Miss Diva Universe 2022: ಲಿವಾ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟವನ್ನು ಮುಡಿಗೇರಿಸಿಕೊಂಡ ಮಂಗಳೂರು ಮೂಲದ ದಿವಿತಾ ರೈ

| Updated By: ನಯನಾ ರಾಜೀವ್

Updated on: Aug 29, 2022 | 11:18 AM

Miss Diva Universe 2022: ಮಂಗಳೂರು ಮೂಲದ ದಿವಿತಾ ರೈ, ಲಿವಾ ಮಿಸ್ ದಿವಾ ಯೂನಿವರ್ಸ್​ 2022 (LIVA Miss Diva Universe 2022) ರ ಸೌಂದರ್ಯ ಸ್ಪರ್ಧೆ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Miss Diva Universe 2022: ಲಿವಾ ಮಿಸ್​ ದಿವಾ ಯೂನಿವರ್ಸ್​ 2022 ಕಿರೀಟವನ್ನು ಮುಡಿಗೇರಿಸಿಕೊಂಡ ಮಂಗಳೂರು ಮೂಲದ ದಿವಿತಾ ರೈ
Divita Rai
Image Credit source: Beauty Pageants
Follow us on

ಮಂಗಳೂರು ಮೂಲದ ದಿವಿತಾ ರೈ, ಲಿವಾ ಮಿಸ್ ದಿವಾ ಯೂನಿವರ್ಸ್​ 2022 (LIVA Miss Diva Universe 2022)
ರ ಸೌಂದರ್ಯ ಸ್ಪರ್ಧೆ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022ರ ಪ್ರಶಸ್ತಿ ಕಿರೀಟವನ್ನು ತೊಡಿಸಿದ್ದಾರೆ.

ಕರ್ನಾಟಕದ ದಿವಿತಾ ರೈ ಅವರು ಮಿಸ್‌ ದಿವಾ 2022 ಆಗಿ ಹೊರಹೊಮ್ಮಿದ್ದಾರೆ. ಇವರು 2022ರ ಮಿಸ್‌ ಯೂನಿವರ್ಸ್‌ 2022ಕ್ಕೆ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕರ್ನಾಟಕದ ದಿವಿತಾ ರೈ ಅವರು ಮಿಸ್‌ ದಿವಾ 2022 ಆಗಿ ಹೊರಹೊಮ್ಮಿದರೆ, ತೆಲಂಗಾಣದ ಪ್ರಗ್ನ್ಯಾ ಅಯ್ಯಗರಿ ಅವರು ಲಿವಾ ಮಿಸ್‌ ದಿವಾ ಸೂಪರ್‌ನ್ಯಾಷನಲ್‌ 2022 ಕಿರೀಟವನ್ನು ಪಡೆದಿದ್ದಾರೆ.

ಓಜಸ್ವಿ ಶರ್ಮಾ ಅವರಿಗೆ ಮಿಸ್‌ ಪಾಪ್ಯುಲರ್‌ ಚಾಯ್ಸ್‌ ಆಗಿ ಹೊರಹೊಮ್ಮಿದರು. ಮಿಸ್‌ ಸೂಪರ್‌ನ್ಯಾಷನಲ್‌ ಏಷ್ಯಾ 2022ರ ರಿತಿಕಾ ಖತ್ನಾನಿ ಅವರು ಪ್ರಗ್ನ್ಯಾ ಅಯ್ಯಗರಿ ಅವರಿಗೆ ಕಿರೀಟ ತೊಡಿಸಿದ್ದಾರೆ.

ದಿವಿತಾ ರೈ ಹಿನ್ನೆಲೆ: ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆಯ ಉದ್ಯೋಗದ ಕಾರಣದಿಂದಾಗಿ ದಿವಿತಾ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಬೇಕಾಗಿತ್ತು, ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಅವರು ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್​ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ, ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ.

ಹರ್ನಾಝ್ ಸಂಧು ಅವರು ಕರ್ನಾಟಕದ ಸುಂದರಿ ದಿವಿತಾ ರೈಗೆ ಮಿಸ್‌ ದಿವಾ ಯೂನಿವರ್ಸ್‌ ಕಿರೀಟ ತೊಡಿಸುವುದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ದಿವಿತಾ ರೈಗೆ ತನ್ನ ಕಿರೀಟ ಬಿಚ್ಚಿಕೊಟ್ಟ ಬಳಿಕ 22 ವರ್ಷದ ಹರ್ನಾಜ್‌ ಸಂಧು ಅವರು ತನ್ನ ಬಳಿಕ ಸೌಂದರ್ಯ ಪಟ್ಟ ಗೆದ್ದ ದಿವಿತಾ ಜತೆ ಒಂದು ವಾಕ್‌ ಮಾಡಿದರು.
ಮಿಸ್‌ ದಿವಾ ಇನ್‌ಸ್ಟ್ರಾಗ್ರಾಂ ಪುಟದಲ್ಲಿ ಹರ್ನಾಝ್ ಮಿಸ್ ದಿವಾ ಕಿರೀಟಕ್ಕೆ ಮುತ್ತಿಕ್ಕಿ ಬಳಿಕ ದಿವಿತಾಗೆ ತೊಡಿಸಿದ್ದಾರೆ.
ಹರ್ನಾಜ್‌ ಮತ್ತು ದಿವಿತಾ ಇಬ್ಬರೂ ತಮ್ಮ ಅದ್ಭುತ ಸೌಂದರ್ಯದಿಂದ ಕಂಗೊಳಿಸಿದ್ದಾರೆ.

ಇವರಿಬ್ಬರಿಗೆ ಡಿಸೈನರ್‌ ಗವಿನ್‌ ಮೈಗೆಲ್‌ ಅವರು ಉಡುಗೆ ವಿನ್ಯಾಸ ಮಾಡಿದ್ದಾರೆ. ದಿವಿತಾ ಅವರು ಫುಶಿಯಾ ಪಿಂಕ್‌ ಉಡುಗೆ ತೊಟ್ಟಿದ್ದರೆ, ಹರ್ನಾಜ್‌ ಅವರು ವೈನ್‌ ಕೆಂಪು ಬಣ್ಣದ ಉಡುಗೆಯಲ್ಲಿ ನಳನಳಿಸುತ್ತಿದ್ದರು.

ಹೈಹೀಲ್ಸ್‌, ಸ್ಟೇಟ್‌ಮೆಂಟ್‌ ರಿಂಗ್ಸ್‌, ಆಕರ್ಷಕ ಇಯರಿಂಗ್‌ಗಳ ಜತೆ ದಿವಿತಾ ಸೌಂದರ್ಯ ಕಣ್ಣುಕುಕ್ಕುವಂತಿತ್ತು.
ದಿವಿತಾಳ ಫ್ಯೂಸಿಕಾ ಪಿಂಕ್‌ ಗೌನ್‌ಗೆ ಸುಂದರವಾದ ನೆಕ್ಲೆಸ್‌ ಸಾಥ್‌ ನೀಡಿತ್ತು. ವೃತ್ತಿಯಲ್ಲಿ ಆರ್ಕಿಟೆಕ್ಟ್‌ ಆಗಿರುವ ಇವರಿಗೆ ಬ್ಯಾಂಡ್ಮಿಟನ್‌, ಬಾಸ್ಕೆಟ್‌ಬಾಲ್‌, ಪೇಂಟಿಂಗ್‌ ಇಷ್ಟ. ಕಳೆದ ವರ್ಷವೂ ಇವರು ಮಿಸ್‌ ದಿವಾ ಯೂನಿವರ್ಸ್‌ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Mon, 29 August 22