಿಗಳು ಮನೆಯೊಳಗೆ ಎಂಟ್ರಿ ಕೊಡುತ್ತವೆ. ಕೆಲವೊಮ್ಮೆ ಬಟ್ಟೆ, ಅಗತ್ಯ ವಸ್ತುಗಳನ್ನೆಲ್ಲವನ್ನು ಸರ್ವನಾಶ ಮಾಡಿಬಿಟ್ಟಿರುತ್ತವೆ. ನೀವು ಕೂಡ ಈ ಇಲಿಗಳನ್ನು ಮನೆಯಿಂದ ಓಡಿಸಲು ನೀವು ಸಹ ಹಲವಾರು ಟ್ರಿಕ್ಸ್ ಗಳನ್ನು ಟ್ರೈ ಮಾಡಿರಬಹುದು. ಆದರೆ ಈ ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರಂತೂ ಇಲಿಗಳು ಮನೆಯ ಹತ್ತಿರ ಸುಳಿಯುವುದೇ ಇಲ್ಲ.

  • ರೋಸ್ಮರಿ ಸಸ್ಯ : ಇದೊಂದು ಆರೊಮ್ಯಾಟಿಕ್ ಸಸ್ಯವಾಗಿದ್ದು, ಇದು ಕೂದಲ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಈ ಗಿಡದ ಪರಿಮಳವು ಇಲಿಗಳಿಗೆ ಇಷ್ಟವಾಗೋದೇ ಇಲ್ಲ. ನಿಮ್ಮ ಮನೆಯ ಮುಂದೆ ಈ ಸಸ್ಯವನ್ನು ನೆಟ್ಟರೆ ಇಲಿಗಳು ನಿಮ್ಮ ಮನೆಯ ಹತ್ತಿರ ಕೂಡ ಸುಳಿಯಲ್ಲ.
  • ಲ್ಯಾವೆಂಡರ್ ಸಸ್ಯ : ಇದೊಂದು ಪರಿಮಳಯುಕ್ತ ಸಸ್ಯವಾಗಿದ್ದು, ಇದನ್ನು ಮೇಣದ ಬತ್ತಿಗಳು ಮತ್ತು ಸಾರಭೂತ ತೈಲಗಳಲ್ಲಿ ಬಳಸಲಾಗುತ್ತದೆ. ಆದರೆ ಇಲಿಗಳು ಲ್ಯಾವೆಂಡರ್ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಮನೆಯಲ್ಲಿ ಲ್ಯಾವೆಂಡರ್ ಗಿಡವನ್ನು ನೆಟ್ಟರೆ ಈ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತದೆ.
  • ಪುದೀನಾ ಸಸ್ಯ: ಪುದೀನಾ ಎಲೆಗಳಲ್ಲಿ ಕಟುವಾದ ಪರಿಮಳವು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಇಲಿಗಳು ಈ ಸುವಾಸನೆಯೂ ಇಷ್ಟವಾಗುವುದಿಲ್ಲ. ಹೀಗಾಗಿ ಇದನ್ನು ಮನೆಯ ಬಾಗಿಲಲ್ಲಿ ಅಥವಾ ಕಿಟಕಿಗಳ ಬಳಿ ಪುದೀನಾ ಸಸಿಗಳನ್ನು ನೆಡುವುದರಿಂದ ಇಲಿಗಳು ಮನೆಯ ಹತ್ತಿರವೇ ಬರುವುದಿಲ್ಲ.
  • ಚೆಂಡು ಹೂವಿನ ಸಸ್ಯ : ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂವು ನೋಡುವುದಕ್ಕೆ ಎಷ್ಟು ಸುಂದರವೋ, ಇಲಿಗಳನ್ನು ಓಡಿಸಲು ಅಷ್ಟೇ ಪರಿಣಾಮಕಾರಿಯಾಗಿದೆ. ನಿಮ್ಮ ಮನೆಯ ಮುಂಭಾಗದಲ್ಲಿ ಈ ಸಸ್ಯಗಳನ್ನು ನೆಟ್ಟರೆ ಚೆಂಡು ಹೂವಿನ ವಾಸನೆಯು ಇಲಿಗಳಿಗೆ ಆಗಿ ಬರುವುದಿಲ್ಲ, ಹೀಗಾಗಿ ಈ ಕಾಟಕೊಡುವ ಇಲಿಗಳು ಬರುವುದಿಲ್ಲ.
  • ಡ್ಯಾಫೋಡಿಲ್‌ ಗಿಡ : ಈ ಡ್ಯಾಫೋಡಿಲ್ ಸಸ್ಯದ ಹೂವಿನಿಂದ ಹೊರಹೊಮ್ಮುವ ವಿಷಕಾರಿ ವಾಸನೆಯು ಇಲಿಗಳು ಮನೆ ಬಳಿ ಬಾರದಂತೆ ತಡೆಯುತ್ತದೆ. ಹೀಗಾಗಿ ಈ ಗಿಡವನ್ನು ಮನೆಯ ಮುಂಭಾಗದಲ್ಲಿ ನೆಟ್ಟರೆ ಇಲಿಗಳ ಕಾಟವನ್ನು ಸುಲಭವಾಗಿ ತಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ